ದೆಹಲಿ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟಾರೆ 290 ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ ಹಾಗೂ ಕೆ.ಜಿ. ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ. ಅಲ್ಲದೇ ಇವರೆಲ್ಲರೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ವಿಷಾದ ವ್ಯಕ್ಪಡಿಸಿದ್ದಾರೆ.
ಕೊಲಂಬೋ ಸರಣಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಕಾಣೆಯಾಗಿದ್ದ ರಾಜ್ಯದ ಏಳು ಜನರಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದು ಅತ್ಯಂತ ದುಃಖಕರ ಸಂಗತಿ. ಮೃತರನ್ನು ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ ಹಾಗೂ ಕೆ.ಜಿ. ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ.
— H D Kumaraswamy (@hd_kumaraswamy) April 22, 2019
ಕೊಲಂಬೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದು ಸಂತ್ರಸ್ತರು ಹೆಚ್ಚಿನ ಮಾಹಿತಿಗಾಗಿ ಅಲ್ಲಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಲು ಎಂದು ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈಸ್ಟರ್ ದಿನವಾದ ನಿನ್ನೆ (ಭಾನುವಾರ) ಕೊಲಂಬೋದ ಚರ್ಚ್ ಗಳು ಹಾಗೂ ಹೊಟೇಲ್ಗಳ ಮೇಲೆ ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಲಕ್ಷ್ಮೀನಾರಾಯಣ, ಚಂದ್ರಶೇಖರ್, ರಮೇಶ್ ಗೌಡ, ಶಿವಕುಮಾರ್, ಮಾರೇಗೌಡ, ಪುಟ್ಟರಾಜು, ನಾಗರಾಜ ರೆಡ್ಡಿ ಸೇರಿದಂತೆ ಹಲವರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಬೆಂಗಳೂರಿನ ಹನುಮಂತರಾಯಪ್ಪ ಮನೆಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಸದಾನಂದಗೌಡ, ಅತ್ಯಂತ ದುಖಃದ ಘಟನೆ. ಇದರಿಂದಾಗಿ ಜಗತ್ತೇ ಬೆಚ್ಚಿಬಿದ್ದಿದೆ ಹಾಗೂ ಖಂಡಿಸಿದೆ. ಕರ್ನಾಟಕದ 10 ಮಂದಿ ಇಲ್ಲಿ ಸಿಲುಕಿದ್ದಾರೆ. ಇವರಲ್ಲಿ ಹನುಮಂತರಾಯಪ್ಪ, ರಂಗಪ್ಪ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪುರುಷೋತ್ತಮ ರೆಡ್ಡಿ ಎಂಬುವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಸ್ಥರಿಗೆ ತುರ್ತು ವೀಸಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಬೇಗ ನಾಪತ್ತೆಯಾದವರ ಪತ್ತೆ, ಮೃತರ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರಿಗೆ ತಿಳಿಸಿದ್ದೇವೆ ಎಂದರು.
ಇಂತಹ ಕೃತ್ಯ ಖಂಡನೀಯ ಎಂದಿರುವ ಸಚಿವ ಎಂ. ಬಿ ಪಾಟೀಲ್, ಹನುಮಂತರಾಯಪ್ಪ, ಎಂ. ರಂಗಪ್ಪ ಮೃತಪಟ್ಟಿದ್ದು, ಉಳಿದವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ ಎಂದಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ತಪ್ಪು ಮಾಹಿತಿ ತಲುಪಬಾರದು ಎಂಬ ಕಾರಣಕ್ಕೆ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟ ಮಾಹಿತಿ ಬಂದ ನಂತರವಷ್ಟೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕೊಲಂಬೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕನ್ನಡಿಗರಾದ ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಎಂಬುವರು ಮೃತಪಟ್ಟಿದ್ದು ಅತ್ಯಂತ ದುಃಖದ ಸಂಗತಿ. ಅವರ ಕುಟುಂಬಸ್ಥರಿಗೆ ಅವರ ಅಕಾಲಿಕ ಸಾವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಕೊಲಂಬೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕನ್ನಡಿಗರಾದ ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಎಂಬುವರು ಮೃತಪಟ್ಟಿದ್ದು ಅತ್ಯಂತ ದುಃಖದ ಸಂಗತಿ. ಅವರ ಕುಟುಂಬಸ್ಥರಿಗೆ ಅವರ ಅಕಾಲಿಕ ಸಾವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.#SriLankaBlasts
— M B Patil (@MBPatil) April 22, 2019
ಶ್ರೀಲಂಕಾ ಪ್ರವಾಸದಲ್ಲಿದ್ದ ಇನ್ನೂ ಐವರು ಕನ್ನಡಿಗರು ಕಾಣೆಯಾಗಿದ್ದು ಅವರನ್ನು ಪತ್ತೆ ಹಚ್ಚಲು ವಿದೇಶಾಂಗ ಸಚಿವಾಲಯದ ಜೊತೆ ಸಹಕರಿಸುತ್ತಿದ್ದೇವೆ. ಕಾಣೆಯಾದವರೆಲ್ಲರೂ ಸುರಕ್ಷಿತವಾಗಿ ಬರಲಿ ಎಂದು ಆಶಿಸುತ್ತೇನೆ ಎಂದು ಪಾಟೀಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿದ್ದ ಇನ್ನೂ ಐವರು ಕನ್ನಡಿಗರು ಕಾಣೆಯಾಗಿದ್ದು ಅವರನ್ನು ಪತ್ತೆ ಹಚ್ಚಲು ವಿದೇಶಾಂಗ ಸಚಿವಾಲಯದ ಜೊತೆ ಸಹಕರಿಸುತ್ತಿದ್ದೇವೆ. ಕಾಣೆಯಾದವರೆಲ್ಲರೂ ಸುರಕ್ಷಿತವಾಗಿ ಬರಲಿ ಎಂದು ಆಶಿಸುತ್ತೇನೆ.#SriLankaBlasts https://t.co/uffiZPIItj
— M B Patil (@MBPatil) April 22, 2019
ನಾರಾಯಣ ಚಂದ್ರಶೇಖರ್, ರಮೇಶ್, ಲಕ್ಷ್ಮೀ ಮೂವರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
Indian High Commission in Colombo has conveyed that National Hospital has informed them about the death of three Indian nationals. Their names are Lokashini, Narayan Chandrashekhar and Ramesh. We are ascertaining further details. /3
— Chowkidar Sushma Swaraj (@SushmaSwaraj) April 21, 2019
ಕೊಲಂಬೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದು ಸಂತ್ರಸ್ತರು ಹೆಚ್ಚಿನ ಮಾಹಿತಿಗಾಗಿ ಅಲ್ಲಿನ ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದು ಅಲ್ಲಿನ ಪರಿಸ್ಥಿತಿ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ.
Indians in distress may please contact Indian High Commission in Colombo. We will provide you all assistance. @IndiainSL Our helpline numbers are :
+94777903082,+94112422788,+94112422789, +94112422789.
Pls RT— Chowkidar Sushma Swaraj (@SushmaSwaraj) April 21, 2019
ಸುಷ್ಮಾ ಸ್ವರಾಜ್ ಅವರಿಗೆ ಟ್ಯಾಗ್ ಆಗಿರುವ ಟ್ವೀಟ್ ನಲ್ಲಿ ಕರ್ನಾಟಕದ ಕೆ. ಜಿ ಹನುಮಂತರಾಯಪ್ಪ, ಎಂ. ರಂಗಪ್ಪ ಅವರು ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ.
@SushmaSwaraj
We sadly confirm the deaths of the following two individuals in the blasts yesterday:
– K G Hanumantharayappa
-M Rangappa.— India in Sri Lanka (@IndiainSL) April 22, 2019
ಘಟನೆ ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
I’m saddened & disturbed by reports of multiple bomb blasts in #Colombo in which over 100 people have died & more than 300 injured.
I strongly condemn this diabolical act of terrorism.
My condolences to the families of the victims. I pray the injured make a speedy recovery.
— Rahul Gandhi (@RahulGandhi) April 21, 2019