ಬೆಂಗಳೂರು: ಬಿಜೆಪಿಯ ಬೆಂಗಳೂರು ಅಭ್ಯರ್ಥಿ ತೇಜಸ್ವಿ ಸೂರ್ಯನಿಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ, ಫೋನ್ ಸಂಭಾಷಣೆಯೊಂದರ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದೆ. ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ತೇಜಸ್ವಿ ಸೂರ್ಯನ ಕುರಿತು ಗಂಭೀರ ಆರೋಪ ನಡೆಸಲಾಗಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ತೇಜಸ್ವಿ ಸೂರ್ಯ ಅವರನ್ನು ‘ಭಾವೀ ಪತಿ’ ಎಂದುಕೊಂಡಿದ್ದ ಕೋಲ್ಕತ ಮೂಲದ ಉದ್ಯಮಿ ಡಾ.ಸೋಮ್ ದತ್ತಾ ಹಾಗೂ ಅವರ ‘ಹಿತೈಶಿ’ ಅನಾಮಧೇಯ ಪತ್ರಕರ್ತರ ನಡುವಿನ ಸಂಭಾಷಣೆ ದಾಖಲಾಗಿದೆ. ಈ ಸಂಭಾಷಣೆಯಲ್ಲಿ ಡಾ.ಸೋಮ್ ದತ್ತಾ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಕುರಿತು ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
“ನಾವು ಬಿಡುಗಡೆ ಮಾಡುತ್ತಿರುವ ಆಡಿಯೋ ಈಗಾಗಲೇ ಸಾಮಾಜಿಕ ಮಾಧ್ಯಮಗಳ ವೈರಲ್ ಆಗಿದ್ದು ಅದರಲ್ಲಿ ಇರುವ ಸಂಭಾಷಣೆಯ ಪ್ರಕಾರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಂದ 3 ಮಹಿಳೆಯರು ನೊಂದಿದ್ದಾರೆ. ಈ ವಿಷಯದ ಸಂಪೂರ್ಣ ಮಾಹಿತಿ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರಿಗೆ ಸ್ಪಷ್ಟವಾಗಿ ತಿಳಿದಿತ್ತು. ಹಾಗಿದ್ದರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿಶಾಖಾ ಗೈಡ್ ಲೈನ್ಸ್ ಪ್ರಕಾರ ಬಿಜೆಪಿ/ಆರೆಸ್ಸೆಸ್ ಯಾವ ಕ್ರಮ ಕೈಗೊಂಡಿದೆ?” ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ
“ಆಡಿಯೋದಲ್ಲಿ ಡಾ.ಸೋಮ್ ದತ್ತಾ ಅವರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರು ದಾಖಲಾಗಿದೆ. ಹಾಗಿದ್ದರೆ ತಮ್ಮ ಮೇಲೆ ದೂರು ದಾಖಲಾಗಿರುವ ವಿಷಯವನ್ನು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮುಚ್ಚಿಟ್ಟಿರುವುದು ಯಾಕೆ?” ಎಂದು ಕಾಂಗ್ರೆಸ್ ವಕ್ತಾರ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಹಾಗೂ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಆಗಿರುವ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರನ್ನೂ ದೂರಿರುವ ಬ್ರಿಜೇಶ್ ಕಾಳಪ್ಪ, ‘ಸೋಮ್ ದತ್ತಾ ಅವರು ತಮಗೆ ತೇಜಸ್ವಿ ಸೂರ್ಯನಿಂದ ಆಗಿರುವ ದೌರ್ಜನ್ಯದ ಕುರಿತು ಪ್ರತಾಪ್ ಸಿಂಹ ಅವರಿಗೆ ತಿಳಿಸಿದಾಗ್ಯೂ ಒಬ್ಬ ಸಂಸದರಾಗಿ ಪ್ರತಾಪ್ ಸಿಂಹ ಯಾವ ಕ್ರಮ ಕೈಗೊಂಡಿದ್ದಾರೆ? ರವಿ ಸುಬ್ರಹ್ಮಣ್ಯ ಹೊರತಾಗಿ ಯಾವ ಬಿಜೆಪಿ ನಾಯಕರೂ ತೇಜಸ್ವಿ ಸೂರ್ಯನನ್ನು ಈ ವಿಷಯದಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ, ಇವರಿಬ್ಬರನ್ನೂ ಇತರೆ ಬಿಜೆಪಿ ನಾಯಕರು ದೂರವಿಟ್ಟಿದ್ದಾರೆಯೇ?” ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.
#LokSabhaElections: #Congress levies sexual harassment charges against @Tejasvi_Surya, #BJP's #BengaluruSouth candidate. Party leader #BrijeshKalappa held presser over an audio clip in circulation, where a woman has alleged sexual abuse by #TejasviSurya.@BJP4Karnataka #Tejasvi pic.twitter.com/1s4Y7irk8b
— NEWS9 (@NEWS9TWEETS) April 14, 2019
ಡಾ.ಸೋಮ್ ದತ್ತ ಅವರ ಆಡಿಯೋ ಮಾಧ್ಯಮಗಳಿಗೆ ಬಿಡುಗಡೆಯಾಗುತ್ತಿದ್ದಂತೆ ಇದಕ್ಕೆ ಕೋಲ್ಕತ ಮೂಲಕ ಉದ್ಯಮಿ ಡಾ.ಸೋಮ್ ದತ್ತಾ ಸರಣಿ ಟ್ವೀಟ್ ಗಳ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಬ್ರಿಜೇಶ್ ಕಾಳಪ್ಪ ನಾನು ಆಡಿರುವ ಖಾಸಗಿ ಫೋನ್ ಮಾತುಕತೆಯನ್ನು ಸಾರ್ವಜನಿಕಗೊಳಿಸುವ ಮೂಲಕ ನನ್ನ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ, ನಾನು ಈ ಕುರಿತು ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ” ಎಂದು ತಿಳಿಸಿದ್ದಾರೆ.
Sir, as an advocate you know very well the conversation was private and I was egged on by the guy. I didn’t authorise him to publish it. The whole conversation was an instigated one and also private.
— Dr. Som Dutta (@shom_dr) April 14, 2019