ಕೇಂದ್ರ ಸಚಿವೆ ಹಾಗೂ ಅಮೇಥಿಯಿಂದ ಸ್ಪರ್ಧಿಸುತ್ರಿರುವ ಸ್ಮೃತಿ ಇರಾನಿ ಅವರ ‘ಡಿಗ್ರಿ’ ವಿವಾದ ಮತ್ತೆ ಎದ್ದಿದೆ. ಅದಕ್ಕೆ ಮುಖ್ಯ ಕಾರಣ ಸ್ಮೃತಿ ಇರಾನಿ ಪ್ರತೀ ಬಾರಿ ಪ್ರಮಾಣಪತ್ರ ಸಲ್ಲಿಸುವಾಗಲೂ ತಮ್ಮ ಶಿಕ್ಷಣದ ಬಗ್ಗೆ ಹೊಸ ವಿಚಾರಗಳನ್ನು ಬಹಿರಂಗಪಡಿಸುವುದು. ಸ್ಮೃತಿ ಇರಾನಿ ಮೂರು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ ಮೂರೂ ಬಾರಿ ಮೂರು ರೀತಿಯಲ್ಲಿ ತಮ್ಮ ಶಿಕ್ಷಣ ಅರ್ಹತೆಯನ್ನು ಬಹಿರಂಗಪಡಿಸಿದ್ದಾರೆ. ಅವರು ವಿವಾದಕ್ಕೆ ಎಡೆಯಾಗಲು ಮುಖ್ಯ ಕಾರಣವೇ ಇದು.
ಎಷ್ಟೋ ಜನ ಬಹಳ ಬಹಳಷ್ಟು ಕಡಿಮೆ ಶಿಕ್ಷಣ ಪಡೆದೂ ರಾಜಕಾರಣ ಪ್ರವೇಶಿಸುತ್ತಾರೆ, ಮಂತ್ರಿಗಳೂ ಆಗುತ್ತಾರೆ, ಸ್ಮೃತಿ ಇರಾನಿ ಅವರ ಶಿಕ್ಷಣ ಅರ್ಹತೆ ವಿಷಯವೇ ಯಾಕೆ ಪ್ರಾಮುಖ್ಯತೆ ಪಡೆದಿದೆ ಎನ್ನುವ ಪ್ರಶ್ನೆಯೂ ಏಳದೆ ಇರದು. ಪ್ರಾಮುಖ್ಯತೆ ನೀಡಲು ಮುಖ್ಯ ಕಾರಣ ಆಕೆ ಮಾಜಿ ಮಾನವ ಸಂಪನ್ಮೂಲ ಸಚಿವೆ ಅಗಿರುವುದು. ದೇಶದ ಉತ್ಕೃಷ್ಟ ವಿಶ್ವವಿದ್ಯಾಲಯಗಳಲ್ಲಿ ಬದಲಾವಣೆ ಮಾಡುವ, ಇನ್ನಷ್ಟು ಉನ್ನತ ಸ್ಥಿತಿಗೆ ಅವುಗಳನ್ನು ಕೊಂಡೊಯ್ಯುವ ಹೊಣೆ ಹೊತ್ತುಕೊಂಡಿರುವ ಮಾನವ ಸಂಪನ್ಮೂಲ ಸಚಿವಾಲಯದ ಸಚಿವರಾಗಿದ್ದವರು ಸ್ಮೃತಿ ಇರಾನಿ. ಪದವಿಯೇ ಪಡೆಯದ, ಒಬ್ಬ ಸಚಿವೆ ಅಂತಹ ಪ್ರಮುಖ ಸ್ಥಾನದಲ್ಲಿದ್ದು ಏನು ತಾನೇ ಮಾಡಲು ಸಾಧ್ಯ ಎನ್ನುವುದು ಜನಸಾಮಾನ್ಯರಲ್ಲಿದ್ದ ಆತಂಕ. ಅದಕ್ಕೆ ತಕ್ಕಂತೆ ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಸಚಿವೆಯಾಗಿದ್ದಾಗ ಹಲವು ವಿಶ್ವವಿದ್ಯಾಲಯಗಳಲ್ಲಿ ಹಲವು ವಿವಾದಕ್ಕೆ ಕಾರಣವಾದರು ಮತ್ತು ಕೊನೆಗೆ ತಾವೇ ಖುರ್ಚಿ ಬಿಟ್ಟು ಎದ್ದು ಹೋದರು.
ಸದ್ಯ ಅವರ ಶಿಕ್ಷಣದ ಅರ್ಹತೆ ಮತ್ತೆ ಸುದ್ದಿಯಾಗಲು ಕಾರಣ ಅವರು 2019ನೇ ಲೋಕಸಭಾ ಚುನಾವಣೆಗೆ ಸಲ್ಲಿಸಿದ ಅಫಿದಾವತ್ನಲ್ಲಿ ತಾವು ಪದವಿ ಪಡೆದಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುವುದು. ಹಿಂದೆಲ್ಲಾ ಅವರು ತಾವು ಪದವಿ ಪಡೆದಿರುವುದಾಗಿ ಹೇಳುತ್ತಲೇ ಬಂದಿದ್ದರು. ಗುರುವಾರ ಅಮೇಥಿಯಿಂದ ಲೋಕಸಭಾ ಸ್ಥಾನದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಅತ್ಯುನ್ನತ ಶಿಕ್ಷಣ ಅರ್ಹತೆಯೆಂದರೆ ದೆಹಲಿ ವಿಶ್ವವಿದ್ಯಾಲಯದಿಂದ 1994ರಲ್ಲಿ ಬಿಕಾಂ ಭಾಗ 1 ಪೂರ್ಣಗೊಳಿಸಿರುವುದಾಗಿಯೂ ತಮ್ಮ ಡಿಗ್ರಿ ಪೂರ್ಣಗೊಂಡಿಲ್ಲ ಎಂದೂ ಅದರಲ್ಲಿ ದಾಖಲಿಸಿದ್ದಾರೆ. 2004 ರಲ್ಲಿ ಅವರು ದೆಹಲಿಯ ಚಾಂದಿನಿ ಚೌಕ್ನಿಂದ ಸ್ಪರ್ಧಿಸಿದಾಗ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ 1996ರಲ್ಲಿ ತಾವು ಬಿಎ ಪದವಿ (ಕರೆಸ್ಪಾಂಡೆನ್ಸ್) ಪೂರ್ಣಗೊಳಿಸಿದ್ದಾಗಿ ಬರೆದಿದ್ದರು. ಹಾಗಿದ್ದರೆ 2004 ರಲ್ಲಿ ಇದ್ದ ಪದವಿಯನ್ನು ಈಗ ಸ್ಮೃತಿ ಬಿಟ್ಟುಕೊಟ್ಟಿದ್ದೇಕೆ? ಅಲ್ಲದೆ ಆಗ ಕಲಾ ಪದವಿ ಇದ್ದದ್ದು, ಈಗ ವಾಣಿಜ್ಯ ಪದವಿ ಆಗಿದ್ದು ಹೇಗೆ ಎನ್ನುವ ಪ್ರಶ್ನೆಗಳು ಏಳುತ್ತವೆ. 2014ರಲ್ಲಿ ಟಾಕ್ ಶೋ ಒಂದರಲ್ಲಿ ಸ್ಮೃತಿ ಇರಾನಿ ಬಳಿ ತಮ್ಮ ಪದವಿಯ ಬಗ್ಗೆ ಮಾಧ್ಯಮ ನಿರೂಪಕರೊಬ್ಬರು ಕೇಳಿದಾಗ ಅವರು ತಮ್ಮ ಬಳಿ ಯಾಲೆ ವಿಶ್ವವಿದ್ಯಾಲಯದಿಂದ ಪಡೆದ ‘ನಾಯಕತ್ವ’ಕ್ಕೆ ಸಂಬಂಧಿಸಿದ ಪದವಿ ಇದೆ ಎಂದು ಹೇಳಿದ್ದರು.
ಇಂಡಿಯಾ ಟಿವಿಯ ರಾಹುಲ್ ಕನ್ವಾಲ್ ಈ ಕುರಿತು ಇರಾನಿಯವರನ್ನು ಪ್ರಶ್ನಿಸಿದ್ದಾಗ, ಅದಕ್ಕೆ ಉತ್ತರಿಸಿದ್ದ ಇರಾನಿ, ನೋಡಿ ರಾಹುಲ್ ಜನ ನನ್ನನ್ನು ಅನಕ್ಷರಸ್ಥೆ ಅಂತಾರೆ, ಆದರೆ ನನಗೆ ಯಾಲೆ ಯೂನಿವರ್ಸಿಟಿ ಪದವಿ ನೀಡಿರುವ ದಾಖಲೆ ಇದೆ. ನನ್ನ ನಾಯಕತ್ವ ಸಾಮರ್ಥ್ಯವನ್ನು ಯಾಲೆ ಸಂಭ್ರಮದಿಂದ ಆಚರಿತ್ತು’ ಎಂದು ಹೇಳಿದ್ದರು. ಈ ವಿಡಿಯೋ ಕ್ಲಿಪ್ ನ್ನು ಆಲ್ಟ್ ನ್ಯೂಸ್ ನ ಪ್ರತೀಕ್ ಸಿನ್ಹಾ ಟ್ವೀಟ್ ಮಾಡಿರುವುದು ಹೀಗೆ
For some strange reason, @smritiirani did not mention this degree from Yale in her nomination today. pic.twitter.com/81oFfxq11V
— Pratik Sinha (@free_thinker) April 11, 2019
ಹೀಗೆ ತಮ್ಮ ಪದವಿಯ ಸುತ್ತ ಸುಳ್ಳುಗಳನ್ನೇ ಪೋಣಿಸುತ್ತಾ ಬಂದ ಸ್ಮೃತಿ ಇರಾನಿ ಈಗ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಸ್ಮೃತಿ ಇರಾನಿ ಅವರ ಪದವಿ ನಿತ್ಯವೂ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ ಎಂದು ತಮಾಷೆ ಮಾಡಿದ್ದಾರೆ.’
#WATCH Congress' Priyanka Chaturdevi: A new serial is going to come, 'Kyunki Mantri Bhi Kabhi Graduate Thi'; Its opening line will be 'Qualifications ke bhi roop badalte hain, naye-naye sanche mein dhalte hain, ek degree aati hai, ek degree jaati hai, bante affidavit naye hain. pic.twitter.com/o8My3RX9JR
— ANI (@ANI) April 12, 2019
A former education minister keeps telling a lie about her own degrees and expects citizens to install their trust in her. First Yale, then a graduate and now not even that. How do I trust this chowkidar? #SmritiIrani
— Ravinder Singh (@_RavinderSingh_) April 12, 2019
ಆದರೆ ಸ್ಮೃತಿ ಮಾತ್ರ, ತಾವು ಇನ್ನೂ ಪದವಿ ಓದುತ್ತಿರುವುದಾಗಿ ಹೇಳುತ್ತಿದ್ದಾರೆ. ಪದವಿಯ ಒಂದು ಭಾಗವನ್ನು ಪೂರೈಸಿದ್ದೇನೆ, ಇನ್ನುಳಿದ ಭಾಗವನ್ನು ಇನ್ನೂ ಪೂರ್ಣಗೊಳಿಸಬೇಕಿದೆ ಎಂದು ಅವರು ಸಮರ್ಥನೆ ನೀಡಿದ್ದಾರೆ. ಆದರೆ ನಿಜ ಹೇಳಬೇಕೆಂದರೆ, 2017ರಲ್ಲಿ ಸ್ಮೃತಿ ಇರಾನಿ ರಾಜ್ಯಸಭಾ ಸಂಸದರಾಗಲು ಅಫಿದಾವತ್ ಸಲ್ಲಿಸಿದಾಗಲೂ, ತಾವು ವಾಣಿಜ್ಯ ಪದವಿಯ ಭಾಗ ಒಂದು ಪೂರ್ಣಗೊಳಿಸಿದ್ದಾರೆ ಹೇಳಿದ್ದರು. ಎರಡು ವರ್ಷ ಕಳೆದರೂ ಇನ್ನೂ ಸ್ಮೃತಿ ಇರಾನಿ ಅದೇ ಅಫಿದಾವತ್ ಮತ್ತೆ ಸಲ್ಲಿಸಿದ್ದಾರೆ.
