ಮತದಾರರಿಗೆ ಮತ್ತೆ ಬೆದರಿಕೆ ಒಡ್ಡಿದ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಚುನಾವಣಾ ಆಯೋಗ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಜಾರಿಯಾಗುವಂತೆ 48 ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ಆದೇಶ ಹೊರಡಿಸಿದೆ.
ಫಿಲಿಬಿಟ್ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ತನಗೆ ಎಷ್ಟು ಮತಗಳು ಬಂದಿದೆ ಎಂದು ಆಧರಿಸಿ ಎಬಿಸಿಡಿ ದರ್ಜೆಯಲ್ಲಿ ಗ್ರಾಮಗಳನ್ನು ವಿಂಗಡಿಸಿ ಪ್ರಾಧಾನ್ಯತೆ ಆಧಾರದಲ್ಲಿ ಅಭಿವೃದ್ಧಿಗಳನ್ನು ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಫಿಲಿಬಿಟ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ನಾಯಕಿ ಮನೇಕಾ ಗಾಂಧಿ ಅವರು ಈ ಬಾರಿ ತಮ್ಮ ಸುಪುತ್ರ ವರುಣ್ ಗಾಂಧಿ ಕ್ಷೇತ್ರ ಸುಲ್ತಾನ್ ಪುರದಿಂದ ಸ್ಪರ್ಧಿಸುತ್ತಿದ್ದಾರೆ. ವರುಣ್ ಅವರಿಗೆ ಫಿಲಿಬಿಟ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
“ಫಿಲಿಬಿಟ್ ಕ್ಷೇಥ್ರದಲ್ಲಿ ನಾವು ಪ್ರತಿ ಬಾರಿ ಗೆಲುವು ಸಾಧಿಸಿದ್ದೇವೆ, ಆದ್ದರಿಂದ ಯಾವ ಗ್ರಾಮಗಳ ಅಭಿವೃದ್ಧಿಯನ್ನು ಹೆಚ್ಚು ಮಾಡಬೇಕು, ಯಾವ ಗ್ರಾಮಕ್ಕೆ ಕಡಿಮೆ ಮಾಡಬೇಕು ಎಂಬುದನ್ನು ಹೇಗೆ ಅಳೆಯುವುದು. ಆದ್ದರಿಂದ ಆ ಗ್ರಾಮಗಳ ಮತಗಳನ್ನು ಆಧರಿಸಿ ಎ, ಬಿ, ಸಿ, ಡಿ ಎಂದು ವಿಂಗಡಿಸಿ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಮನೇಕಾ ಗಾಂಧಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಸಚಿವೆ ಮನೇಕಾ ಅವರು ತಮ್ಮ ಯೋಜನೆಯನ್ನು ವಿವರಿಸುವ ಭರದಲ್ಲಿ ಯಾವ ಗ್ರಾಮದಿಂದ ಶೇಕಡಾ 80ರಷ್ಟು ಮತಗಳು ಬರುತ್ತದೆಯೋ ಅದನ್ನು ಎ ಎಂದು, ಪಕ್ಷಕ್ಕೆ ಶೇಕಡಾ 60ರಷ್ಟು ಮತಗಳು ಹಾಕುವ ಗ್ರಾಮ ಬಿ ಎಂದು ಹಾಗೂ ಶೇಕಡಾ 50 ಹಾಗೂ ಅದಕ್ಕಿಂತ ಕಡಿಮೆ ಮತ ಹಾಕುವ ಗ್ರಾಮಗಳನ್ನು ಸಿ ಹಾಗೂ ಡಿ ಎಂದು ವಿಂಗಡಿಸಲಾಗುವುದು. ಯಾವ ಗ್ರಾಮವೂ ಡಿ ದರ್ಜೆಯನ್ನು ಪಡೆಯಬೇಡಿ, ಕಾರಣ ನಾವಿಲ್ಲಿ ಬಂದಿರುವುದು ನಿಮಗೆಲ್ಲ ಒಳ್ಳೆಯದನ್ನು ಮಾಡಲು ಎಂದು ಜನರಿಗೆ ಮತ ಹಾಕಲು ಪರೋಕ್ಷವಾಗಿ ಬೆದರಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರವಷ್ಟೇ, ಮನೇಕಾ ಗಾಂಧಿ ಅವರು ತಮ್ಮ ಸ್ವ ಕ್ಷೇತ್ರ ಸುಲ್ತಾನಪುದರಲ್ಲಿ ಮುಸ್ಲಿ ಸಮುದಾಯಕ್ಕೆ ಬೆದರಿಕೆ ಒಡ್ಡಿದ್ದರು. ತನಗೆ ಮತ ಹಾಕದಿದ್ದರೆ ನಾನು ಗೆದ್ದ ನಂತರ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂಬರ್ಥದ ಮಾತುಗಳನ್ನು ಹೇಳಿದ್ದರು.
ಮನೇಕಾ ಅವರ ಈ ಹೇಳಿಕೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗ ಶೊಕಾಸ್ ನೋಟೀಸ್ ನೀಡಿರುವುದಲ್ಲದೇ ಮನೇಕಾ ಗಾಂಧಿ ಚುನಾವಣಾ ಪ್ರಚಾರಕ್ಕೆ 48 ಗಂಟೆ ಕಾಲ ನಿಷೇಧ ವಿಧಿಸಿದೆ.
ಸಮಾಜವಾದಿ ಪಕ್ಷದ ಅಜಂ ಖಾನ್ ಗೆ ನಿರ್ಬಂಧ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದ್ವೇಷ ರಾಜಕಾರಣ ಮಾಡಿದ ಅಜಂ ಖಾನ್ ಅವರಿಗೆ 72 ಗಂಟೆಗಳ ಚುನಾವಣಾ ಪ್ರಚಾರ ನಡೆಸದಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.