ಬಿಜೆಪಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ‘ಮೇ ಬಿ ಚೌಕೀದಾರ್ ಹ್ಞೂ’ ಎನ್ನುವ ಪ್ರಚಾರಾಭಿಯಾನ ನಡೆಸಿ ಪ್ರಚಾರ ಗಿಟ್ಟಿಸಿಕೊಂಡರು. ಚೌಕಿದಾರರೊಂದಿಗೆ ಲೈವ್ ಮಾತುಕತೆ ನಡೆಸಿದ ಒಂದು ಕಾರ್ಯಕ್ರಮ ಸಹ ನಡೆಯಿತು.ಆದರೆ ಪ್ರಧಾನಿ ನರೇಂದ್ರ ಮೋದಿಯವರು ನಿಜವಾದ ಚೌಕೀದಾರರ ಅಥವಾ ಭದ್ರತಾ ಸಿಬ್ಬಂದಿಗಳ ಬಗ್ಗೆ ತೋರಿರುವ ಪ್ರೀತಿ ರಾಜಕೀಯ ಗಿಮಿಕ್ ಎನ್ನುವುದು ಇದೀಗ ಸಾಬೀತಾಗಿದೆ. ಮಾರ್ಚ್ 20ರಂದು ದೇಶದ 25 ಲಕ್ಷ ಭದ್ರತಾ ಸಿಬ್ಬಂದಿಯ ಜೊತೆಗೆ ಅಂತರ್ಜಾಲದ ಮೂಲಕ ಮಾತುಕತೆ ನಡೆಸಿ ಈ ಅಭಿಯಾನವನ್ನು ಪ್ರಧಾನಿ ಆರಂಭಿಸಿದ್ದಾರೆ ಎನ್ನುವುದು ಸುಳ್ಳು ಎಂದು ಈಗ ವರದಿಯಾಗಿದೆ. ಸಂಪೂರ್ಣ ಕಾರ್ಯಕ್ರಮವೇ ಬಿಜೆಪಿ ಸಂಸದರೊಬ್ಬರು ಮಾಡಿದ ಗಿಮಿಕ್ ಎನ್ನುವುದು ಈಗ ಬಹಿರಂಗವಾಗಿದೆ. ಕೇವಲ 500 ಉದ್ಯೋಗಿಗಳಿರುವ ಬಿಜೆಪಿಗೆ ಸಂಬಂಧಪಟ್ಟ ಸಂಸ್ಥೆಯ ಸದಸ್ಯರೊಂದಿಗೆ ಮೋದಿ ಮಾತುಕತೆ ನಡೆಸಿದ್ದು ಎಂಬುದು ಬಯಲಾಗಿದೆ.
ಭದ್ರತಾ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಸುಮಾರು 22,000 ಕ್ಕೂ ಅಧಿಕ ಸಂಸ್ಥೆಗಳನ್ನು ಪ್ರತಿನಿಧಿಸುವ ಆಡಳಿತ ಮಂಡಳಿಯಾಗಿರುವ ಕೇಂದ್ರೀಯ ಖಾಸಗಿ ಭದ್ರತಾ ಉದ್ಯಮ ಸಂಘಟನೆಯು (ಸಿಎಪಿಎಸ್ಐ) ಪ್ರಧಾನಿಯವರ ಒಟ್ಟಾರೆ ‘ ಚೌಕಿದಾರರೊಂದಿಗೆ ನಡೆಸಿದ ಮಾತುಕತೆ ಕಾರ್ಯಕ್ರಮ’ವೇ ನಿಜವಾದ ಬೂಟಾಟಿಕೆ ಮತ್ತು ‘ಚೌಕೀದಾರರಿಗೆ ಮಾಡಿರುವ ನಿಜವಾದ ಮೋಸ’ ಎಂದು ಹೇಳಿದೆ.
ಸಿಎಪಿಎಸ್ಐ ಅಡಿಯಲ್ಲಿ ಸುಮಾರು 85ಲಕ್ಷ ಖಾಸಗಿ ಭದ್ರತಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾರ್ಚ್ 29ರಂದು ಪ್ರಧಾನಿ ಕಚೇರಿಗೆ ಸಿಎಪಿಎಸ್ಐ ಕಳುಹಿಸಿದ ಪತ್ರದಲ್ಲಿ ತಮ್ಮ ಸಂಘಟನೆಗೆ ಸೇರಿದ ಯಾವೊಬ್ಬ ಭದ್ರತಾ ಸಿಬ್ಬಂದಿಗೂ ಪ್ರಧಾನಿಯವರ ಜೊತೆಗೆ ಸಂಭಾಷಿಸುವ ಅವಕಾಶ ಸಿಕ್ಕಿಲ್ಲ ಎಂದು ಹೇಳಿದೆ.
ಭದ್ರತಾ ಸಿಬ್ಬಂದಿಗಳು ಪ್ರಧಾನಿಗೆ ತಮ್ಮ ಅಹವಾಲನ್ನು ಹೇಳಿಕೊಳ್ಳಲು ಮತ್ತು ನೇರ ಮಾತುಕತೆ ನಡೆಸಲು ಕಾತರದಿಂದ ಕಾಯುತ್ತಿದ್ದರು. ಆದರೆ ಕಾರ್ಯಕ್ರಮ ಮುಗಿದು ಹೋದರೂ ಅವರ ನಿರೀಕ್ಷೆ ಫಲಿಸಿಲ್ಲ. ಅವರಿಗೆ ಪ್ರಧಾನಿಯಿಂದ ಯಾವುದೇ ಕರೆ ಬರಲಿಲ್ಲ. ಅಥವಾ ಫೇಸ್ಬುಕ್ ತೆರೆದು ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿ ತೋರಿಸಿದ ಭದ್ರತಾ ಸಿಬ್ಬಂದಿಗಳಿಗೂ ನಿರಾಶೆಯಾಗಿದೆ. ಈ ಎಲ್ಲಾ ವಿವರಗಳನ್ನು ಇದೀಗ ಸಿಎಪಿಎಸ್ಐ ತನ್ನ ಪತ್ರದಲ್ಲಿ ಪ್ರಧಾನಿ ಕಚೇರಿಗೆ ಮನದಟ್ಟು ಮಾಡಿದೆ.
ಸಂಘಟನೆಯ ಅಧ್ಯಕ್ಷ ಕನ್ವರ್ ವಿಕ್ರಮ್ ಸಿಂಗ್ ಅವರ ಪ್ರಕಾರ, ಪ್ರಧಾನಿಯವರು ಫೇಸ್ಬುಕ್ನಲ್ಲಿ ಸಂಭಾಷಣೆ ನಡೆಸುತ್ತಾರೆ ಎಂದು ಸಂಸ್ಥೆಯ ಭದ್ರತಾ ಸಿಬ್ಬಂದಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಕಾರ್ಯಕ್ರಮ ಮುಗಿಯುವವರೆಗೂ ಅವರು ಕಾಯುತ್ತಲೇ ಇದ್ದರೇ ವಿನಾ ಯಾರೊಬ್ಬರೂ ಅವರನ್ನು ಸಂಪರ್ಕಿಸಿರಲಿಲ್ಲ. ನಂತರ ಈ ಬಗ್ಗೆ ಪರಿಶೀಲಿಸಿದಾಗ ವಾಸ್ತವದಲ್ಲಿ ನಡೆದ ಫೇಸ್ಬುಕ್ ಲೈವ್ ಕಾರ್ಯಕ್ರಮವನ್ನು ಬಿಹಾರದ ಬಿಜೆಪಿ ಸಂಸದರಾಗಿರುವ ಆರ್ಕೆ ಸಿನ್ಹಾ ಅವರು ಹೈಜಾಕ್ ಮಾಡಿದ್ದರು. ಆರ್ಕೆ ಸಿನ್ಹಾ ಸ್ಥಾಪಿಸಿದ ಮತ್ತು ಅವರ ಮಗ ರಿತುರಾಜ್ ಸಿನ್ಹಾ ಅವರು ನಡೆಸುತ್ತಿರುವ ಎಸ್ಐಎಸ್ ಮತ್ತು ಇತ್ತೀಚೆಗೆ ಸ್ವಾದೀನಪಡಿಸಿಕೊಂಡ ಅದರ ಮೂರು ಭದ್ರತಾ ಸಿಬ್ಬಂದಿಗಳನ್ನು ಒದಗಿಸುವ ಸಂಸ್ಥೆಗಳು ಪ್ರಧಾನಿ ಜೊತೆಗೆ ಲೈವ್ ಕಾರ್ಯಕ್ರಮ ನಡೆಸಿದ್ದವು. ಇದಕ್ಕೆ ಹೊರತಾದ ದೇಶದ ಒಬ್ಬನೇ ಒಬ್ಬ ನಿಜವಾದ ಭದ್ರತಾ ಸಿಬ್ಬಂದಿಗೂ ಮಾತನಾಡುವ ಅವಕಾಶವೇ ನೀಡಿರಲಿಲ್ಲ.
ಸಿಎಪಿಎಸ್ಐ ಸದಸ್ಯರು ಈ ಬಗ್ಗೆ ರಿತುರಾಜ್ ಸಿನ್ಹಾ ಅವರನ್ನು ಪ್ರಶ್ನಿಸಿದರೆ, ಅವರು ಸಂಪೂರ್ಣ ಕಾರ್ಯಕ್ರಮವನ್ನು ತಾವೇ ಆಯೋಜಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಸಿಟ್ಟಿಗೆದ್ದಿರುವ ಸಿಎಪಿಎಸ್ಐ ಪ್ರಧಾನಿ ಕಚೇರಿಗೆ ಪತ್ರ ಬರೆದು, ಪ್ರಧಾನಿ ಕಚೇರಿ ಕೇವಲ 500 ಭದ್ರತಾ ಸಿಬ್ಬಂದಿಗಳಿರುವ ಬಿಜೆಪಿ ಸಂಸ್ಥೆಗಳ ಜೊತೆಗೆ ಲೈವ್ ಕಾರ್ಯಕ್ರಮ ನಡೆಸಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ.
ಆ ಪತ್ರದ ಪ್ರತಿ ಇಲ್ಲಿದೆ

More Articles
By the same author