“ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ” “ದೃಢಗೊಂಡಿದೆ” “ಪ್ರಕಾಶ್ ರಾಜ್ ಗೆ ಮತ ಹಾಕಿ ನಿಮ್ಮ ಮತ ವ್ಯರ್ಥ ಮಾಡಿಕೊಳ್ಳಬೇಡಿ” ಎಂಬ ಎಂಬ ಸಾಲುಗಳಿರುವ ಸುದ್ದಿಯನ್ನು ಬೆಂಗಳೂರು ಸೆಂಟ್ರಲ್ ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಪ್ರಕಾಶ್ ರಾಜ್ ಜೊತೆಗಿರುವ ಫೋಟೋ ಜೊತೆ ಹಂಚಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದ್ದು ಇಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯ ಕುರಿತು ಪ್ರಕಾಶ್ ರಾಜ್ ಅವರನ್ನು ಟ್ರೂಥ್ ಇಂಡಿಯಾ ಸಂಪರ್ಕಿಸಲಾಗಿ, “ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ರಿಜ್ವಾನ್ ಆಪ್ರ ಸಹಾಯಕ ಎಂದು ಹೇಳಿಕೊಳ್ಳುವ ಮಜರ್ ಅಹ್ಮದ್ ಈ ಕೆಲಸ ಮಾಡುತ್ತಿದ್ದಾನೆ. ಇದು ಕಾಂಗ್ರೆಸ್ ನ ಅಸಹ್ಯ ರಾಜಕಾರಣಕ್ಕೆ ಉದಾಹರಣೆ, ಇವರು ರಾಜಕೀಯ ಮಾಡುವುದೇ ಹೀಗೆ ಎನ್ನಬಹುದೇನೋ” ಎಂದರು. “ಈ ಸುಳ್ಳುಸುದ್ದಿಯ ಕುರಿತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತಿದ್ದು, ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಿದ್ದೇವೆ” ಎಂದು ಪ್ರಕಾಶ್ ರಾಜ್ ತಿಳಿಸಿದರು.
ಈ ಸುಳ್ಳು ಸುದ್ದಿ ಹಾಗೂ ಫೋಟೋಗಳನ್ನು ಸ್ವತಃ ಅರ್ಷದ್ ರಿಜ್ವಾನ್ ಅವರ ತಂಡವೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಅರ್ಷದ್ ರಿಜ್ವಾನ್ ಆವರ ಆಪ್ತ ಸಹಾಯಕರೇ ಹಂಚಿರುವುದಾಗಿ ತಿಳಿದು ಬಂದಿದೆ.
“ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಗಳಿಸುತ್ತಿರುವ ಜನರ ಪ್ರೀತಿಯನ್ನು ನೋಡಿ ರಿಜ್ವಾನ್ ತಂಡದವರು ಭಯಬೀತರಾಗಿದ್ದಾರೆ, ಅವರೀಗ ಪ್ರಜತೆಗಳನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ, ಇಂತಹ ಫೇಕ್ ನ್ಯೂಸ್ ಮೂಲಕ” ಎಂದು ಪ್ರಕಾಶ್ ರಾಜ್ ಪರ ಪ್ರಚಾರ ತಂಡ ತಿಳಿಸಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಿಶಲ್ ಗುರುತಿನೊಂದಿಗೆ ಕಣದಲ್ಲಿರುವ ಪ್ರಕಾಶ್ ರಾಜ್, ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿಯ ಪಿ ಸಿ ಮೋಹನ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ಸುಳ್ಳು ಸುದ್ದಿ ಕುರಿತು ಪ್ರಕಾಶ್ ರಾಜ್ ಅವರು ರಿಜ್ವಾನ್ ಆಪ್ತ ಸಹಾಯಕರ ಬಳಿ ಮಾತಾಡಿರುವ ಫೋನ್ ಕರೆಯ ರೆಕಾರ್ಡಿಂಗ್.
ಸಂಬಂಧಿಸಿದ ಸುದ್ದಿಗಳು: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬೆಂಗಳೂರು ಸೆಂಟ್ರಲ್ ಕ್ಷೇತ್ರ: ಮಹಾನಗರದ ಹೃದಯದಲ್ಲಿ ಸೀಟಿ ಶಿಳ್ಳೆಗೆ ಬೆಚ್ಚಿಬೀಳುತ್ತಿರುವ ಬಿಜೆಪಿ, ಕಾಂಗ್ರೆಸ್!
ನಾನು ಸ್ಪರ್ಧಿಸಿರುವುದು ಕಾಂಗ್ರೆಸ್ ಗೆಲ್ಲುವ ಕ್ಷೇತ್ರದಿಂದ ಅಲ್ಲ: ಪ್ರಕಾಶ್ ರಾಜ್ ಸಂದರ್ಶನ ಭಾಗ-2
ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಗೆ ವಿಶಲ್ ಚಿಹ್ನೆ
ಪ್ರಕಾಶ್ ರಾಜ್ ರನ್ನು ಬೆಂಬಲಿಸದೇ ಕಾಂಗ್ರೆಸ್ ಕಳೆದುಕೊಂಡದ್ದೇನು?