ಇಸ್ಲಮಾಬಾದ್: ಭಾರತದಲ್ಲಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿದರೆ ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತ ಚರ್ಚೆ ನಡೆಸಲು ಉತ್ತಮ ಅವಕಾಶ ಸಿಗಬಹುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಭಾರತದ ಅಧೀನದಲ್ಲಿರುವ ಕಾಶ್ಮೀರ ವಿವಾದದ ಬಗ್ಗೆ ಒಪ್ಪಂದಕ್ಕೆ ಬರಲು ತಮಗೆ ಹಿಂಜರಿಕೆ ಎಂದೂ ಇಮ್ರಾನ್ ತಿಳಿಸಿದ್ದಾರೆ.
“ಬದಲಾಗಿ ಬಲಪಂಥೀಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ಸಹಮತದ ಒಪ್ಪಂದಕ್ಕೆ ಬರಲು ಸಾಧ್ಯವಾಗಬಹುದು.,’’ ಎಂದು ಇಮ್ರಾನ್ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.
“ಭಾರತದಲ್ಲಿ ಈಗ ನಡೆಯುತ್ತಿರುವುದನ್ನು ನಾನೂ ಊಹಿಸಿರಲಿಲ್ಲ. ಅಲ್ಲಿ ಇಸ್ಲಾಂ ಎಂಬುದೇ ದಾಳಿಗೆ ಒಳಗಾಗುತ್ತಿದೆ” ಎಂದು ಇಮ್ರಾನ್ ಟೀಕಿಸಿದ್ದಾರೆ.
ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮರು ಕೆಲವು ವರ್ಷಗಳ ಹಿಂದೆ ನೆಮ್ಮದಿಯಿಂದ ಇದ್ದರು. ಆದರೆ ಈಗ ಹಿಂದೂ ರಾಷ್ಟ್ರೀಯತೆ ಎಂಬುದು ತೀವ್ರವಾದ ಕಾರಣ ಮುಸ್ಲಿಮರು ಆತಂಕಕ್ಕೊಳಗಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹೊರರಾಜ್ಯ- ನೆರೆರಾಷ್ಟ್ರದವರು ಆಸ್ತಿ ಖರೀದಿಸದಂತೆ ದಶಕಗಳಿಂದ ಇದ್ದ ವಿಶೇಷ ಹಕ್ಕನ್ನು ತೆಗೆದುಹಾಕುವುದಾಗಿ ಬಿಜೆಪಿ ಘೋಷಿಸಿದೆ. ಇದೊಂದು ಅತ್ಯುತ್ತಮ ಕಾಳಜಿಯುತ ನಿರ್ಧಾರವಾಗಿದ್ದು, ಇದು ಮತದಾನದ ಮೇಲೂ ಪ್ರಭಾವ ಬೀರಲಿದೆ ಎಂದಿದ್ದಾರೆ.
ಪ್ರತಿಪಕ್ಷಗಳ ತೀವ್ರ ಟೀಕೆ
ಆದರೆ, ಇಮ್ರಾನ್ ಖಾನ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಭಾರತದಲ್ಲಿ ಭಾರೀ ಸದ್ದು ಮಾಡಿದ್ದು, ಪ್ರತಿಪಕ್ಷಗಳು ‘ಹಾಗಾದರೆ, ಪ್ರಧಾನಿ ಮೋದಿಗೆ ಮತ ಹಾಕುವುದು ಪಾಕಿಸ್ತಾನಕ್ಕೆ ಮತ ಹಾಕಿದಂತೆ’ ಎಂದು ವ್ಯಂಗ್ಯವಾಡಿವೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, “ಪಾಕಿಸ್ತಾನ ಅಧಿಕೃತವಾಗಿ ಮೋದಿ ಜತೆ ಮೈತ್ರಿ ಮಾಡಿಕೊಂಡಿದೆ!. ಮೋದಿಯವರೇ, ಮೊದಲು ನವಾಜ್ ಷರೀಪ್ ಮೇಲೆ ನಿಮಗೆ ಪ್ರೀತಿ ಇತ್ತು , ಈಗ ಇಮ್ರಾನ್ ನಿಮ್ಮ ಆತ್ಮೀತ ಸ್ನೇಹಿತರಾಗಿದ್ದಾರೆ,’’ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.
Pak has officially allied with Modi!
‘A vote for Modi is a vote for Pakistan’, says Pak PM Imran Khan
मोदीजी, पहले नवाज़ शरीफ़ से प्यार और अब ईमरान खान आपका चहेता यार!
ढोल की पोल खुल गयी है।
— Randeep Singh Surjewala (@rssurjewala) April 10, 2019
ಸಿಪಿಎಂ ಅಧ್ಯಕ್ಷ ಸೀತಾರಾಂ ಯೆಚೂರಿ, “ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಏಕೈಕ ವಿಷಯ ಪಾಕಿಸ್ತಾನ. ಅತ್ಯಂತ ಕೀಳು ಮಟ್ಟದಲ್ಲಿ ಈ ವಿಷಯದ ಕುರಿತು ಹೊಗಳಿಕೊಳ್ಳುತ್ತಾ ವಿರೋಧ ಪಕ್ಷಗಳ ಜತೆ ಹೋಲಿಕೆ ಮಾಡುತ್ತಿದೆ. ನಮಗೀಗ ಅರ್ಥವಾಯಿತು ಪಾಕಿಸ್ಥಾನಕ್ಕೆ ಏಕೆ ಮೋದಿ ಪ್ರಧಾನಿಯಾಗಬೇಕಿದೆ ಎಂಬುದು. ಐಎಸ್ ಐ ಅನ್ನು ಭಾರತೀಯ ಸೇನೆಗೆ ಬರಮಾಡಿಕೊಂಡ ಏಕೈಕ ಪ್ರಧಾನಿ ಇವರೇ ಮತ್ತು ಆಹ್ವಾನವೇ ಇಲ್ಲದೆ ಪಾಕಿಸ್ತಾನಕ್ಕೆ ಹೋದ ಏಕೈಕ ಪ್ರಧಾನಿಯೂ ಇವರೇ “ ಎಂದು ಟೀಕಿಸಿದ್ದಾರೆ.
Pakistan has been the only issue of Modi's election campaign, where he has scurriliously tried to link it to opposition. Now we know who Pakistan actually wants as PM, the only Indian PM to have invited ISI to a military base, and the only one who went to Pakistan uninvited. https://t.co/h3coC3W7eo
— Sitaram Yechury (@SitaramYechury) April 10, 2019
In Karnataka all BJP MPS LOOTED to an extent of 80% wealth with in a span of 10 year’s term , where as Congress people about 50% in 60 year’s. About 12 minister’s of BJP MLA’S and others went to jails, find the difference. IN Nehru’s periodical improvement India really reached to this extent. Modi did nothing he wasted our national income without proper distribution and reproduction. Just a BOASTING PRIME MINISTER .