ರಾಯ್ ಬರೇಲಿ: ಯುಪಿಎ ಮುಖ್ಯಸ್ಥೆ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದು ರಾಯ್ ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಸುದ್ದಿಗಾರರ ನರೇಂದ್ರ ಮೋದಿ ಅವರು ಸೋಲರಿಯದ ನಾಯಕರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾಗಾಂಧಿ, “ಸಾಧ್ಯವೇ ಇಲ್ಲ. 2004ರ ಲೋಕಸಭಾ ಚುನಾವಣೆಯನ್ನು ಮರೆಯಬೇಡಿ. ವಾಜಪೇಯಿ ಅವರೂ ಅಜೇಯರೇ ಆಗಿದ್ದರು. ಆದರೆ, ನಾವು ಗೆದ್ದೆವು,’’ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸೋನಿಯಾ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹವನ ನಡೆಸಿ ನಂತರ ರೋಡ್ ಶೋ ನಡೆಸಿದರು. ಈ ವೇಳೆ ಪುತ್ರ ರಾಹುಲ್ ಗಾಂಧಿ ಪುತ್ರಿ ಪ್ರಿಯಾಂಕ ವಾದ್ರಾ ಉಪಸ್ಥಿತರಿದ್ದರು.
ರಾಯ್ ಬರೇಲಿ ಕ್ಷೇತ್ರದಿಂದ ವಿಧಾನಪರಿಷತ್ ನ ಕಾಂಗ್ರೆಸ್ ನ ಮಾಜಿ ಸದಸ್ಯ ದಿನೇಶ್ ಪ್ರತಾಪ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಸೋನಿಯಾ ವಿರುದ್ಧ ಸೆಣೆಸಲಿದ್ದಾರೆ. ಅಲ್ಲದೇ ಬಿಎಸ್ ಪಿ ಮತ್ತು ಸಮಾಜವಾದಿ ಪಕ್ಷದ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಗಮನಾರ್ಹ ಸಂಗತಿ.