ರಾಯಲ್ ಸೊಸೈಟಿ ಆಫ್ ಲಂಡನ್ 2019ನೇ ಸಾಲಿನ ಫೆಲೋಶಿಪ್ ಗೆ 51 ಶ್ರೇಷ್ಠ ವಿಜ್ಞಾನಿಗಳು ಆಯ್ಕೆಯಾಗಿದ್ದು, ಈ ಪಟ್ಟಿಯಲ್ಲಿ ಭಾರತದ ಗಂಗಾದೀಪ ಕಾಂಗ್ ಸಹ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಯಲ್ ಸೊಸೈಟಿ ಫೇಲೋಶಿಪ್ ಗೆ ಆಯ್ಕೆಯಾದ ಭಾರತದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗಂಗಾದೀಪ ಕಾಂಗ್ ಅವರು ಪ್ರಸ್ತುತ ಫರೀದಾಬಾದ್ ನ ಭಾಷಾಂತರ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಂಗಾದೀಪ ಜೊತೆಗೆ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಮಂಜುಳ್ ಭಾರ್ಗವ ಮತ್ತು ಅಕ್ಷಯ್ ವೆಂಕಟೇಶ್ ಸಹ ಆಯ್ಕೆಯಾಗಿದ್ದಾರೆ.
ರಾಯಲ್ ಸೊಸೈಟಿಗೆ ಸುದೀರ್ಘ ಇತಿಹಾಸವಿದ್ದು, ಮನುಷ್ಯನಿಗೆ ಉಪಯೋಗವಾಗುವಂತೆ ವಿಜ್ಞಾನ ಬಳಕೆಯಾಗಬೇಕು ಎಂಬ ಉದ್ದೇಶವನ್ನು ಹೊಂದಿದೆ. ಅದರಂತೆ ನಮ್ಮ ಎಲ್ಲಾ ಫೆಲೋಶಿಪ್ ಗಳು ಸಹ ಇದನ್ನು ಅರ್ಥೈಸಿಕೊಂಡು ಇದೇ ಉದ್ದೇಶವನ್ನು ನಿರಂತರವಾಗಿ ಸಾಕಾರಗೊಳಿಸುತ್ತಿದ್ದಾರೆ ಎಂದು ರಾಯಲ್ ಸೊಸೈಟಿಯ ಅಧ್ಯಕ್ಷ ಪ್ರೊಫೆಸರ್ ವೆಂಕಿ ರಾಮಕೃಷ್ಣ ತಿಳಿಸಿದ್ದಾರೆ.
ಗಂಗಾದೀಪ ಅವರು ಪ್ರಸರಣ ಹಾಗೂ ಅಭಿವೃದ್ಧಿ ಕುರಿತ ಅಂತರ್-ಶಿಸ್ತೀಯ ವಿಷಯದ ಬಗ್ಗೆ ಸಂಶೋಧನೆ ಹಾಗೂ ಭಾರತದ ಮಕ್ಕಳಲ್ಲಿ ಕರುಳಿನ ಸೋಂಕು ತಡೆಗಟ್ಟುವುದು ಮತ್ತು ಅದರ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿ ಪ್ರಖ್ಯಾತಿಯಾಗಿದ್ದಾರೆ.
ಅಷ್ಟೇ ಅಲ್ಲದೆ, ರಾಷ್ಟ್ರೀಯ ರೋಟಾವೈರಸ್ ಮತ್ತು ಟೈಫಾಯ್ಡ್ ನ ಕಣ್ಗಾವಲು ನೆಟ್ ವರ್ಕ್ ರಚಿಸಿ 1ರಿಂದ 3 ಹಂತದಲ್ಲಿ ಲಸಿಕೆಗಳನ್ನು ನೀಡಿದ್ದಾರೆ, ಇದು ವಿಶ್ವ ಆರೋಗ್ಯ ಸಂಸ್ಥೆಗೆ ಪೂರಕವಾಗಿ ಈ ಸೇವೆಯನ್ನು ಮಾಡಲಾಗಿದೆ. ಇಸ್ಫೋಸಿಸ್ ಪ್ರಶಸ್ತಿ ಸೇರದಿಂತೆ ಹಲವು ಪ್ರಶಸ್ತಿಗಳನ್ನು ಗಂಗಾದೀಪ ಕಾಂಗ್ ಅವರು ತಮ್ಮದಾಗಿಸಿಕೊಂಡಿದ್ದಾರೆ ಎಂದು ರಾಯಲ್ ಸೊಸೈಟಿಯ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.
ಪ್ರಿನ್ಸ್ ಟನ್ ವಿವಿಯ ಪ್ರೊಫೆಸರ್ ಆಗಿರುವ ಮಂಜುಳ್ ಭಾರ್ಗವ್ ಅವರು 2014ರಲ್ಲಿ ಫೀಲ್ಡ್ಸ್ ಮೆಡಲ್ ಮತ್ತು ಅಕ್ಷಯ್ ವೆಂಕಟೇಶ್ ಅವರೂ ಸಹ 2018ರಲ್ಲಿ ಈ ಗೌರವನ್ನು ಪಡೆದಿದ್ದಾರೆ ಎನ್ನಲಾಗಿದೆ.