ಬೆಂಗಳೂರು: ಚುನಾವಣಾಧಿಕಾರಿ ಹಾಗೂ ತೆರಿಗೆ ಅಧಿಕಾರಿಗಳು ನಡೆಸಿದ ಜಂಟಿ ದಾಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಂದಾಜು 1 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ನಿವಾಸದ ಸಮೀಪವೇ ಇರುವ ಪಾರ್ಮ್ ಹೌಸ್ ನ ಉಗ್ರಾಣದಲ್ಲಿ ಭಾರೀ ಮೊತ್ತದ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.
ಗಸ್ತು ಚುನಾವಣಾಧಿಕಾರಿಗಳು ಶಿರಸಿ ನಡೆಸಿದ ದಿಢೀರ್ ದಾಳಿಯಲ್ಲಿ 10 ಲಕ್ಷ ಹಣವನ್ನೂ ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿದೆ.
ಕಾರ್ಯಚರಣೆಯಲ್ಲಿದ್ದ ಅಧಿಕಾರಿಗಳು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಣ ಪತ್ತೆಯಾಗಿದೆ.
ವಾಹನದ ಚಾಲಕ, ಸ್ಥಳೀಯ ಬಿಜೆಪಿ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷ ರಮಾಕಾಂತ ಹೆಗಡೆ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ರಮಾಕಾಂತ ಅವರ ಪಾರ್ಮ್ ಹೌಸ್ ನಲ್ಲಿ ಸೂಟ್ ಕೇಸ್ ನಲ್ಲಿದ್ದ 70 ಲಕ್ಷ ಹಣದ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.
ಇದೇ ವೇಳೆ ಐಟಿ ಅಧಿಕಾರಿಗಳ ತಂಡ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣರಾಮ ದೇವಾಡಿಗ (ಅಲಿಯಾಸ್ ಕೃಷ್ಣ ಎಸಳೆ) ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ.
“ಹಣವನ್ನು ಸಣ್ಣ ಬಂಡಲ್ ಗಳಾಗಿ ಪ್ಯಾಕ್ ಮಾಡಲಾಗಿತ್ತು ಮತ್ತು ಬಹುಶಃ ಈ ಹಣ ಮತದಾರರಿಗೆ ಹಂಚುವ ಸಲುವಾಗಿ ಇಟ್ಟಿರಬಹುದೆಂಬ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಈ ಹಣ ಮತದಾರರನ್ನು ಓಲೈಸುವ ಸಲುವಾಗಿ ಸಂಗ್ರಹಿಸಲಾಗಿತ್ತೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಏಪ್ರಿಲ್ 23ರಂದು ಮರು ಚುನಾವಣೆ ನಡೆಯಲಿ ಎಂದು ಹೇಳಿದ್ದರು.
ಬ್ರೇಕಿಂಗ್ ಸುದ್ದಿ: ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ ಫಾರ್ಮ್ ನಿವಾಸದ ಸಮೀಪ ಉಗ್ರಾಣದಲ್ಲಿ ಒಂದು ಕೋಟಿ ರೂಪಾಯಿ ಹಣ ವಶ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ನಿವಾಸದ ಸಮೀಪವೇ ಇರುವ ಪಾರ್ಮ್ ಹೌಸ್ ನ ಉಗ್ರಾಣದಲ್ಲಿ ಭಾರೀ ಮೊತ್ತದ ಹಣ ಪತ್ತೆ
