ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ನಾಪತ್ತೆ ಎಂದು ಅವರ ಮಗ ಪೊಲೀಸರಿಗೆ ದೂರು ನೀಡಿದ್ದಾರೆ.
ಏಪ್ರಿಲ್ 23ರಂದು ಮತದಾನ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ
ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಯುಸುಫ್ ಖಾನ್ ನಾಪತ್ತೆ ಆಗಿರುವ ಅಭ್ಯರ್ಥಿ.
ಈ ಕುರಿತು ಅವರ ಮಗ ರೆಹಮಾನ್ ಶಿವಮೊಗ್ಗ ಪೊಲೀಸರುಗೆ ದೂರು ನೀಡಿದ್ದಾರೆ.
ಕಳೆದ ರಾತ್ರಿ ಮನೆಯಿಂದ ಹೊರಹೋದ ಯುಸುಫ್ ಬೆಳಿಗ್ಗೆಯಾದರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ನಗರದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಲಾಗಿದೆ.
ಅಭ್ಯರ್ಥಿ ಪತ್ತೆಗಾಗಿ ಪೊಲೀಸರ ಕಾರ್ಯಾಚರಣೆ ಆರಂಭಿಸಿದ್ದಾರೆ.