ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರೆಂದು 2018ರಲ್ಲಿ ಪೋಸ್ಟ್ ಕಾರ್ಡ್ ಎಂಬ ಸುಳ್ಸುದ್ದಿ ಜಾಲತಾಣ ವೈರಲ್ ಮಾಡಿದ್ದ ನಕಲಿ ಫೋರ್ಜರಿ ಪತ್ರವನ್ನು ಇದೀಗ ಬಿಜೆಪಿ ಮತ್ತೆ ಹಂಚಿಕೊಂಡು ತಾನೂ ಸುಳ್ಳು ಸುದ್ದಿಯ ಮೂಲಕ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಯತ್ನದಲ್ಲಿ ತೊಡಗಿದೆ.
ಈಗಾಗಲೇ ಫೇಕ್ ಫೋರ್ಜರಿ ಪತ್ರವೆಂದು ಸಾಬೀತಾಗಿರುವ ಫೋರ್ಜರಿ ಪತ್ರವನ್ನು ಬಿಜೆಪಿ ಸೋಮವಾರ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದೆ. ಈ ಮೂಲಕ ಎಂ ಬಿ ಪಾಟೀಲರು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೇರಿ ಹಿಂದೂ ಧರ್ಮವನ್ನು ಒಡೆಯಲು ಹೊರಟಿದ್ದಾರೆ ಎಂಬ ಸುಳ್ಳು ಸಂದೇಶವನ್ನು ಮತದಾರರಿಗೆ ನೀಡಲು ಪ್ರಯತ್ನ ನಡೆಸಿದೆ.
ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ,
“ಕಾಂಗ್ರೆಸ್ ಬಯಲು! ಲಿಂಗಾಯತ-ವೀರಶೈವ ವಿಭಜನೆಯನ್ನು ಸೋನಿಯಾ ಗಾಂಧಿ ನಿರ್ದೇಶನದಲ್ಲಿ ನಡೆಸಲಾಗಿದೆ, ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ್ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಸೋನಿಯಾ ಗಾಂಧಿ ಹಿಂದೂಗಳನ್ನು ಒಡೆಯಲು ಸಂಚು ಮಾಡಿರುವುದು ತಿಳಿಯುತ್ತದೆ” ಎಂದು ಬರೆಯಲಾಗಿದೆ
Congress exposed
The entire Lingayat & Veerashaiva community division was planted under direct instruction of Sonia Gandhi
The letter written to Sonia Gandhi by Congress leader MB Patil exposes shocking details of how Sonia Gandhi wanted to divide Hindu communities in Karnataka pic.twitter.com/ZC6CpQf1fN
— BJP Karnataka (@BJP4Karnataka) April 16, 2019
ನಕಲಿ ಫೋರ್ಜರಿ ಪತ್ರದಲ್ಲಿ ಏನಿದೆ?
2018ರಲ್ಲಿ ವೈರಲ್ ಮಾಡಲಾಗಿದ್ದ ಈ ನಕಲಿ ಫೋರ್ಜರಿ ಪತ್ರದಲ್ಲಿ ಎಂ ಬಿ ಪಾಟೀಲರು ತಾವು ‘ಗ್ಲೋಬಲ್ ಕ್ರಿಶ್ಚಿಯನ್ ಆರ್ಗನೈಸೇಶನ್’ ಹಾಗೂ ‘ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್’ ಎಂಬ ಸಂಸ್ಥೆಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದು 2019ರ ಚುನಾವಣೆಗಲ್ಲಿ ತಂತ್ರಗಾರಿಕೆ ನಡೆಸುವ ಬಗ್ಗೆ ಚರ್ಚಿಸಿದ್ದಾಗಿ ಸೋನಿಯಾ ಗಾಂಧಿಯವರಿಗೆ ಹೇಳಿರುವಂತೆ ತಯಾರಿಸಲಾಗಿದೆ. ಇದರಲ್ಲಿ ಫೋಟೋಶಾಪ್ ಮೂಲಕ ಎಂ ಬಿ ಪಾಟೀಲರ ಸಹಿಯನ್ನೂ ಅಳವಡಿಸಲಾಗಿದೆ. ಈ ನಕಲಿ ಫೋರ್ಜರಿ ಪತ್ರದಲ್ಲಿ ಹಿಂದೂಗಳನ್ನು ಒಡೆಯುವ ತಂತ್ರಗಾರಿಕೆಯನ್ನು ಲಿಂಗಾಯತ ಮುಖಂಡ ಎಂ ಬಿ ಪಾಟೀಲ್ ನಡೆಸಿದ್ದಾರೆ ಎಂಬಂತೆ ಚಿತ್ರಿಸಲಾಗಿದೆ.

ಸತ್ಯ ಸಂಗತಿ ಏನು?
ವಾಸ್ತವದಲ್ಲಿ ಇಂತಹ ಯಾವುದೇ ಪತ್ರವನ್ನು ಎಂ ಬಿ ಪಾಟೀಲರು ಸೋನಿಯಾ ಗಾಂಧಿಯವರಿಗೆ ಬರೆದೇ ಇರಲಿಲ್ಲ ಎಂಬ ಸಂಗತಿಯನ್ನು 2018ರಲ್ಲೇ ಸ್ಪಷ್ಟಪಡಿಸಿದ್ದರು. ಹಾಗೆಯೇ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಎರಡು ಸಂಘಟನೆಗಳು ‘Global Christian Council’ ಮತ್ತು ‘World Islamic Organisation’ ಪ್ರಪಂಚದಲ್ಲೇ ಅಸ್ಪತ್ವದಲ್ಲಿ ಇಲ್ಲ ಎಂಬುದು ಕನಿಷ್ಟ ಗೂಗಲ್ ಜ್ಞಾನ ಇರುವವರಿಗೆ ತಿಳಿಯುತ್ತದೆ.
ಇದು ಸಂಪೂರ್ಣವಾಗಿ ಪೋಸ್ಟ್ ಕಾರ್ಡ್ ಸುಳ್ಸುದ್ದಿ ತಾಣದವರೇ ಸೃಷ್ಟಿಸಿ ವೈರಲ್ ಮಾಡಿದ್ದ ಪತ್ರವಾಗಿತ್ತು. ನಂತರದಲ್ಲಿ ಸುಳ್ಳು ಸುದ್ದಿ ಬಯಲು ಮಾಡುವ ಆಲ್ಟ್ ನ್ಯೂಸ್ ಇದನ್ನು ಆಧಾರ ಸಮೇತ ಬಯಲಿಗೆಳಿದಿತ್ತು. ಪೋಸ್ಟ್ ಕಾರ್ಡ್ ಸೃಷ್ಟಿಸಿದ್ದ ಈ ನಕಲಿ ಫೋರ್ಜರಿ ಪತ್ರದ ಕುರಿತು ಪೊಲೀಸ್ ದೂರನ್ನೂ ನೀಡಲಾಗಿತ್ತು. ನಂತರ ಪೋಸ್ಟ್ ಕಾರ್ಡ್ ಇದನ್ನು ಡಿಲೀಟ್ ಮಾಡಿಕೊಂಡಿತ್ತು.
ಈಗ ಬಿಜೆಪಿ ಪಕ್ಷ ಅದೇ ಕೆಲಸ ಪುನಃ ಮಾಡಿದೆ. ಈ ಸುಳ್ಳು ಪತ್ರದ ಪ್ರಚಾರಕ್ಕೆ ಬಿಜೆಪಿ ನಾಯಕ ಯಡಿಯೂರಪ್ಪ ಕೂಡಾ ಮುಂದಾಳತ್ವ ವಹಿಸಿರುವುದು ಅವರ ಶೋಚನೀಯ ಸ್ಥಿತಿ ಹಾಗೂ ಹತಾಶೆಗೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಎರಡೇ ದಿನಗಳಿರುವಾಗ ಪ್ರಬಲ ಲಿಂಗಾಯತ ಮುಖಂಡ ಹಾಗೂ ಸಚಿವ ಎಂ ಬಿ ಪಾಟೀಲರ ವಿರುದ್ಧ ‘ಸುಳ್ಳನ್ನು ನಿಜ ಎಂದು ನಂಬುವ’ ಹಿಂದೂಗಳನ್ನು ಛೂ ಬಿಡುವ ಉದ್ದೇಶದಿಂದ ಬಿಜೆಪಿ ಈ ಕೆಲಸ ಮಾಡಿದೆ ಎಂದು ಎಂಥವರಿಗೂ ತಿಳಿಯುತ್ತದೆ.
ಈ ಪತ್ರದ ಜೊತೆಜೊತೆಯಲ್ಲಿ, ಇದೇ ಫೋರ್ಜರಿ ಪತ್ರವನ್ನು ಯಾವುದೇ ಪರೀಕ್ಷೆಗೊಳಪಡಿಸದೇ ಪತ್ರಿಕಾ ಧರ್ಮವನ್ನು ಗಾಳಿಗೆ ತೂರಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆಯ ವರದಿಗಳನ್ನೂ ಬಿಜೆಪಿ ಖಾತೆಯಿಂದ ಹಂಚಲಾಗಿದೆ.
ಬಿಜೆಪಿಯ ಈ ಕೃತ್ಯಕ್ಕೆ ಕನ್ನಡಿಗ ರವಿಶಂಕರ್ ಪ್ರತ್ಯುತ್ತರ ಹೀಗಿದೆ
ದೇಶದಲ್ಲಿ ನಿಮಗಿಂತ ವಿಷವುಳ್ಳ ಕ್ರಿಮಿ ಯಾವುದು ಇರಲ್ಲ ಅನ್ಸುತ್ತೆ. ಡೂಪ್ಲಿಕೇಟ್ ಲೆಟರ್ ಸೃಷ್ಟಿ ಮಾಡಿ ಲಿಂಗಾಯತರ ಮತಕ್ಕಾಗಿ ನಾಟಕ ಆಡ್ತಾ ಇದ್ದಿರಾ. ಎಲ್ಲರೂ ಮೂರ್ಖರಲ್ಲ.
ನಿಮಗೆ ಇಂದಲ್ಲ ನಾಳೆ ಇದೇ ತಿರುಮಂತ್ರವಾಗುತ್ತೆ ಸತ್ಯ ಗೊತ್ತಾದ ಮೇಲೆ.— ಕನ್ನಡಿಗ ರವಿಶಂಕರ್ (@Haare1234) April 16, 2019