ದೇಶದಲ್ಲಿ ಎರಡನೇ ಹಂತದ ಚುನಾವಣೆಗೆ ಎರಡೇ ದಿನ ಬಾಕಿ ಇರುವಂತೆ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಲು ಕಸರತ್ತು ಮಾಡುತ್ತಿವೆ. ಆದರೆ ಬಿಜೆಪಿ ಪಕ್ಷ ಮಾತ್ರ ನೀಚ ಮಟ್ಟದ ಪ್ರಯತ್ನಗಳನ್ನೇ ಮುಂದುವರೆಸಿದೆ.
ಈ ಬಾರಿ ಅದು ದೇಶದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನೇ ತನ್ನ ಚುನಾವಣಾ ಉದ್ದೇಶಕ್ಕೆ ಬಳಸಿಕೊಂಡಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬನಿಗೆ, ಅದೇ ರೀತಿಯಲ್ಲಿ ಮೀಸೆ ಕತ್ತರಿಸಿ, ಕನ್ನಡಕ ಹಾಕಿ, ಕೊರಳಿಗೆ ಬಿಜೆಪಿ ಪಕ್ಷದ ಶಾಲು ಹಾಕಿಸಿಕೊಂಡು, ಈ ನಕಲಿ ವ್ಯಕ್ತಿಯ ಫೋಟೋ ತೆಗೆಸಿ, ಆ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡತೊಡಗಿದೆ. ಅದರ ಜೊತೆಯಲ್ಲಿ “ವಿಂಗ್ ಕಮಾಂಡರ್ ಅಭಿನಂದನ್ ಅವರು ಬಿಜೆಪಿಗೆ ಓಟ್ ಹಾಕಿದ್ದಾರೆ, ಬಹಿರಂಗವಾಗಿ ಮೋದಿಯನ್ನು ಬೆಂಬಲಿಸಿ ಪ್ರಚಾರ ಮಾಡಿದ್ದಾರೆ.” ಎಂಬ ಹುಸಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದೆ.
ಈ ನಕಲಿ ವಿಂಗ್ ಕಮಾಂಡರ್ ಅಭಿನಂದನ್ ಫೋಟೋವನ್ನು ಬಿಜೆಪಿಯನ್ನು ಬೆಂಬಲಿಸುವ ಅನೇಕ ಫೇಸ್ಬುಕ್ ಪುಟಗಳಲ್ಲಿ, ವಾಟ್ಸಾಪ್ ಗಳಲ್ಲಿ ಹಂಚಲಾಗಿದೆ.

ಈ ಫೋಟೋ ಬೆಳಕಿಗೆ ಬರುತ್ತಿದ್ದಂತೆ ಕ್ಷಿಪ್ರಗತಿಯಲ್ಲಿ ಈ ಫೋಟೋದಲ್ಲಿರುವ ವ್ಯಕ್ತಿ ನಕಲಿ ಎಂಬುದನ್ನು ಆಲ್ಟ್ ನ್ಯೂಸ್, ಬೂಮ್ ಲೈವ್ ನಂತಹ ಸುದ್ದಿ ತಾಣಗಳು ಬಯಲಿಗೆಳೆದಿವೆ.
ಸತ್ಯಾಂಶಗಳೇನು?
ನಿಜವಾದ ವಿಂಗ್ ಕಮಾಂಡರ್ ಅಭಿನಂದನ್ ಫೋಟೋ ಹಾಗೂ ಬಿಜೆಪಿ ಸೃಷ್ಟಿಸಿದ ನಕಲಿ ವಿಂಗ್ ಕಮಾಂಡರ್ ಅಭಿನಂದನ್ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತೋರಿಸಿವೆ.
1. ಅಸಲಿ ಅಭಿನಂದನ್ ತುಟಿಯ ಕೆಳಗೆ ಕಪ್ಪು ಮಚ್ಚೆ ಇದೆ. ನಕಲಿ ಅಭಿನಂದನ್ ಫೋಟೋದ ವ್ಯಕ್ತಿಯಲ್ಲಿ ಆ ಮಚ್ಚೆ ಇಲ್ಲ.

2. ಅಸಲಿ ಅಭಿನಂದನ್ ಮೂಗಿನ ಎಡಭಾಗದಲ್ಲಿ ಮಚ್ಚೆ ಇದೆ, ನಕಲಿ ಅಭಿನಂದನ್ ಮೂಗಿನ ಬಳಿ ಮಚ್ಚೆ ಇಲ್ಲ

3. ನಕಲಿ ಅಭಿನಂದನ್ ಬಲಗಣ್ಣಿನ ಕೆಳಗೆ ಮಚ್ಚೆ ಇದೆ; ಅಸಲಿ ಅಭಿನಂದನ್ ಬಲಗಣ್ಣಿನ ಕೆಳಗೆ ಯಾವುದೇ ಮಚ್ಚೆ ಇಲ್ಲ

4. ನಕಲಿ ಅಭಿನಂದನ್ ಫೋಟೋ ಹಿಂಬದಿಯಲ್ಲಿ ಸಮೋಸಾ ಎಂಬ ಹಿಂದಿ ಬೋರ್ಡ್ ಕಾಣಿಸುತ್ತದೆ, ಆದರೆ ವಿಂಗ್ ಕಮಾಂಡರ್ ಅಭಿನಂದನ್ ತಮಿಳುನಾಡಿನವರಾಗಿದ್ದು ಇಂತಹ ಹಿಂದಿ ಬೋರ್ಡು ಅಲ್ಲಿ ಇರುವ ಸಾಧ್ಯತೆ ಇಲ್ಲವೇ ಇಲ್ಲ.

ಹಾಗೆಯೇ ಮೊದಲ ಹಂತದ ಚುನಾವಣೆ ಏ 11ರಲ್ಲಿ ನಡೆದಿದ್ದು, ಅಭಿನಂದನ್ ಓಟು ಇರುವ ತಮಿಳು ನಾಡಿನಲ್ಲಿ ಇದುವರೆಗೆ ಮತದಾನ ಆಗಿಲ್ಲ.
ಇನ್ನು ಎಲ್ಲಕ್ಕಿಂತ ಮುಖ್ಯವಾದ ವಿಷಯವೇನೆಂದರೆ, ವಿಂಗ್ ಕಮಾಂಡರ್ ಅಭಿನಂದನ್ ಸೇರಿದಂತೆ ಭಾರತೀಯ ಸೇನಾಪಡೆಯ ಸೇವೆಯಲ್ಲಿರುವ ಯಾವುದೇ ಯೋಧ/ಯೋಧೆ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ಯಾವುದೇ ರಾಜಕೀಯ ವ್ಯಕ್ತಿಯ ಪರವಾಗಿ ಪ್ರಚಾರ ನಡೆಸಿದರೆ, ಅವರು ಕೂಡಲೇ ತಮ್ಮ ಸೇವೆಯಿಂದ ಅಮಾನತುಗೊಳ್ಳಬೇಕಾಗುತ್ತದೆ.

ಸೈನಿಕರನ್ನು, ಭಾರತೀಯ ಸೇನೆಯನ್ನು, ಸೇನೆಯ ಸಾಧನೆಗಳನ್ನು ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಬಳಸಿಕೊಳ್ಳುತ್ತಿರುವ ಬಿಜೆಪಿಯ ಈ ಬಗೆಯ ಥರ್ಡ್ ರೇಟ್ ರಾಜಕೀಯಕ್ಕೆ ಬಹುಶಃ ಕಾಲವೇ ಉತ್ತರ ಹೇಳಲಿದೆ.
ಸಂಬಂಧಿತ ಬರೆಹಗಳು
More Articles
By the same author
Related Articles
From the same category
Shame on you to blame BJP on the action some people who may be Nahar Party members