ದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದೆ ಹಾಗೂ 4 ರಾಜ್ಯಗಳಲ್ಲಿ ಇದೇ ವೇಳೆ ವಿಧಾನಸಭಾ ಚುನಾವಣೆ ಆರಂಭವಾಗಿದೆ.
ಒಟ್ಟು 18 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ 91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ.
ಆಂಧ್ರಪ್ರದೇಶದ 25, ತೆಲಂಗಾಣ 17, ಅರುಣಾಚಲ ಪ್ರದೇಶದ 2, ಅಸ್ಸಾಂ 5, ಬಿಹಾರ 4, ಛತ್ತೀಸ್ ಗಡ 1, ಜಮ್ಮು ಮತ್ತು ಕಾಶ್ಮೀರ 2, ಮಹಾರಾಷ್ಟ್ರ 7, ಮಣಿಪುರ 1, ಮೇಘಾಲಯ 2, ಮಿಜೋರಾಂ 1, ನಾಗಾಲ್ಯಾಂಡ್ 1, ಒಡಿಶಾ 4, ಸಿಕ್ಕಿಂ 1, ತ್ರಿಪುರಾ 1, ಉತ್ರ ಪ್ರದೇಶ 8, ಉತ್ತರಾಖಂಡ 5, ಪಶ್ಚಿಮ ಬಂಗಾಳ 2, ಅಂಡಮಾನ್ 1, ಲಕ್ಷದ್ವೀಪದ ಒಂದು ಕ್ಷೇತ್ರದಲ್ಲಿ ಇಂದು ಮತದಾನ ಆರಂಭವಾಗಿದೆ.
ಏಳು ಹಂತದ ಚುನಾವಣೆಯಲ್ಲಿ ಮೂರನೇ ಅತಿ ದೊಡ್ಡ ಹಂತದ ಚುನವಾಣೆ ಇಂದು ನಡೆಯುತ್ತಿದ್ದು, ಒಟ್ಟು 1279 ಅಭ್ಯರ್ಥಿಗಳಿಗೆ 14 ಕೋಟಿ ಮತದಾರರು ತಮ್ಮ ಮತವನ್ನು ಚಲಾಯಿಸಲಿದ್ದಾರೆ.
ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ ಜತೆಗೇ ವಿಧಾನಸಭಾ ಚುನಾವಣೆಯ ನಿರ್ಣಯವನ್ನೂ ಮತದಾರರು ಇಂದು ನೀಡಲಿದ್ದಾರೆ.