26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿ ಉಗ್ರ ಕಸಬ್ ನಿಂದ ಹತ್ಯೆಗೊಳಗಾಗಿದ್ದ ಪೊಲೀಸ್ ಅಧಿಕಾರಿ, ಹುತಾತ್ಮ ಹೇಮಂತ್ ಕರ್ಕರೆ ತನ್ನ ಶಾಪದಿಂದಲೇ ಸತ್ತಿದ್ದು ಎಂದು ಹೇಳುವ ಮೂಲಕ ಈಗಾಗಲೇ ವಿವಾದಕ್ಕೊಗಳಗಾಗಿರುವ ಬಿಜೆಪಿ ಅಭ್ಯರ್ಥಿ ಹಾಗೂ ಮಾಲೆಗಾಂವ್ ಸ್ಫೋಟ ಭಯೋತ್ಪಾದನಾ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೋರ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ನಿಷ್ಟಾವಂತ, ದಕ್ಷ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಮಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದರಲ್ಲದೇ ಅದರ ರೂವಾರಿ ಎನ್ನಲಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಳನ್ನು ಬಂಧಿಸಿದ್ದರು. ಆದರೆ ತನಿಖೆ ಚಾಲ್ತಿಯಲ್ಲಿರುವಾಗಲೇ ಮುಂಬೈ ಉಗ್ರ ದಾಳಿ ಪ್ರಕರಣ ನಡೆದಿತ್ತು. ದಾಳಿಯ ಸಂಪೂರ್ಣ ಮಾಹಿತಿ ಇಲ್ಲದೇ, ಸೂಕ್ತ ರಕ್ಷಣಾ ವ್ಯವಸ್ಥೆಯೂ ಇಲ್ಲದೇ ದಾಳಿ ನಡೆದ ಸ್ಥಳಕ್ಕೆ ಜನರ ಜೀವ ರಕ್ಷಿಸಲು ಧಾವಿಸಿದ್ದ ಹೇಮಂತ್ ಕರ್ಕರೆಯನ್ನು ಉಗ್ರ ಕಸಬ್ ಕೊಂದಿದ್ದನು.
ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು, ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಪ್ರಗ್ಯಾ ಸಿಂಗ್ ಅವರು ತನ್ನ ಶಾಪದಿಂದಲೇ ಹೇಮಂತ್ ಕರ್ಕರೆ ಸತ್ತಿದ್ದು ಎಂದಿದ್ದಾಳೆ. (ವಿಡಿಯೋ ನೋಡಿ) ಸಾಧ್ವಿ ಹೀಗೆ ಹೇಳಿರುವುದನ್ನು ಎಎಸ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದರಲ್ಲಿ “ನಾನು ಹೇಳಿದ್ದೆ ನೀನು ಸರ್ವನಾಶ ಆಗ್ತೀಯ ಅಂತ… ಸರಿಯಾಗಿ ಒಂದು ಕಾಲು ತಿಂಗಳಲ್ಲಿ ಸೂತಕ ಕಾಣಿಸುತ್ತದೆ.
ನಾನು ಹೊರಟ ದಿನವೇ ಇವನ ಸೂತಕ ಆಗಿಹೋಗಿತ್ತು. ಅಲ್ಲದೇ ಸರಿಯಾಗಿ ಒಂದೂಕಾಲು ತಿಂಗಳಲ್ಲಿ ಯಾವ ದಿನದಂದು ಭಯೋತ್ಪಾದಕರು ಇವನನ್ನು ಹೊಡೆದುಹಾಕಿದರೊ, ಆಗಲೇ ಅವನ ಅಂತ್ಯವಾಯಿತು”
#WATCH Pragya Singh Thakur:Maine kaha tera (Mumbai ATS chief late Hemant Karkare) sarvanash hoga.Theek sava mahine mein sutak lagta hai. Jis din main gayi thi us din iske sutak lag gaya tha.Aur theek sava mahine mein jis din atankwadiyon ne isko maara, us din uska anth hua (18.4) pic.twitter.com/COqhEW2Bnc
— ANI (@ANI) April 19, 2019
ಕೇಸರಿ ಭಯೋತ್ಪಾದನೆ ಆರೋಪದಲ್ಲಿ ಹಲವರನ್ನು ಬಂಧಿಸಿದ್ದ ಹೇಮಂತ್ ಕರ್ಕರೆಯವರ ಹತ್ಯೆಯಾದ ಬಳಿಕ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿಮಾನದ ಮೂಲಕ ಮುಂಬೈಗೆ ಹೋಗಿ ಕರ್ಕರೆಯವರ ವಿಧವೆ ಪತ್ನಿಗೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಘೋಷಿಸಿದ್ದರು. ಆದರೆ ಇದನ್ನು ಕರ್ಕರೆ ಪತ್ನಿ ನಯವಾಗಿ ತಿರಸ್ಕರಿಸಿದ್ದರು.
ಮಲೆಗಾಂವ್ ರೈಲು ಸ್ಫೋಟ ಭಯೋತ್ಪಾದಕ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿಂದ ಹೊರಕ್ಕೆ ಬಂದಿರುವ ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಜೆಪಿಯು ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಈ ಕುರಿತು ಈಗಾಗಲೇ ದೇಶದಾದ್ಯಂತ ಆಕ್ರೋಶ ವ್ಯಕ್ತಗೊಂಡಿದೆ. ಸ್ಫೋಟ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡವರು ಕುಟುಂಬಸ್ಥರು ಚುನಾವಣಾ ಆಯೋಗಕ್ಕೂ ಮನವಿ ಮಾಡಿ ಸಾಧ್ವಿ ಅವರನ್ನು ಚುನಾವಣಾ ಕಣದಿಂದ ಕೆಳಕ್ಕಿಳಿಸುವಂತೆ ಕೋರಿದ್ದಾರೆ.
ಈಗ ಸಾಧ್ವಿ ಹೇಮಂತ್ ಕರ್ಕರೆ ತನ್ನ ಶಾಪದಿಂದ ಸತ್ತಿರುವುದು ಎಂದು ಹೇಳಿರುವುದು ವರದಿಯಾಗುತ್ತಿದ್ದಂತೆ ಮತ್ತೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರರಿಂದ ದೇಶವನ್ನು ರಕ್ಷಿಸಲು ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೋಗಿ ಕೊನೆಗೆ ಹುತಾತ್ಮನಾದ ಒಬ್ಬ ಅಧಿಕಾರಿಯ ಬಗ್ಗೆ ಸಾಧ್ವಿ ಹೇಳಿಕೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತಿದೆ, ಇವರಿಗೂ ಭಯೋತ್ಪಾದಕರಿಗೂ ವ್ಯತ್ಯಾಸವಿಲ್ಲ, ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಟ್ವಿಟರ್ ಮೂಲಕ ಕೆಲವರು ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವುದು ಹೀಗೆ
“ಎಂತಾ ಕೋಆರ್ಡಿನೇಶನ್. ನೀವು ಹೇಮಂತ್ ಕರ್ಕರೆ ಅವರಿಗೆ ಶಾಪ ಕೊಟ್ರಿ, ಕೂಡಲೇ ಕಸಬ್ ನಿಮ್ಮ ಕನಸು ಈಡೇರಿಸಿಬಿಟ್ಟ. ನಿಜವಾಗಿಯೂ ಆತಂಕವಾದಕ್ಕೆ ಯಾವುದೇ ಧರ್ಮವಿಲ್ಲ”
Kya coordination hai!
Aapne shaap diya Hemant Karkare ko.. aur Kasab ne aapka sapna poora kar diya! (Listen to Pragya Thakur)
Sach me aatankwad ka koi dharm nahi hota.. https://t.co/oEDwnvzuXT
— Anupam | अनुपम (@AnupamConnects) April 19, 2019
"ಟೆರರಿಸ್ಟ್ ಮತ್ತು ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಒಬ್ಬ ಹುತಾತ್ಮ- ದೇಶವನ್ನು ರಕ್ಷಿಸಲು ಪ್ರಾಣ ನೀಡಿದ ಒಬ್ಬ ಚೌಕೀದಾರನನ್ನು ಅವಪಾಮಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಮೋದಿ ಬೇರೆಯವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಈಗ ಬಿಜೆಪಿ ಸಾಧ್ವಿಯನ್ನು ಕೈಬಿಡದಿದ್ದರೆ ನಾವು ಬಿಜೆಪಿಗೂ ISIಗೂ ವ್ಯತ್ಯಾಸವಿಲ್ಲ ಎಂದು ಭಾವಿಸಬೇಕಾಗುತ್ತದೆ"
Terrorist & BJP candidate Sadhvi Pragya has insulted a martyr – a chowkidar- who died protecting the nation.
Few hours ago Modi was calling others anti national
If BJP doesnt sack her , we shouldn't differentiate between BJP and ISI anymore
— Sid (@sidmtweets) April 19, 2019
"ದೇಶದ ಅತ್ಯುತ್ತಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ… ಅವರ ಧೀಮಂತಿಕೆ ಬಗ್ಗೆ ಹೇಳಲು ಕತೆಗಳೇ ಇವೆ. ಅಂತಹ ಒಬ್ಬ ಅಧಿಕಾರಿಯ ಬಗ್ಗೆ ಕೀಳಾಗಿ ಪ್ರಗ್ಯಾ ಠಾಕೂರ್ ಮಾತಾಡುವುದು, ಬಿಜೆಪಿ ಪಕ್ಷ ಏನು ಎನ್ನುವುದನ್ನು ತಿಳಿಸುತ್ತದೆ.. ಒತ್ತಾಯಪೂರ್ವಕ ಭಿನ್ನಮತೀಯನ ಬಗ್ಗೆ ಮಿಸ್ಟರ್ ಅರುಣ್ ಜೈಟ್ಲಿ ಬ್ಲಾಗ್ ನಲ್ಲಿ ಏನು ಬರೀತಾರೆ ಎಂದು ಕಾಯ್ತಾ ಇದೀನಿ"
Hemant Karkare one of the finest police officers India has produced… tales and tales of his bravery… Pragya Thakur speaking ill of him even after he laying down his life for us, says volumes abt BJP as party… look forward to Mr. Jaitley blog on compulsive contrarian!
— arun giri (@arungiri) April 19, 2019