ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಗಳಲ್ಲಿ ಸಾರ್ವಜನಿಕರು ಸಂಚರಿಸಲು ಇಲ್ಲಿನ ಸರ್ಕಾರ ಪ್ರಜೆಗಳಿಗೆ ನೀಡುತ್ತಿರುವ ಪರವಾನಗಿಯ ರೀತಿಯನ್ನು ಕಂಡು ಸ್ಥಳೀಯ ಪ್ರತಿಪಕ್ಷಗಳು ಹಾಗೂ ನಾಗರಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ಸಾರ್ವಜನಿಕರ ಹಸ್ತದ ಮೇಲೆ ಅಧಿಕಾರಿಗಳು ಸ್ಟಾಂಪ್ ಹಾಗೂ ಅನುಮತಿ ಸಹಿ ಹಾಕುವ ಮೂಲಕ ಹೆದ್ದಾರಿಗೆ ಪ್ರವೇಶಿಸಲು ಪರವಾನಗಿ ನೀಡಲಾಗುತ್ತಿದೆ. ಇದು ಇಲ್ಲಿನ ಸ್ಥಳೀಯರು ಸೇರಿದಂತೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಜಮ್ಮು-ಕಾಶ್ಮೀರ ರಾಜ್ಯಪಾಲರ ಆದೇಶದಂತೆ ಮೇ 31ರವರೆಗೆ ಪ್ರತಿ ಬುಧವಾರ ಹಾಗೂ ಭಾನುವಾರ ಸಾರ್ವಜನಿಕರು ಜ-ಕಾ ಹೆದ್ದಾರಿಗೆ ಪ್ರವೇಶಿಸದಂತೆ ಆದೇಶ ಹೊರಡಿಸಿದ್ದರು. ಈ ಆದೇಶದಿಂದ ಹಲವು ಜನಸಾಮಾನ್ಯರು, ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಹಲವರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡಿತ್ತು.
ನಂತರ ಇಲ್ಲಿನ ಸರ್ಕಾರ ಅನುಮತಿ ಪಡೆದು ಪ್ರವೇಶಿಸಲು ಅವಕಾಶ ನೀಡಿದೆ. ಆದರೆ, ಹೆದ್ದಾರಿ ಪ್ರವೇಶಿಸಲು ಅಧಿಕಾರಿಗಳು ನೀಡುತ್ತಿರುವ ಪರವಾನಗಿಯ ರೀತಿ ಮಾತ್ರ ಸಾರ್ವಜನಿಕರಿಗೆ ಆಕ್ರೋಶಕ್ಕೆ ಗುರಿಯಾಗಿದೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ, ಜ-ಕಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಓಮರ್, “ಜ-ಕಾಶ್ಮೀರದ ಹೆದ್ದಾರಿಗಳನ್ನು ಬಳಸಲು ಸರ್ಕಾರ ನೀಡಿರುವ ಅನುಮತಿ ಹೀಗಿದೆ. ಇಲ್ಲಿನ ಪ್ರಜೆಗಳ ಕೈಯಲ್ಲೇ ಸ್ಟಾಂಪ್ ಹಾಗೂ ಅನುಮತಿಯ ಸಹಿಯನ್ನು ಹಾಕಿದ್ದಾರೆ. ಇದರ ಬಗ್ಗೆ ಹೇಗೆ ಪ್ರತಿಕ್ರಯಿಸಬೇಕು ತಿಳಿಯುತ್ತಿಲ್ಲ!. ಹಾಸ್ಯಾಸ್ಪದವಾದ ಇಂತಹ ಕ್ರಮ ಕಾಗದಗಳನ್ನು ಉಳಿಸುವ ಅಣುಕು ಪ್ರಯತ್ನವೇ?. ಜನರನ್ನು ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ರೀತಿಗೆ ನನ್ನ ವಿರೋಧವಿದೆ,’’ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅವರ ಟ್ವೀಟರ್ ಹೇಳಿಕೆ ಇದೀಗ ವೈರಲ್ ಆಗಿದ್ದು, ದೇಶಾದ್ಯಂತ ಜನರು ಅಚ್ಚರಿವ್ಯಕ್ತಪಡಿಸುತ್ತಿದ್ದಾರೆ.
This is how permission is granted to people in J&K to use their highway. Their hands are being stamped & written on. I don’t know what to say! Should we be flippant & mock the attempt at saving paper? I’m just angry at the degrading, inhuman treatment being meted out to people. pic.twitter.com/UWJh0nHhVS
— Omar Abdullah (@OmarAbdullah) April 10, 2019
ಈ ಅಮಾನವೀಯತೆಯ ಬಗ್ಗೆ ಹಲವರು ಸ್ವೀಟ್ ಮೂಲಕ ಟೀಕಿಸಿದ್ದಾರೆ.
Duniya pe aisa waqt parhega
Ki ek din insaan ki talaash main insaan jaega. https://t.co/zKjF4ricGL— Mehbooba Mufti (@MehboobaMufti) April 10, 2019
A civilian granted permission to drive from home to office on the Kashmir highway. The highway magistrate stamp is only valid till next hand wash! It reminds me of a movie from Hitler's era. pic.twitter.com/x1n4rk4hXx
— Peerzada Ashiq (@peerashiq) April 10, 2019
This is Visa to travel on National Highway in Kashmir. @kashmircrownews @JKPC_ @GreaterKashmir @BDUTT pic.twitter.com/L4w1H0Iufj
— SheeRaaZ.ShAfi. (@sheeraazshafi) April 10, 2019
What an epic way to give the permission,thappa lagai ho kya
Whats next@shahfaesal @Shehla_Rashid @mlalangate @OmarAbdullah @MehboobaMufti pic.twitter.com/sQSh0jdJkx
— moosa manzoor (@moosamanzoor111) April 10, 2019
Permission to travel on the highway since it's a Wednesday! 🤦♀️ #HighwayBan #Kashmir https://t.co/XM5KVtQXNR
— Shehla Rashid شہلا رشید (@Shehla_Rashid) April 10, 2019