ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರಿನಿಂದ ಇಳಿಯುತ್ತಿದ್ದಂತೆ, ಅವರ ಹೆಲಿಕಾಪ್ಟರಿನಿಂದ ದೊಡ್ಡ ಗಾತ್ರದ ಭಾರವಾಗಿದ್ದ ಪೆಟ್ಟಿಗೆಯೊಂದನ್ನು ಇಳಿಸಿಕೊಂಡು ಇಬ್ಬರು ಸಿಬ್ಬಂದಿಗಳೂ ಎರಡೂ ಕಡೆ ಅದರ ಹಿಡಿಕೆ ಹಿಡಿದುಕೊಂಡು ಲಗುಬಗೆಯಿಂದ ನಡೆಯುತ್ತಾರೆ. ಸ್ವಲ್ಪ ದೂರಲ್ಲಿ ಇನೊವಾ ಕಾರೊಂದು ನಿಂತಿರುತ್ತದೆ. ಅವರು ಆ ಪೆಟ್ಟಿಗೆಯನ್ನು ಕಾರಿನ ಡಿಕ್ಕಿಯಲ್ಲಿ ಇಡುತ್ತಿದ್ದಂತೆ ಕಾರು ರಭಸವಾಗಿ ಹೋಗುತ್ತದೆ.
ಇದಿಷ್ಟು ನೆನ್ನೆ ಚಿತ್ರದುರ್ಗದಲ್ಲಿ ನಡೆದ ಘಟನೆ. ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರಿಹಿಡಿದಿದ್ದಾರೆ.
ಇದೀಗ ವಿಡಿಯೋ ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಪ್ರಚಾರ ಸಮಿತಿಯ ಶ್ರೀವತ್ಸ “ಅನುಮಾನಕ್ಕೆ ಎಡೆ ಮಾಡುವ ಬಾಕ್ಸ ನ್ನು ಪ್ರಧಾನಿ ಹೆಲಿಕಾಪ್ಟರಿನಿಂದ ಇಳಿಸಲಾಗಿದೆ. ಅದನ್ನು ಕಾಯುತ್ತಾ ನಿಂತಿದ್ದ ಇನ್ನೋವಾಕ್ಕಡ ಕ್ಷಿಪ್ರವಾಗಿ ಸಾಗಿಸಲಾಗಿದೆ, ನಂತರ ಕಾರು ವೇಗವಾಗಿ ಹೋಗಿದೆ. ಈ ಬಾಕ್ಸನ್ನು ಯಾವುದೇ ಭದ್ರತಾ ತಪಾಸಣೆಗೆ ಒಳಪಡಿಸಿಲ್ಲ ಯಾಕೆ? ಇನ್ನೋವಾ ಪ್ರಧಾನಿಯವರ ಭದ್ರತಾ ವಾಹನವಾಗಿರಲಿಲ್ಲವೇ? ಅದು ಯಾರ ಕಾರು? ಬಾಕ್ಸ್ ಒಳಗೆ ಏನಿತ್ತು? ಖಾಸಗಿ ಇನ್ನೋವಾ ಕಾರ್ ನಂತೆ ಕಾಣಿಸುತ್ತಿದ್ದ ಕಾರಿಗೆ ಅದನ್ನು ದಡಬಡಿಸಿ ಸಾಗಿಸಿದ್ದು ಯಾಕೆ? ಇಲ್ಲಿ ಏನೋ ರಹಸ್ಯ ಚಟುವಟಿಕೆ ನಡೆದಿದೆ. ಮಾಧ್ಯಮಗಳು ಈ ಪ್ರಶ್ನೆಗಳನ್ನು ಕೇಳುತ್ತವೆಯೇ? ಚುನಾವಣಾ ಆಯೋಗ ಈ ಬಾಕ್ಸಿನಲ್ಲಿ ಏನಿತ್ತು ಎಂದು ಪರೀಕ್ಷಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಈ ವಿಡಿಯೋ ಹಂಚಿಕೊಂಡು ಚುನಾವಣಾ ಆಯೋಗವನ್ನು ಈ ನಿಗೂಢ ಪೆಟ್ಟಿಗೆಯ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
A mysterious box was unloaded from PM Modi’s helicopter at Chitradurga yesterday and loaded into a private Innova which quickly sped away. The #ElectionCommission should enquire into what was in the box and to whom the vehicle belonged. @ceo_karnataka pic.twitter.com/iudqT143Bv
— KPCC President (@KPCCPresident) April 13, 2019
ಈ ವಿಡಿಯೋ ನೋಡಿ ಅನೇಕರು ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ತುರ್ತು ತನಿಖೆ ನಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತಮ ಸುದ್ದಿಗಳು ಬಿತ್ತರಗೊಳ್ಳುತ್ತಿವೆ.