“ತಮ್ಮ ಅಂಕಣ ‘ಬೆತ್ತಲೆ ಜಗತ್ತು’ ಮೂಲಕ ಕಟ್ಟಾ ಹಿಂದುತ್ವವಾದಿಯಾಗಿ ಜನಪ್ರಿಯನಾದ ವ್ಯಕ್ತಿಯ ಅಸಲೀತನ ಈಗ ಬೆತ್ತಲಾಗಿದೆ. ಹಿಂದುತ್ವ, ಸಂಸ್ಕೃತಿ, ಸಭ್ಯತೆ, ನಾಗರಿಕತೆ, ಸನಾತನ ಸಂಸ್ಕೃತಿಯ ಕುರಿತು ಜಗತ್ತಿಗೇ ಪಾಠ ಮಾಡುತ್ತಿದ್ದ ಆರ್ ಎಸ್ ಎಸ್ ವ್ಯಕ್ತಿಯೊಬ್ಬನ ಅಸಲೀ ಮುಖ ಈಗ ಬಯಲಾಗಿದೆ. ಇದು ನಿಜವಾದ ಬೆತ್ತಲೆ ಜಗತ್ತು” ಎಂದು ನೆಟ್ಟಿಗರು ಪ್ರತಾಪ ಸಿಂಹ ಅವರ ಕಾಲೆಳೆದಿದ್ದಾರೆ.
ಹಿಂದೂ ಸಂಸ್ಕೃತಿ ಮತ್ತು ಭಾರತೀಯತೆಯ ಮೇಲೆಯೇ ರಾಜಕೀಯ ನಡೆಸುವ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆಮತ್ತೆ ಮುಜಗರದ ಪರಿಸ್ಥಿತಿ ಎದುರಾಗುತ್ತಲೇ ಇದೆ. ಉಗ್ರ ಹಿಂದುತ್ವವಾದಿ ಎಂಬ ಮಾನದಂಡದ ಮೇಲೆಯೇ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿರುದ್ಧದ ಲೈಂಗಿಕ ಹಗರಣ ಸದ್ದು ಮಾಡಿದ ಬೆನ್ನಲ್ಲೇ ಇದೀಗ ಅದರ ಮತ್ತೊಬ್ಬ ಫೈರ್ ಬ್ರಾಂಡ್ ಸಂಸದರ ವಿರುದ್ಧ ಭಾರೀ ಲೈಂಗಿಕ ಹಗರಣ ಬೆಳಕಿಗೆ ಬಂದಿದೆ. ಆ ಮೂಲಕ ಸಂಸ್ಕೃತಿ ವಕ್ತಾರ ಪಕ್ಷ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.
ಮೈಸೂರು ಹಾಲಿ ಸಂಸದ ಹಾಗೂ ನಾಳೆ ಮತದಾನ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿ ಬಿಜೆಪಿ ಹುರಿಯಾಳಾಗಿರುವ ಆರ್ ಎಸ್ ಎಸ್ ಹಿನ್ನೆಲೆಯ ಪ್ರತಾಪ ಸಿಂಹ ಅವರದ್ದು ಎನ್ನಲಾದ ಲೈಂಗಿಕ ಹಗರಣ ಮತದಾನಕ್ಕೆ ಮುನ್ನಾ ದಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಫೇಸ್ಬುಕ್, ವಾಟ್ಸಪ್, ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದಲ್ಲಿ ನರೇಂದ್ರ ಮೋದಿಯವರ ಪಟ್ಟದ ಶಿಷ್ಯ, ಮಾಜಿ ಅಂಕಣಕಾರನದ್ದು ಎನ್ನಲಾಗಿರುವ ತೀರಾ ಅಹಸ್ಯಕಾರಿ, ವಿಕೃತಿಯ ಲೈಂಗಿಕ ಸಂಭಾಷಣೆ, ವಾಟ್ಸಪ್ ಮೆಸೇಜುಗಳ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ.
ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬರೊಂದಿಗೆ ನಡೆಸಿರುವ ಈ ಸಂಭಾಷಣೆ ಮತ್ತು ಚಾಟ್ ನೊಂದಿಗೆ ಸ್ವತಃ ಆ ಯುವತಿಯೇ ತನ್ನ ಸ್ವಹಸ್ತಾಕ್ಷರದಲ್ಲಿ ಮಾಧ್ಯಮಗಳಿಗೆ ಬಿಡುಗಡೆಮಾಡಿದ್ದರು ಎನ್ನಲಾದ ದೀರ್ಘ ಪತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಆ ಪತ್ರದಲ್ಲಿ ಆಕೆ “ಸಂಸದ ಪ್ರತಾಪ ಸಿಂಹ ಅವರಿಂದ ತನಗೆ ನಿರಂತರ ಲೈಂಗಿಕ ಕಿರುಕುಳ ಆಗುತ್ತಿದೆ. ತನ್ನೊಂದಿಗೆ ಹಲವು ದೂರವಾಣಿ ಸಂಖ್ಯೆ ಬಳಸಿ ತಾಸುಗಟ್ಟಲೆ ಮಾತನಾಡುತ್ತಿದ್ದ ಅವರು ತನ್ನ ಖಾಸಗೀ ಲೈಂಗಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ತನಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಅವರ ಕಿರುಕುಳ ಸಹಿಸಿಕೊಳ್ಳಲಾರದೆ ತಾನು ಈಗ ಮಾಧ್ಯಮದ ಮೊರೆ ಹೋಗುತ್ತಿದ್ದೇನೆ. ಒಂದು ವೇಳೆ ನಾಳೆ ಈ ವಿಷಯದಲ್ಲಿ ಏನೇ ಆದರೂ ಅದಕ್ಕೆ ಸಂಸದ ಪ್ರತಾಪ ಸಿಂಹ ಅವರೇ ಹೊಣೆ” ಎಂದು ಉಲ್ಲೇಖಿಸಿದ್ದು, ಆ ಪತ್ರ ಈಗ ವೈರಲ್ ಆಗಿದೆ. ಆದರೆ ಈ ದೂರು ಪತ್ರ ಅಸಲಿಯೇ ಅಥವಾ ನಕಲಿಯೇ ಎಂದು ದೃಢೀಕರಿಸಿಕೊಳ್ಳಲು ಟ್ರೂಥ್ ಇಂಡಿಯಾ ನ್ಯೂಸ್ ಪ್ರಯತ್ನಶೀಲವಾಗಿದೆ.
“ತಮ್ಮ ಅಂಕಣ ‘ಬೆತ್ತಲೆ ಜಗತ್ತು’ ಮೂಲಕ ಕಟ್ಟಾ ಹಿಂದುತ್ವವಾದಿಯಾಗಿ ಜನಪ್ರಿಯನಾದ ವ್ಯಕ್ತಿಯ ಅಸಲೀತನ ಈಗ ಬೆತ್ತಲಾಗಿದೆ. ಹಿಂದುತ್ವ, ಸಂಸ್ಕೃತಿ, ಸಭ್ಯತೆ, ನಾಗರಿಕತೆ, ಸನಾತನ ಸಂಸ್ಕೃತಿಯ ಕುರಿತು ಜಗತ್ತಿಗೇ ಪಾಠ ಮಾಡುತ್ತಿದ್ದ ಆರ್ ಎಸ್ ಎಸ್ ವ್ಯಕ್ತಿಯೊಬ್ಬನ ಅಸಲೀ ಮುಖ ಈಗ ಬಯಲಾಗಿದೆ. ಇದು ನಿಜವಾದ ಬೆತ್ತಲೆ ಜಗತ್ತು” ಎಂದು ನೆಟ್ಟಿಗರು ಪ್ರತಾಪ ಸಿಂಹ ಅವರ ಕಾಲೆಳೆದಿದ್ದಾರೆ.
ಈ ನಡುವೆ, ಆ ಯುವತಿ, “ಅವರಿಗೆ ತನ್ನಂತೆಯೇ ಹಲವು ಹೆಣ್ಣುಮಕ್ಕಳ ಜೊತೆ ನಂಟಿತ್ತು. ತನ್ನ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಹುಡುಗಿಯರನ್ನು ಮನೆಗೆ ಕರೆಸಿಕೊಂಡು ಬಳಸಿಕೊಳ್ಳುತ್ತಿದ್ದರು” ಎಂಬ ಗಂಭೀರ ಆರೋಪವನ್ನೂ ಪತ್ರದಲ್ಲಿ ಮಾಡಿದ್ದು, ಸಂಸದರು ಬಳಸುತ್ತಿದ್ದರು ಎನ್ನಲಾದ ಹಲವು ಮೊಬೈಲ್ ಸಂಖ್ಯೆಗಳನ್ನೂ ಪತ್ರದಲ್ಲಿ ನೀಡಿದ್ದಾರೆ. ಅಲ್ಲದೆ, ಯುವತಿ ಮತ್ತು ಸಂಸದ ಪ್ರತಾಪ ಸಿಂಹ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ಸಂಚಲನ ಮೂಡಿಸಿವೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಮಾದ್ಯಮ ಸಂಸ್ಥೆಗೆ ನೀಡಿರುವ ದೂರು ಎಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ದೂರು ಪತ್ರದ ಚಿತ್ರಗಳು
ಸಂಭಾಷಣೆಯಲ್ಲಿಯೂ ಸಂಸದ ಪ್ರತಾಪ ಸಿಂಹನದ್ದು ಎನ್ನಲಾದ ಧ್ವನಿಯಲ್ಲಿ ಅತ್ಯಂತ ಅಸಹ್ಯವಾದ ಮತ್ತು ವಿಕೃತ ಕಾಮದ ವರಸೆಯ ವಿವರಗಳಿದ್ದು, “ವಿವಾಹಿತನಾಗಿ ಒಂದು ಹೆಣ್ಣುಮಗುವಿನ ತಂದೆಯಾಗಿರುವ ವ್ಯಕ್ತಿಯೊಬ್ಬ ಅಷ್ಟು ಕೀಳು ಮಟ್ಟದಲ್ಲಿ ಮತ್ತೊಬ್ಬ ಹೆಣ್ಣುಮಗಳೊಂದಿಗೆ ಮಾತನಾಡಬಹುದೆ? ಅದೂ ಹಿಂದೂ ಸಂಸ್ಕೃತಿಯ, ಭಾರತೀಯ ಸನಾತನ ಧರ್ಮದ ಉದ್ಧಾರವೇ ತಮ್ಮ ಪರಮ ಧರ್ಮ ಎಂದು ಜನರನ್ನು ನಂಬಿಸುವ ಜನಪ್ರತಿನಿಧಿಗಳು ಇಷ್ಟು ವಿಕೃತರಾಗಿದ್ದಾರೆಯೇ?” ಎಂಬ ಪ್ರಶ್ನೆ ಕೇಳಿಬಂದಿದೆ.
ವೈರಲ್ ಆಗಿರುವ ಹಲವು ವಾಟ್ಸಾಪ್ ಸ್ಕ್ರೀನ್ ಶಾಟ್ ಗಳಲ್ಲಿ ಒಂದು
ಯುವತಿ ತನ್ನೊಂದಿಗೆ ಹೇಗೆಲ್ಲಾ ಸಂಸದರು ಮಾತನಾಡುತ್ತಿದ್ದರು ಮತ್ತು ದೆಹಲಿಗೆ ಕರೆದಿದ್ದು, ಮನೆಗೆ ಕರೆಸಿಕೊಳ್ಳುತ್ತಿದುದು ಹಾಗೂ ತಾನು ಆಸ್ಪತ್ರೆಗೆ ದಾಖಲಾದಾಗ ತನ್ನನ್ನು ಖಾಸಗಿಯಾಗಿ ಭೇಟಿಯಾಗಲು ಆಗುವುದಿಲ್ಲ ಎಂದು ಮೂರನೇ ಮಹಡಿಯಿಂದ ಐದನೇ ಮಹಡಿಗೆ ತಮ್ಮ ಪ್ರಭಾವ ಬಳಸಿ ಬದಲಾಯಿಸಿದ್ದು, ವೀಡಿಯೋ ಕಾಲ್ ಮಾಡಿ ಗಂಟಗಟ್ಟಲೆ ಮಾತನಾಡುತ್ತಿದ್ದುದು ಎಲ್ಲವನ್ನೂ ಪತ್ರದಲ್ಲಿ ವಿವರಿಸಿದ್ದು, ಆ ಕುರಿತ ಸ್ಕ್ರೀನ್ ಶಾಟ್ ಮತ್ತು ವೀಡಿಯೋಗಳನ್ನು ಕೂಡ ಮಾಧ್ಯಮಗಳಿಗೆ ನೀಡಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ, ಅವರು ತನ್ನೊಂದಿಗೆ ಮಾತನಾಡಲು ಬಳಸುತ್ತಿದ್ದ ನಾಲ್ಕು ಮೊಬೈಲ್ ಸಂಖ್ಯೆಗಳನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವೈರಲ್ ಆಗಿರುವ ವಾಟ್ಸಾಪ್ ನಲ್ಲಿರುವ ಮೊಬೈಲ್ ಸಂಖ್ಯೆಯು 07678584846 ಎಂದಿದ್ದು ಟ್ರೂಕಾಲರ್ ಮೂಲಕ ಪರೀಕ್ಷಿಸಿದಾಗ Pratap Simha MP, Delhi ಎಂಬ ಫಲಿತಾಂಶ ಬರುತ್ತಿದೆ.
ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸಂಸದ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ ಸಿಂಹ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಮತ್ತು ವ್ಯಂಗ್ಯ ಮುಗಿಲುಮುಟ್ಟಿವೆ.
ತನ್ನ ಸಿದ್ದಾಂತವನ್ನು ಒಪ್ಪದ ಮಹಿಳೆಯರ ಕುರಿತು ತುಚ್ಛವಾಗಿ ಮಾತಾಡುತ್ತಿದ್ದ, ಬರೆಯುತ್ತಿದ್ದ ಪ್ರತಾಪ ಸಿಂಹ ಅವರನ್ನು ಖಾರವಾಗಿ ಪ್ರಶ್ನಿಸುವ ಕೆಲಸವೂ ಫೇಸ್ಬುಕ್ ನಲ್ಲಿ ನಡೆದಿದೆ.
ಈ ನಡುವೆ, ಆ ಯುವತಿ ಇಂತಹ ಗಂಭೀರ ವಿಷಯವನ್ನು ಪೊಲೀಸರಿಗೆ ದೂರು ನೀಡುವ ಬದಲಾಗಿ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಏಕೆ ಬೆಳಕಿಗೆ ತಂದಿದ್ದಾರೆ? ಆಕೆ ಮತ್ತು ಸಂಸದರ ನಡುವಿನ ಸಂಭಾಷಣೆಯ ಧ್ವನಿಮುದ್ರಿಕೆ ಮತ್ತು ಚಾಟ್ ಸ್ಕ್ರೀನ್ ಶಾಟ್ ಗಳ ಸಾಚಾತನದ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ ಈಗಾಗಲೇ ರಾತ್ರಿ ಕಳೆದ ಅರ್ಧ ದಿನವೇ ಕಳೆದಿದ್ದರೂ ಸಂಸದ ಪ್ರತಾಪ ಸಿಂಹ ಅವರಾಗಲೀ, ಬಿಜೆಪಿಯಾಗಲೀ ಅಥವಾ ಅವರ ಮಾತೃಸಂಸ್ಥೆ ಆರ್ ಎಸ್ ಎಸ್ ಆಗಲೀ ಈವರೆಗೆ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುಳ್ಳೆಂದು ತಳ್ಳಿ ಹಾಕುವ ಯತ್ನವನ್ನೂ ಮಾಡಿಲ್ಲ! ಬಿಜೆಪಿ ಮಹಿಳಾ ನಾಯಕಿಯರು ಕೂಡ ಯಾರೂ ತುಟಿಬಿಚ್ಚಿಲ್ಲ!! ಇದೊಂದು ಪ್ರತಿಪಕ್ಷಗಳ ಕುತಂತ್ರವೇ ಅಥವಾ ಆ ಯುವತಿಯ ನೈಜ ನೋವಿನ ಕಟ್ಟೆಯೊಡದೆ ಸಹನೆಯ ಸ್ಫೋಟವೇ ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಿದೆ.
ಮಹಿಳಾ ಆಯೋಗ ಮತ್ತು ಮಾನವಹಕ್ಕು ಆಯೋಗದಂತಹ ವ್ಯವಸ್ಥೆಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆಯನ್ನು ಹೊರಗೆಳೆಯುವ ಮೂಲಕ ಸಂಸದರಿಗಾಗಲೀ ಅಥವಾ ಆ ಯುವತಿಗಾಗಲೀ ಅನ್ಯಾಯವಾಗದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನ್ಯಾಯ ಒದಗಿಸಬೇಕಿದೆ ಎಂಬ ಕೂಗು ಕೂಡ ಕೇಳಿಬಂದಿದೆ.
ಒಟ್ಟಾರೆ ಮತದಾನಕ್ಕೆ ಮುನ್ನಾ ದಿನ ಭರ್ಜರಿ ಸದ್ದು ಮಾಡಿರುವ ಈ ಲೈಂಗಿಕ ಹಗರಣ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮೇಲೆ ಏನು ಪರಿಣಾಮ ಬೀರುವುದು ಎಂಬುದು ಮಾತ್ರ ಕುತೂಹಲಹುಟ್ಟಿಸಿದೆ.
Nimm hatra scrrenshot audio photos idre kalsi ella bariodanna buttu sumne eri documents idre matadi bareyiri
Vabba soumsadan mele documents illade arop maduvud tappu
Nimm hatra scrrenshot audio photos idre kalsi ella bariodanna buttu sumne eri documents idre matadi bareyiri
Vabba soumsadan mele documents illade arop maduvud tappu