ನವದೆಹಲಿ: ‘ಬಿಜೆಪಿ ಎಂದಿಗೂ ದಲಿತ ವಿರೋಧಿಯೇ. ಪಕ್ಷದಲ್ಲಿ ಕಿವುಡರಾಗಿ, ಮೂಕರಾಗಿ ಇರುವ ಯಾರು ಬೇಕಾದರೂ ಪ್ರಧಾನ ಮಂತ್ರಿಯಾಗಬಹುದು ಎಂದು’ ಬಿಜೆಪಿಯ ಸಂಸದ ಉದಿತ್ ರಾಜ್ ಆರೋಪಿಸಿದ್ದಾರೆ.
“ಉದಿತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ ಅಧ್ಯಕ್ಷ ರಾಹುಲ್ ಗಾಂಧಿ,’’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Congress President @RahulGandhi welcomes Shri Udit Raj into the Congress party. pic.twitter.com/EZi9gygbyu
— Congress (@INCIndia) April 24, 2019
ಭಾರತೀಯ ಕಂದಾಯ ಸೇವಾ (ಐಆರ್ ಎಸ್) ಅಧಿಕಾರಿಯಾಗಿದ್ದ ಉದಿತ್ ರಾಜ್ ಅವರು ದೇಶದಲ್ಲಿ ದಲಿತ ಹಕ್ಕುಗಳ ಧ್ವನಿ ಎತ್ತುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
“ನಾನು ಎಂದಿಗೂ ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದೆ,’’ ಎಂದೂ ಉದಿತ್ ರಾಜ್ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ.
“ಒಂದು ವಿಷಯವಂತೂ ಸ್ಪಷ್ಟ ಬಿಜೆಪಿ ಎಂದಿಗೂ ದಲಿತ ವಿರೋಧಿಯೇ. ನನ್ನ ತಪ್ಪೆಂದರೆ ನಾನು ಕಿವುಡ ಅಥವಾ ಮೂಕನಾಗಿ ಇರಲಿಲ್ಲ. ಪಕ್ಷದಲ್ಲಿ ಕಿವುಡ, ಮೂಕರಾಗಿ ಇರುವ ಯಾರು ಬೇಕಾದರೂ ಪ್ರಧಾನ ಮಂತ್ರಿಯಾಗಬಹುದು,’’ ಎಂದು ಉದಿತ್ ರಾಜ್ ಬಿಜೆಪಿ ಮತ್ತು ಮೋದಿ ಕುರಿತು ವಾಗ್ದಾಳಿ ನಡೆಸಿದ್ದಾರೆ.
ತನ್ನನ್ನು ಪಕ್ಷ ನಿರ್ಲಕ್ಷಿಸಲಿದೆ ಎಂಬುದನ್ನು ಮೊದಲೇ ಊಹಿಸಿದ್ದ ಉದಿತ್ ಅವರು, ಮಂಗಳವಾರ ಬೆಳಗ್ಗೆ ಪಿನ್ ಮಾಡಿರುವ ಟ್ವೀಟ್ ನಲ್ಲಿ” ನಾನು ಟಿಕೆಟ್ ಗಾಗಿ ಕಾದಿದ್ದೇನೆ, ನನಗೆ ಟಿಕೆಟ್ ಸಿಗದಿದ್ದರೆ, ಪಕ್ಷವನ್ನು ತ್ಯಜಿಸಲಿದ್ದೇನೆ,’’ ಎಂದಿದ್ದರು.
“ನನ್ನ ಕ್ಷೇತ್ರದಿಂದಲೇ ನಾನು ನಾಮಪ್ರ ಸಲ್ಲಿಸುತ್ತೇನೆ ಎಂದು ನನಗೆ ಈಗಲೂ ನಂಬಿಕೆ ಇದೆ. ಸಾಕಷ್ಟು ಶ್ರಮಪಟ್ಟು ಕೆಲಸ ಮಾಡಿದ್ದೇನೆ , ನನ್ನ ಶಕ್ತಿಯನ್ನು ಬಿಜೆಪಿಗೆ ತೋರ್ಪಡಿಸಿದ್ದೇನೆ. ಬಿಜೆಪಿ ಪಕ್ಷವನ್ನು ಬಿಟ್ಟು ಹೋಗುವಂತೆ ಬಿಜೆಪಿ ಮಾಡುವುದಿಲ್ಲ ಎಂಬ ಬಗ್ಗೆಯೂ ನನಗೆ ನಂಬಿಕೆ ಇದೆ,’’ ಎಂದೂ ಟ್ವೀಟ್ ಮಾಡಿದ್ದರು.
आज मैं कांग्रेस @INCIndia में शामिल हुआ , श्री @RahulGandhi जी का धन्यवाद। pic.twitter.com/j117b1cq9m
— Dr. Udit Raj, MP (@Dr_Uditraj) April 24, 2019