ದೇಶಾದ್ಯಂತ ಎರಡನೆ ಹಂತದ ಲೋಕಸಭಾ ಚುನಾವಣೆ ಆರಂಭವಾಗಿದೆ. ದೇಶದ 12 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 95 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಒಟ್ಟು 1596 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಅಂದಾಜು 15 ಕೋಟಿ ಜನತೆ ತಮ್ಮ ಸಂಸದರ ಆಯ್ಕೆಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲಿದ್ದಾರೆ.
ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಮೌಲ್ಯದ ಹಣ ಪತ್ತೆಯಾದ ಕಾರಣ ಇಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ ಹಾಗೂ ಕಾನೂನು ಸುವ್ಯವಸ್ಥೆಯ ಕಾರಣದಿಂದ ಪೂರ್ವ ತ್ರಿಪುರಾದಲ್ಲೂ ಚುನಾವಣೆ ಮುಂಡೂಡಲಾಗಿದ್ದು, ವೆಲ್ಲೂರು ಹಾಗೂ ಪೂರ್ವ ತ್ರಿಪುರಾದ ಚುನಾವಣೆಯನ್ನು ಏಪ್ರಿಲ್ 23ರಂದು ನಡೆಸಲಾಗುವುದು.
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳೂ ಸೇರಿದಂತೆ, ಅಸ್ಸಾ 5, ಬಿಹಾರ 5, ಛತ್ತೀಸ್ ಗಡ 3, ಜಮ್ಮು ಮತ್ತು ಕಾಶ್ಮೀರ 2, ಮಹಾರಾಷ್ಟ್ರ 10, ಮಣಿಪುರ 1, ಒಡಿಶಾ 5, ತಮಿಳುನಾಡು 38, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳ 3, ಪಾಂಡಿಚೆರಿ 1 ಕ್ಷೇತ್ರಗಳಲ್ಲಿ ಇಂದು ಮತದಾನ ಆರಂಭವಾಗಿದೆ.
ಕರ್ನಾಟಕದ 14 ಕ್ಷೇತ್ರಗಳಲ್ಲಿ ಹಲವು ದಿಗ್ಗಜರು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ನಟ ಸುದೀಪ್ ಸೇರಿಂದತೆ ಹಲವರು ತಮ್ಮ ಮತ ಚಲಾಯಿಸಿದರು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜನಯನಗರದ 57ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಚಾಮರಾಜನಗರದ ಸೇರಿದಂತೆ ರಾಜ್ಯದ ಕೆಲವೆಡೆ ಮತದಾನ ಯಂತ್ರದ ದೋಷದಿಂದ ಮತದಾನ ಪ್ರಕ್ರಿಯೆ ತಡವಾಗಿ ಆರಂಭವಾಯಿತು.