ಸೌಮಿತ್ರಾ ರಾನಡೆ ನಿರ್ದೇಶನದ ‘ಆಲ್ಬರ್ಟ್ ಪಿಂಟೋ ಕೊ ಗುಸ್ಸಾ ಕ್ಯೂಂ ಆತಾ ಹೇ’ ಸಿನೆಮಾ ಮೊನ್ನೆ ಬಿಡುಗಡೆಯಾಗಿದೆ. ಈ ಹೆಸರಿನ ಸಿನಿಮಾವನ್ನು 1980ರಲ್ಲಿ ಅಂದಿನ ಸನ್ನಿವೇಶಕ್ಕೆ ತಕ್ಕಂತೆ ಆಂಗ್ರಿ ಯಂಗ್ ಮನ್ ಕಥೆಯ ಮೂಲಕ ನಿರ್ದೇಶಕ ಸಯೀದ್ ಮಿರ್ಜಾನಿರ್ದೇಶಿಸಿದ್ದರು. ನಾಸಿರುದ್ದೀನ್ ಶಾ ಮತ್ತು ಶಬಾನಾ ಅಜ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಆ ಚಿತ್ರ ವ್ಯಾಪಕ ಜನಪ್ರಿಯತೆ ಪಡೆದಿತ್ತು.
ನಿರ್ದೇಶಕ ಸೌಮಿತ್ರಾ ರಾನಡೆ ಇಂದು ಅದೇ ಹೆಸರಿನ ಸಿನಿಮಾದಲ್ಲಿ ಕಥೆಯನ್ನು ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡು ‘ಆಲ್ಬರ್ಟ್ ಪಿಂಟೋ ಕೊ ಗುಸ್ಸಾ ಕ್ಯೂಂ ಆತಾ ಹೇ’ ಮಾಡಿದ್ದಾರೆ. 2019ರ ಈ ಸಿನೆಮಾದಲ್ಲಿ ಅಲ್ಬರ್ಟ್ ಪಾತ್ರದಲ್ಲಿ ನಟ ಮಾನವ್ ಕೌಲ್ ನಟಿಸಿದ್ದರೆ ಖ್ಯಾತ ನಟಿ ನಂದಿತಾ ದಾಸ್ ಅಲ್ಬರ್ಟ್ ನ ಗರ್ಲ್ ಫ್ರೆಂಡ್ ‘ಸ್ಟೆಲ್ಲಾ’ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಂದಿತಾದಾಸ್ ದೇಶದ ಪ್ರತಿಭಾವಂತ ನಟಿ ಮತ್ತು ನಿರ್ದೇಶಕಿ. ಇದುವರೆಗೆ ಸುಮಾರು 10 ಭಿನ್ನ ಭಿನ್ನ ಭಾಷೆಗಳ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಿರಾಖ್ ಮತ್ತು ಮಾಂಡೋ ಎಂಬೆರಡು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುವುದು ಸಾಮಾಜಿಕ ಹೊಣೆಗಾರಿಕೆಯ ಕೆಲಸ ಎಂದೇ ಭಾವಿಸಿರುವ ನಂದಿತಾ ದಾಸ್ ಅವರೊಂದಿಗೆ ಪತ್ರಕರ್ತ ರಾಣಾ ಸಿದ್ದಿಕಿ ಜಮಾನ್ ನಡೆಸಿದ ಸಂದರ್ಶನದಲ್ಲಿ ನಂದಿತಾ ದಾಸ್ ಹಂಚಿಕೊಂಡಿರುವ ಅನಿಸಿಕೆಗಳು ಇಲ್ಲಿವೆ.
ಹಳೆಯ ಆಲ್ಬರ್ಟ್ ಪಿಂಟೋ ಪ್ರೇಯಸಿ ಶಬಾನಾ ಆಜ್ಮಿಅವರಿಗಿಂತ ನಿಮ್ಮ ಪಾತ್ರ ಹೇಗೆ ಭಿನ್ನವಾಗಿದೆ?
ಒರಿಜಿನಲ್ ಚಿತ್ರ ಹಾಗೂ ಈಗ ಬಿಡುಗಡೆಯಾದ ಚಿತ್ರಕ್ಕೆ ಎರಡು ಪ್ರಮುಖ ಸಾಮ್ಯತೆಗಳಿವೆ. ಒಂದು ಸಿನೆಮಾದ ಥೀಮ್ ಮತ್ತೊಂದು, ಪಾತ್ರಗಳ ಹೆಸರು ಒಂದೇ ಆಗಿದೆ. ಹಳೆಯ ಸಿನಿಮಾದಲ್ಲಿ ಶಬಾನಾಜಿ ಅವರು ಮಾಡಿರುವ ಸ್ಟೆಲ್ಲಾ ಪಾತ್ರದಲ್ಲಿ ಆಕೆ, ಆಲ್ವರ್ಟ್ ನನ್ನು ಪ್ರೀತಿಸುತ್ತಾಳೆ, ಆತನ ಜತೆಗೇ ಜೀವನ ಕಂಡುಕೊಳ್ಳಲು ಇಚ್ಚಿಸುತ್ತಾಳೆ.
ಆದರೆ ಈ ಸಿನೆಮಾದಲ್ಲಿ ನಾನು ಹಲವು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆಲ್ಬರ್ಟ್ ತನ್ನ ಸುತ್ತ ನಡೆಯುತ್ತಿರುವ ಎಲ್ಲವನ್ನು ಕಂಡು ವಿಚಲಿತನಾಗಿರುತ್ತಾನೆ ಮತ್ತು ತನ್ನ ಪ್ರೇಯಸಿಯನ್ನು ದೂರತಳ್ಳುತ್ತಿರುತ್ತಾನೆ. ಆದರೆ ಅವನು ಯಾವುದೇ ಹೆಣ್ಣನ್ನು ಭೇಟಿ ಮಾಡಿದರೂ ಆ ಹೆನ್ಣಿನಲ್ಲಿ ಸ್ಟೆಲ್ಲಾಳನ್ನು ಕಾಣುತ್ತಾನೆ. ಸ್ಟೆಲ್ಲಾಳ ಸರಳ ಸ್ವಭಾವ ಮತ್ತು ಮಾನಸಿಕ ಸಧೃಢತೆ ಪಾತ್ರಕ್ಕೆ ಹೊಂದಿಕೊಳ್ಳುವಂತದ್ದು. ಇತರ ಪಾತ್ರಗಳನ್ನೂ ನಿರ್ದೇಶಕರು ಬಹಳ ಆಸಕ್ತಿಕರವಾಗಿ ನಿರೂಪಿಸಿದ್ದಾರೆ.
ಈ ಸಿನೆಮಾ ಕೋಪದ ಒಂದು ಎಳೆ ಬಿಟ್ಟರೆ ಹಿಂದಿನ ಸಿನಿಮಾಕ್ಕೆ ಬಹಳ ಭಿನ್ನವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಆ ಕಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂದಿನ ಆಲ್ಬರ್ಟ್ ಪಿಂಟೊ ಪಾತ್ರವನ್ನು ನಿರೂಪಿಸಲಾಗಿತ್ತು. ಅದು ತುರ್ತು ಸಂದರ್ಭದ ನಂತರದ ಕಾಲಮಾನದಲ್ಲಿ ಬಾಂಬೆಯಲ್ಲಿ ಮಿಲ್ ಕಾರ್ಮಿಕರ ಸಮಸ್ಯೆಗಳ ಸಂದರ್ಭದಲ್ಲಿ ರಚಿಸಿದ್ದಾಗಿದೆ. ಆಗ ಸಾಮಾನ್ಯ ಜನರಲ್ಲಿ ಸಾಕಷ್ಟು ತಲ್ಣಣ ಇತ್ತು.
ಇಂದೂ ಸಹ ನಾವು ಅಂತಹದ್ದೇ ಸಂಕಟದಲ್ಲಿದ್ದೇವೆ. ರಾಜಕೀಯ ಮತ್ತು ಸಂವಾದಗಳು ಎರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ. ಒಡಕನ್ನು ಉಂಟುಮಾಡುವ ಶಕ್ತಿಗಳು ನಮ್ಮ ಧೃತಿಗೆಡಿಸುತ್ತಿವೆ. ನಿರುದ್ಯೋಗ, ಬಡತನ ಮತ್ತು ಅಸಮಾನತೆಯಂತಹ ನಿಜ ಸಮಸ್ಯೆಗಳ ಬಗ್ಗೆ ನಮ್ಮ ಗಮನ ಹರಿಯದಂತೆ ಮಾಡಲಾಗುತ್ತಿದೆ.
ಯುವಕರಲ್ಲಿ, ರೈತರಲ್ಲಿ, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಲ್ಲಿ ಆಕ್ರೋಶ ಮಡುಗಟ್ಟಿದೆ… ಸಿನಿಮಾದಲ್ಲಿರುವ ರಾಜಕೀಯ ಸಂದೇಶ ಕುರಿತಾದ ಎಳೆಯನ್ನು ಹೊಂದಿದೆ.
ಮೇಲೆ ಹೇಳಿದ ಹಲವರನ್ನು ಪ್ರತಿನಿಧಿಸುವ ಆಲ್ಬರ್ಟ್ ನ ನೋವನ್ನು ಈ ಚಿತ್ರ ಧ್ವನಿಸುತ್ತದೆ. ಚುನಾವಣೆಯ ಈ ಹೊತ್ತಿನಲ್ಲಿ ನಾವು ಪಥ ಬದಲಿಸುವ ಮಾರ್ಗದಲ್ಲಿದ್ದೇವೆ, ಬದಲಾವಣೆ ತರುವ ಶಕ್ತಿ ನಮಗಿದೆ.

ಇದು ನಾನು ಕೇಳಿದಂತೆ ಸಿನೆಮಾದ ಕಲಾವಿದರು ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ಸಿನೆಮಾ ಮಾಡಿರುವ ಮತ್ತೊಂದು ಕಲಾತ್ಮಕ ಸಿನೆಮಾ. ಈ ಸಿನೆಮಾ ನಿಮ್ಮ ವೃತ್ತಿ ಜೀವನಕ್ಕೆ ಹೇಗೆ ಸಹಾಯಕವಾಗಲಿದೆ?
ಒಬ್ಬ ನಟಿಯಾಗಿ 40 ಸಿನೆಮಾಗಳಲ್ಲಿ ನಟಿಸಿ, ಎರಡು ಸಿನೆಮಾಗಳ ನಿರ್ದೇಶನ ಮಾಡಿದ ಮೇಲೂ ಸಿನಿಮಾ ನನಗೆ ಒಂದು ಮಾರ್ಗವೇ ಹೊರತು ಗುರಿಯಲ್ಲ. ಹೀಗಾಗಿ ಅದೇ ನನ್ನ ವೃತ್ತಿಬದುಕು ಎಂಬುದಕ್ಕಿಂತಲೂ ನಾನು ಕಾಳಜಿ ವಹಿಸುವ ವಿಷಯಗಳ ಕುರಿತು ಚರ್ಚೆಗಳನ್ನು ಹುಟ್ಟು ಹಾಕಲು ಒಂದು ಕಲಾ ಮಾಧ್ಯಮ ಸಿನಿಮಾ ಎಂದು ಪರಿಗಣಿಸುತ್ತೇನೆ. ನಾನೆಂದಿಗೂ ನನ್ನ ಕೆಲಸಕ್ಕೂ ನಾನು ಪಡೆಯುವ ಸಂಭಾವನೆಗೂ ಸಂಬಂಧ ಕಲ್ಪಿಸಿಕೊಳ್ಳುವುದಿಲ್ಲ. ಮುಂದೆಯೂ ಹೆಚ್ಚಿನ ನನ್ನ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಸಂಭಾವನೆ ರಹಿತವಾಗಿ ಅಥವಾ ಕಡಿಮೆ ಸಂಭಾವನೆಯಲ್ಲಿ ಮಾಡುತ್ತೇನೆ.
ಸಂಭಾವನೆ ನೀಡುವ ಎಷ್ಟೋ ಸಿನೆಮಾಗಳ ಕಥಾಹಂದರಲ್ಲಿ ಪ್ರೇರಣೆಯೇ ಇರುವುದಿಲ್ಲ. ‘ಆಲ್ಟರ್ಟ್… ಸಿನಿಮಾ ಒಪ್ಪಿಕೊಳ್ಳಲು ಕಾರಣ, ಸೌಮಿತ್ರಾ ಒಬ್ಬ ಉತ್ತಮ ಗೆಳೆಯ, ಅತ್ಯುನ್ನತ ಬದ್ಧತೆ ಹೊಂದಿರುವ ವ್ಯಕ್ತಿ. ಅವರಿಂದ ಸಂಭಾವನೆ ಪಡೆಯದೇ ಇರುವುದಷ್ಟೇ ನಾನು ಅವರಿಗೆ ಮಾಡಬಹುದಾದ ಸಹಾಯವಾಗಿತ್ತು. ‘ಮಾಂಟೋ’ದಲ್ಲಿ ಅವರೂ ನನಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಸ್ನೇಹದಲ್ಲಿ ಎಂದಿಗೂ ವ್ಯವಹಾರ ಇರುವುದಿಲ್ಲ. ಕೇವಲ ನಾನಷ್ಟೇ ಅಲ್ಲ, ಎಲ್ಲ ನಟರೂ, ತಂತ್ರಜ್ಞರು ಸೇರಿದಂತೆ ಎಲ್ಲರೂ ಯಾವುದೇ ಸಂಭಾವನೆ ಇಲ್ಲದೆ ಉಚಿತವಾಗಿ ಇಲ್ಲವೇ ಅತ್ಯಂತ ಕಡಿಮೆ ಸಂಭಾವನೆ ಪಡೆದು ಕೆಲಸ ಮಾಡಿದ್ದಾರೆ. ಇದು ಸೌಮಿತ್ರಾ ಅವರ ಚಿಂತನೆಗೆ ಸಣ್ಣ ಬೆಂಬಲ ಎನ್ನಬಹುದು.
ಮಾಂಟೋ ಸಿನಿಮಾದಲ್ಲೂ ಸಹ ನವಾಜ್, ರಷಿ ಕಪೂರ್, ಗುರುದಾಸ್ ಮಾನ್, ಜಾವೇದ್ ಅಕ್ತರ್ ಸೇರಿದಂತೆ ಹಲವು ನಟರು ಉಚಿತವಾಗಿ ಕೆಲಸ ಮಾಡಿದ್ದರು. ಪ್ರಪಂಚದಲ್ಲಿ ಇನ್ನೂ ಒಳ್ಳೆಯ ಜನ, ಒಳ್ಳೆಯತನಗಳು ಉಳಿದುಕೊಂಡಿವೆ!
ಕೃಪೆ: ನ್ಯಾಶನಲ್ ಹೆರಾಲ್ಡ್
More Articles
By the same author