ಇತ್ತೀಚೆಗೆ ಇಂಡಿಯಾ ಟುಡೆ ಟಿವಿ ಸಂವಾದದಲ್ಲಿ, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಮತ್ತು ಬಿಜೆಪಿ ಐಟಿ ಸೆಲ್ ನ ಅಮಿತ್ ಮಾಳವಿಯ ನಡುವೆ ವಾಗ್ವಾದ ನಡೆದಿತ್ತು. 2014ರ ಚುನಾವಣೆಯಲ್ಲಿ ಯೋಗೇಂದ್ರ ಯಾದವ್ ಅವರು ಮುಸ್ಲಿಂ ಹೆಸರು ಹೇಳಿಕೊಂಡು ಪ್ರಚಾರ ಮಾಡಿದ್ದಾಗಿ ಅಮಿತ್ ಮಾಳವಿಯ ಆರೋಪಿಸಿದ್ದರು. ಈ ಆರೋಪವನ್ನು ಸಾಬೀತುಪಡಿಸಲು ಸಾಕ್ಷಿ ನೀಡುವಂತೆ ಇಲ್ಲವಾದರೆ “ಬಾಯಿ ಮುಚ್ಚುವಂತೆ” ಇಂಡಿಯಾ ಟುಡೆ ಸಂವಾದದಲ್ಲಿ ಯಾದವ್ ಮಾಳವಿಯಗೆ ಸವಾಲೆಸಿದಿದ್ದರು. ಗಲಭೆಯಲ್ಲಿ ತಮ್ಮ ತಾತನನ್ನು ಮುಸ್ಲಿಮ್ ಗುಂಪೊಂದು ಕೊಂದಿದ್ದರೂ ಸಹ ತಮ್ಮ ತಂದೆ ತಮಗೆ ಮತ್ತು ತಮ್ಮ ಒಡಹುಟ್ಟಿದವರಿಗೆ ಮುಸ್ಲಿಂ ಹೆಸರುಗಳನ್ನಿಟ್ಟಿದ್ದನ್ನು ಯಾದವ್ ಆ ಚರ್ಚೆಯಲ್ಲಿ ನೆನೆಸಿಕೊಂಡಿದ್ದರು. ಅಲ್ಲದೆ ಇಂತಹ ಮಾನವೀಯತೆ, ಸಹಬಾಳ್ವೆಯ ವಿಷಯಗಳೆಲ್ಲಾ ಮಾಳವಿಯ ಅವರಿಗೆ ಅರ್ಥವಾಗದ ವಿಷಯ ಎಂದೂ ಸೂಕ್ಷ್ಮವಾಗಿ ಚುಚ್ಚಿದ್ದರು.
ಈ ಚರ್ಚೆ ಸಾಮಾಜಿಕ ಮಾಧ್ಯಮವನ್ನೂ ಪ್ರವೇಶಿಸಿತ್ತು.
ನಾನು 2014ರ ಚುನಾವಣೆಯಲ್ಲಿ ನನ್ನ ಹೆಸರನ್ನು ಸಲೀಂ ಎಂದು ಹೇಳಿಕೊಂಡು ಮುಸಲ್ಮಾನರ ಬಳಿ ಮತ ಯಾಚಿಸಿದ್ದೆನೆಂದು ಬಿಜೆಪಿ ನನ್ನ ಮೇಲೆ ಆರೋಪ ಹೊರಿಸಿತ್ತು.
ಆ ಚುನಾವಣೆಯ ಒಂದೇ ಒಂದು ವಿಡೀಯೊ ತೋರಿಸಿಬಿಟ್ಟರೆ ನಾನು ಸಾರ್ವಜನಿಕ ಜೀವನದಿಂದ ಸನ್ಯಾಸತ್ವ ತೆಗೆದುಕೊಳ್ಳುವೆ ಎಂದು ನಾನು ಅವರಿಗೆ ಸವಾಲೆಸೆದಿದ್ದೆ.
ಆನಂತರ ಬಿಜೆಪಿ ಒಂದು ಪ್ರಮಾಣೀಕೃತವಾದ ವಿಡೀಯೊ ಹೊರತಂದೇಬಿಟ್ಟಿತು, ಅದೂ 2018ರ ಒಂದು ಶೋಕಸಭೆಯದ್ದು!
ಇದರ ಪೂರಾ ಕತೆ ಕೇಳಿ..
— ಯೋಗೇಂದ್ರ ಯಾದವ್
बीजेपी ने मुझ पर आरोप लगाया कि मैंने 2014 चुनाव में अपना नाम सलीम बताकर मुसलमानों के वोट मांगे।
मैंने चुनौती दी कि उस चुनाव का एक वीडियो दिखा दो, मैं सार्वजनिक जीवन से संन्यास ले लूंगा।
फिर बीजेपी ने प्रमाण के तौर पर एक वीडियो जारी किया, 2018 की एक शोक सभा का!
पूरा किस्सा सुनिए: pic.twitter.com/i0G3rflWt5— Yogendra Yadav (@_YogendraYadav) April 20, 2019
ಇದಕ್ಕೆ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಮಾಳವಿಯ ಒಂದು ವಿಡೀಯೊ ತುಣುಕನ್ನು ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು. ಯಾದವ್ “ಮುಸ್ಲಿಮ್ ಪ್ರಾಬಲ್ಯದ ಮೇವತ್ ನಲ್ಲಿ ಬಹುತೇಕ ಮುಸ್ಲಿಮರಿದ್ದ ಸಭೆಯಲ್ಲಿ ತನ್ನ ಮುಸ್ಲಿಮ್ ಗುರುತಿನ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿರುವುದಾಗಿ” ಈ ವಿಡೀಯೊದಲ್ಲಿನ ದೃಶ್ಯಾವಳಿ ತೋರಿಸುತ್ತಿತ್ತು.
I usually don’t carry TV debates to social media but making an exception to expose @_YogendraYadav’s janus face. Here is a video where he can be seen bragging his Muslim identity to a largely Muslim audience in Muslim dominated Mewat. If this isn’t cynical politics, then what is? pic.twitter.com/sPeHqaILpB
— Chowkidar Amit Malviya (@amitmalviya) April 19, 2019
(ನಾನು ಸಾಮಾನ್ಯವಾಗಿ ಟಿವಿ ಚರ್ಚೆಗಳನ್ನು ಸಾಮಾಜಿಕ ಮಾಧ್ಯಮಕ್ಕೆ ತರುವುದಿಲ್ಲ. ಆದರೆ @_YogendraYadav ಮುಖವಾಡವನ್ನು ಬಯಲುಗೊಳಿಸುವ ಸಲುವಾಗಿ ಮಾತ್ರ ಈಗ ಇದನ್ನು ಚರ್ಚೆಗೆ ತರುತ್ತಿದ್ದೇನೆ. ಮುಸ್ಲಿಮ್ ಪ್ರಾಬಲ್ಯದ ಮೇವತ್ ನಲ್ಲಿ ಬಹುತೇಕ ಮುಸ್ಲಿಮರಿದ್ದ ಸಭೆಯಲ್ಲಿ ತನ್ನ ಮುಸ್ಲಿಮ್ ಗುರುತಿನ ಬಗ್ಗೆ ಅವರು ಜಂಭ ಕೊಚ್ಚಿಕೊಳ್ಳುತ್ತಿರುವ ದೃಶ್ಯವುಳ್ಳ ವಿಡೀಯೊ ಇಲ್ಲಿದೆ. ಇದು ಸಿನಿಕತನದ ರಾಜಕೀಯ ಅಲ್ಲದಿದ್ದರೆ ಮತ್ತೇನು?
— ಚೌಕೀದಾರ್ ಅಮಿತ್ ಮಾಳವಿಯ
ವಾಸ್ತವದಲ್ಲಿ ಯೋಗೇಂದ್ರ ಯಾದವ್ ಆಡಿದ ಮಾತಿನಲ್ಲಿ ಒಂದು ನಿರ್ದಿಷ್ಟ ಭಾಗವನ್ನು ಉದ್ದೇಶಪೂರ್ವಕವಾಗಿ ತುಂಡರಿಸಿ ಮಾಡಿದ ವಿಡೀಯೊವನ್ನು ಮಾಳವೀಯ ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿರುವ ಯೋಗೇಂದ್ರ ಯಾದವ್ ಈ ವಿಡೀಯೊದಲ್ಲಿರುವ ದೃಶ್ಯ 2014ರ ಚುನಾವಣಾ ಪ್ರಚಾರದಿಂದ ಆಯ್ದುಕೊಂಡಿರುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು 2018ರಲ್ಲಿ ಅಲ್ವಾರ್ ನಲ್ಲಿ ರಕ್ಬರ್ ಖಾನ್ ಅವರನ್ನು ಹೊಡೆದು ಕೊಂದಿದ್ದ ನಂತರ ಕಲ್ಗಾಂವ್ ನಲ್ಲಿ ಮಹಾಪಂಚಾಯ್ತಿ ನಡೆಸಿದ್ದರ ದೃಶ್ಯ ಎಂದಿದ್ದಾರೆ. ಅಂದು ತಾನು ಕೋಮುವಾದ ಮತ್ತು ಜನಾಂಗೀಯ ಹಿಂಸೆಯ ವಿರುದ್ಧ ಮಾತನಾಡುತ್ತಿದ್ದೆನೇ ಹೊರತು ಮತಯಾಚನೆ ಮಾಡುತ್ತಿರಲಿಲ್ಲ ಎಂದು ತಿಳಿಸಿರುವ ಯಾದವ್ ತಮ್ಮ ಹೇಳಿಕೆಯನ್ನು ಸಮರ್ಥಿಸಲು 13 ನಿಮಿಷಗಳ ಮೂಲ ವಿಡೀಯೊ ಬಿಡುಗಡೆಗೊಳಿಸಿದ್ದಾರೆ.
Clinching evidence that @amitmalviya had doctored the few seconds video he has circulated. Just listen to this small fragment from my speech.
BJP lie factory cut out my words: "na Hindu Banega na Musalman Banega"!
Also: "nafrat ja jawab Mohabbat se Dena hai"
Are we surprised? pic.twitter.com/j5wjXf1797
— Yogendra Yadav (@_YogendraYadav) April 19, 2019
ತಾನು ಪ್ರಸಾರ ಮಾಡಿರುವ ಕೆಲವೇ ಸೆಕೆಂಡ್ ಗಳ ವಿಡೀಯೊ ತುಣುಕನ್ನು ತಿರುಚಿದ್ದಾರೆ ಎನ್ನಲು ಬಲವಾದ ಸಾಕ್ಷಿ ಇಲ್ಲಿದೆ. ನನ್ನ ಭಾಷಣದ ಈ ಸಣ್ಣ ತುಣುಕನ್ನು ಕೇಳಿ.
ಬಿಜೆಪಿಯ ಸುಳ್ಳಿನ ಕಾರ್ಖಾನೆ ನನ್ನ ಈ ಮಾತುಗಳನ್ನು ತೆಗೆದುಹಾಕಿದೆ:
“ನ ಹಿಂದು ಬನೇಗಾ ನ ಮುಸಲ್ಮಾನ್ ಬನೇಗಾ” (ಹಿಂದೂ ಆಗಲಾರೆ ಮುಸಲ್ಮಾನನೂ ಆಗಲಾರೆ)
“ನಫ್ರತ್ ಕಾ ಜವಾಬ್ ಮೊಹೊಬ್ಬತ್ ಸೇ ದೇನಾ ಹೈ” (ದ್ವೇಷಕ್ಕೆ ಪ್ರೀತಿಯ ಜವಾಬು ನೀಡಬೇಕಿದೆ)
ಅಚ್ಚರಿಯಾಗುತ್ತಿದೆಯೇ?
ಯೋಗೇಂದ್ರ ಯಾದವ್ ಅವರ ಮೂಲ ಭಾಷಣವನ್ನು ಇಲ್ಲಿ ಕೇಳಬಹುದು.