ಟ್ವಿಟರ್ ಲೋಕದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನನ್ನು ‘ಟೈಮ್ಸ್ ನೌ’ ಸುದ್ದಿವಾಹಿನಿ ಮತ್ತು ಆತನ ಪತ್ನಿ ಟ್ವಿಂಕಲ್ ಖನ್ನಾರನ್ನು ‘ಮಿರರ್ ನೌ’ ಸುದ್ದಿವಾಹಿನಿ ಎಂದು ತಮಾಷೆ ಮಾಡಲಾಗುತ್ತಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಅಕ್ಷಯ್ ಕುಮಾರ್ ಸದಾ ಬಿಜೆಪಿ ಮತ್ತು ಹಿಂದುತ್ವವಾದಿಗಳಿಗೆ ಬೆಂಬಲಿಸಿ ಮಾತನಾಡುವುದು ಮತ್ತು ಅವರ ಸಿನಿಮಾದಲ್ಲಿಯೂ ಅಂತಹ ಬೆಂಬಲಿತ ದೃಶ್ಯಗಳಿರುವುದು ಸಾಮಾನ್ಯ. ಆದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಮಾತ್ರ ಪತಿಗೆ ತದ್ವಿರುದ್ಧವಾಗಿ ಹಿಂದುತ್ವವಾದಿಗಳ ಬೆಂಡೆತ್ತುತ್ತಾರೆ.
ಇದೀಗ ಬಹಳ ಟೀಕೆಗೆ ಮತ್ತು ವಿಮರ್ಶೆಗೆ ಗುರಿಯಾಗಿರುವ ಅಕ್ಷಯ್ ಕುಮಾರ್ ಅವರು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನದ ಬಗ್ಗೆಯೂ ಟ್ವಿಂಕಲ್ ಅಭಿಪ್ರಾಯ ಅಷ್ಟೇ ನೀರಸವಾಗಿತ್ತು. “ನಾನು ಸಾಮಾಜಿಕ ಜಾಲತಾಣಗಳನ್ನು ಖಂಡಿತಾ ನೋಡುತ್ತಿರುತ್ತೇನೆ. ಇದರಿಂದ ಹೊರಗಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದುಬರುತ್ತದೆ. ನೀವು ಮತ್ತು ನಿಮ್ಮ ಪತ್ನಿ ಟ್ವಿಂಕಲ್ ಖನ್ನಾ ಏನು ಟ್ವೀಟ್ ಮಾಡುತ್ತೀರಿ ಎನ್ನುವುದೂ ನನಗೆ ಗೊತ್ತು” ಎಂದು ಪ್ರಧಾನಿ ಸೂಚ್ಯವಾಗಿ ಅಕ್ಷಯ್ ಕುಮಾರ್ ಅವರಿಗೆ ಟ್ವಿಂಕಲ್ ಖನ್ನಾರನ್ನು ನಿಯಂತ್ರಿಸುವಂತೆ ಸಂಕೇತ ಮಾಡಿದ್ದರು. ಆದರೆ ಟ್ವಿಂಕಲ್ ಇದಕ್ಕೆ ನೇರವಾಗಿ ಮತ್ತು ಅಷ್ಟೇ ಸರಳವಾಗಿ ಟ್ವಿಟರ್ ಉತ್ತರ ನೀಡಿದ್ದಾರೆ. “ನಾನು ಪ್ರಧಾನಿಯವರ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಪ್ರಧಾನಿಯವರಿಗೆ ನನ್ನ ಅಸ್ತಿತ್ವದ ಬಗ್ಗೆ ಅರಿವಿರುವುದು ಮಾತ್ರವಲ್ಲ, ಅವರು ನನ್ನ ಕೆಲಸಗಳನ್ನು ಕೂಡ ಓದುತ್ತಾರೆ” ಎಂದು ಟ್ವಿಂಕಲ್ ಟ್ವೀಟ್ ಮೂಲಕ ಉತ್ತರಿಸಿದ್ದರು.
I have a rather positive way of looking at this-Not only is the Prime Minister aware that I exist but he actually reads my work 🙂 🙏 https://t.co/Pkk4tKEVHm
— Twinkle Khanna (@mrsfunnybones) April 24, 2019
ತಮ್ಮ ಮಾವಿನ ಹಣ್ಣು ಮತ್ತು ಉಡುಗೊರೆಗಳ ಬಗ್ಗೆ ಮಾತನಾಡಲು ತಮ್ಮ ಭಕ್ತಗಣಗಳಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರನ್ನೇ ನರೇಂದ್ರ ಮೋದಿಯವರು ಆರಿಸಿಕೊಂಡದ್ದೇಕೆ ಎನ್ನುವ ಪ್ರಶ್ನೆ ಅತೀ ಅಪ್ರಸ್ತುತ. ಒಂದೊಮ್ಮೆ ಟಿವಿ ನಿರೂಪಕರಲ್ಲಿರುವ ತಮ್ಮ ಭಕ್ತರ ಜೊತೆಗೆ ಮಾತನಾಡಿದರೂ ಸಹ ಕನಿಷ್ಟ ಮಟ್ಟದಲ್ಲಾದರೂ ದೇಶದ ಸಮಸ್ಯೆಗಳನ್ನು ಚರ್ಚಿಸಲೇಬೇಕಾಗುತ್ತದೆ. ಯಾವೊಂದು ಚರ್ಚೆಗಳೂ ಇಲ್ಲದೆ ಉಡಾಫೆಯ ಸಂದರ್ಶನ ನೀಡಬೇಕೆಂದರೆ ಬಾಲಿವುಡ್ ನಟನೇ ಸೂಕ್ತ ಎಂದು ಮೋದಿ ಆರಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ದೇಶದ ಭವಿಷ್ಯವನ್ನು ನಿರ್ಧರಿಸುವ ನಾಯಕತ್ವದ ನಿರೀಕ್ಷೆಯಲ್ಲಿ ಜನರು ಮತಗಟ್ಟೆಗೆ ಹೋಗುವಾಗ ಪ್ರಧಾನಿ ಅಭ್ಯರ್ಥಿಯ ಮಾವಿನ ಹಣ್ಣು ತಿನ್ನುವ ಹವ್ಯಾಸ ಜನಸಾಮಾನ್ಯರಿಗೆ ಅತೀ ಮುಖ್ಯ ಎನ್ನುವಂತೆ ಬಿಂಬಿಸಿದ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾಸ್ಪದವಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಈ ಸಂದರ್ಶನ ಚುನಾವಣಾ ಸಂದರ್ಭದಲ್ಲಿ ಅತೀ ಅಪ್ರಸ್ತುತ ಮತ್ತು ಉಡಾಫೆಯ ರಾಜಕೀಯ ಚಿತ್ತ ಎನ್ನುವುದು ಟ್ವಿಟರ್ ಮತ್ತು ಇತರ ಸಾಮಾಜಿಕ ತಾಣಗಳಲ್ಲಿ ಹಲವು ರೀತಿಯಲ್ಲಿ ಅದಾಗಲೇ ಚರ್ಚೆಯಾಗಿದೆ. ಆದರೆ ಇಂತಹ ಉಡಾಫೆ ಸಂದರ್ಶನದಲ್ಲೂ ಮೋದಿ ಸುಳ್ಳನ್ನೇ ಹೇಳಿರುವುದು ವಿಷಾದನೀಯ.
ಅಮೆರಿಕದ ಅಧ್ಯಕ್ಷರಾಗಿದ್ದ ಒಬಾಮ ಮತ್ತು ತಮ್ಮ ನಡುವೆ ಆತ್ಮೀಯ ಸ್ನೇಹವಿದೆ ಎನ್ನುವುದನ್ನು ಸೂಚಿಸಲು ಪ್ರಧಾನಿ ಹೇಳಿದ್ದು- “ನಾನು ಮತ್ತು ಒಬಾಮ ಪರಸ್ಪರರನ್ನು ‘ನಾನು-ನೀನು’ ಎಂದೇ ಕರೆದುಕೊಳ್ಳುತ್ತೇವೆ ಎಂದಿದ್ದಾರೆ.” ಇಂಗ್ಲಿಷ್ ಭಾಷೆಯಲ್ಲಿ ನೀನು ಅಥವಾ ನೀವು ಎಂದು ಹೇಳಲು ಇರುವುದು ಒಂದೇ ಶಬ್ದ ‘ಯು’ ಎನ್ನುವುದು ಎಲ್ಕೆಜಿ ಮಕ್ಕಳಿಗೂ ತಿಳಿದಿರುವ ಸತ್ಯ. ಅದನ್ನೇ ದೊಡ್ಡ ಸಾಧನೆ ಎನ್ನುವಂತೆ ತಮ್ಮ ವ್ಯಕ್ತಿತ್ವವನ್ನು ಹೊಗಳಿಕೊಳ್ಳುವ ಭರದಲ್ಲಿ, ತಾನು ವಿಶ್ವನಾಯಕನಾಗಿದ್ದೇನೆ ಎನ್ನುವ ತಮ್ಮ ಭ್ರಮೆಯನ್ನೂ ಅವರು ಬಹಿರಂಗಪಡಿಸಿದ್ದಾರೆ. ಇದಕ್ಕೆ ಟ್ವಿಟರ್ ಲೋಕ ಒಬಾಮ ಅವರು ಪ್ರಧಾನಿ ಮೋದಿ ಕುರಿತು ಮಾತಾಡಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ಉತ್ತರಿಸಿದೆ. ಅದರಲ್ಲಿ ಒಬಾಮಾ ಅವರಿಗೆ ಒಂದು ಪ್ರಶ್ನೆ ಹಾಕಲಾಗುತ್ತದೆ. ಭಾರತದ ಪ್ರಧಾನಿ ಮೋದಿಯವರು ನಿಮ್ಮೊಂದಿಗೆ ಇರುವ ಸ್ನೇಹದ ಬಗ್ಗೆ ಬಹಳ ಮಾತಾಡುತ್ತಾರಲ್ಲಾ? ಎಂಬ ಕರಣ್ ಥಾಪರ್ ಪ್ರಶ್ನೆಗೆ ಒಬಾಮಾ ಏನು ಉತ್ತರ ನೀಡಿದ್ದರು ಗೊತ್ತೇ? “ನನಗೆ ಡಾ.ಮನಮೋಹನ್ ಸಿಂಗ್ ಜೊತೆಗೂ ಸಹ ಒಳ್ಳೆಯ ಸ್ನೇಹವಿತ್ತು; ಭಾರತದಲ್ಲಿ ಆರ್ಥಿಕತೆಯನ್ನು ಆಧುನಿಕಗೊಳಿಸಿದವರನ್ನು ಮನಮೋಹನ್ ಸಿಂಗ್ ಮಾಡಿರುವ ಕೆಲಸ ಬಹಳ ಮುಖ್ಯವಾದುದು. ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಉಳಿಸುವಲ್ಲಿ ಡಾ.ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಭಾರತದಲ್ಲಿರುವ ನನ್ನ ಸ್ನೇಹಿತರ ವಿಷಯದಲ್ಲಿ ನೀವು ಆಟ ಆಡಲು ನಾನು ಬಿಡುವುದಿಲ್ಲ” ಎಂದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಜನಜನಿತವಾಗಿದೆ
#FekuModi
Obama makes Fun of Modi when asked question and Praises Dr.Singh pic.twitter.com/oNT4FJC0QM— S.Sorathiya (@SYSorathiya) April 24, 2019
#WATCH PM Narendra Modi in an interaction with Akshay Kumar speaks on his friendship with former US President Barack Obama pic.twitter.com/rGxgPJAAlC
— ANI (@ANI) April 24, 2019
Remember that time Obama completely snubbed Modi?
Look at Modi ji trying to get Obama's attention.😂😂 pic.twitter.com/17ByHfDWNk— Srinivas B V (@srinivasiyc) April 24, 2019
There are several reasons why President Obama like all of us respects Dr Singh
On the other hand Mr Modi has this terrible quality to drop names & rub shoulders with people who are far capable than him
I have no problem with this, but he can do it after he resigns as my PM pic.twitter.com/kG2zgJtgP6
— Sid (@sidmtweets) April 24, 2019
ಮತ್ತೆ ಅಕ್ಷಯಕುಮಾರ್ ಅವರ ಮೋದಿ ಸಂದರ್ಶನಕ್ಕೆ ಬರುವುದಾದರೆ ಸಂದರ್ಶನದ ಬಗ್ಗೆ ಅಕ್ಷಯ್ ಕುಮಾರ್ ಮೊದಲು ಟ್ವೀಟ್ ಮಾಡಿದ್ದು ಇನ್ಸ್ಟಾಗ್ರಾಂನಲ್ಲಿ! ಹಾಗೆ ನೋಡಿದರೆ ಇನ್ಸ್ಟಾಗ್ರಾಂ ಎನ್ನುವುದು ತಾರೆಯರಿಗೆ ಮತ್ತು ಮನೋರಂಜನಾ ಉದ್ಯಮದಲ್ಲಿ ಸಕ್ರಿಯರಾಗಿರುವವರಿಗೆ ಮತ್ತು ಅವರ ಅಭಿಮಾನಿಗಳಿಗೆ ಪರಸ್ಪರರ ಬಗ್ಗೆ ಹೇಳಿಕೊಳ್ಳಲು ಇರುವ ಮಾಧ್ಯಮ. ಗಂಭೀರ ಚರ್ಚೆಗಳು, ವಾಸ್ತವ ವಿಚಾರಗಳು ಮತ್ತು ರಾಜಕೀಯದ ಬಗ್ಗೆ ಚರ್ಚೆಯಾಗುವುದು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ. ಆದರೆ ಪ್ರಧಾನಿ ಮೋದಿಯವರು ಇನ್ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿಯಾಗಲು ಬಯಸಿದ್ದರೇ ವಿನಾ ಟ್ವಿಟರ್ನಲ್ಲಿ ನಾಯಕತ್ವ ಗುಣ ತೋರಿಸುವ ಕ್ಷಮತೆ ಅವರಲ್ಲಿರಲಿಲ್ಲ ಎಂದು ಅನಿಸುತ್ತಿದೆ.
ಈ ಸಂದರ್ಶನವನ್ನು ಸಂಪೂರ್ಣವಾಗಿ ರಾಜಕೀಯೇತರ ಎಂದೂ ಬಿಜೆಪಿ ಬಿಂಬಿಸಿದೆ. ಚುನಾವಣಾ ಸಂದರ್ಭದಲ್ಲಿ ದೇಶಕ್ಕಾಗಿ ನಾಯಕರು ಏನು ಮಾಡುತ್ತಾರೆ ಎಂದು ತಿಳಿಸುವುದು ಮತ್ತು ಅಭಿಪ್ರಾಯ ನೀಡುವುದು, ಗಂಭೀರ ವಾದ-ವಿವಾದಗಳನ್ನು ಮಾಡುವುದು ಸಮರ್ಥ ನಾಯಕರ ಲಕ್ಷಣ. ಆದರೆ ನರೇಂದ್ರ ಮೋದಿಯವರು ಉಡಾಫೆಯ ಸಂದರ್ಶನವನ್ನು ನಡೆಸಿ ಜನರ ನಡುವೆ ಹಾಸ್ಯದ ವಸ್ತುವಾದರು. ಅಕ್ಷಯ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ‘ಬಾಲ ನರೇಂದ್ರ’ನಾಗಿ ಬಿಂಬಿಸಲು ಸಂಪೂರ್ಣವಾಗಿ ಪ್ರಯತ್ನಿಸಿದ್ದು ಸುಳ್ಳಲ್ಲ. ಅವರ ಹಲವು ಬಾಲ ಲೀಲೆಗಳು, ವಿರೋಧ ಪಕ್ಷದ ನಾಯಕರು ಕೊಡುವ ಉಡುಗೊರೆಗಳು, ನಿದ್ದೆ, ಫ್ಯಾಷನ್, ಮಾತುಗಾರಿಕೆಯ ಶೈಲಿಗಳು ಸಂದರ್ಶನದಲ್ಲಿ ಚರ್ಚೆಯಾಗಿ ಟ್ವಿಟರ್ನಲ್ಲಿ ತಮಾಷೆಯಾಗಿ ಪ್ರಚಾರ ಪಡೆದಿವೆ.
Breaking News-
PM Narendra Modi changes his childhood after coming in the adulthood.
From 'Chaiwala' to 'Jhole-wala', suddenly Modi has become 'Pathan Ka Bachha'.
Waah Modi Ji, Waah!
By the way Sir, from where have you studied this special course? pic.twitter.com/bNA6Sr2LUH
— Nadeem Javed (@nadeeminc) April 23, 2019
Speech analysis of Modi show that words used MOST by @narendramodi in his speeches in 2019.
Acche Din – 0
Black Money – 0
NoteBandi – 0
Jobs – 7
Pakistan – 36
Airstrikes – 77
BJP – 93
Modi – 176The narcissist refers to HIMSELF more than ANYTHING else in his speeches. pic.twitter.com/Y6XZ2K9DA3
— My Fellow Indians (@MyFellowIndians) April 25, 2019
ಅಕ್ಷಯ್ ಕುಮಾರ್ ಸಂದರ್ಶನದ ಹಿನ್ನೆಲೆಯಲ್ಲಿ ತೆಲುಗು-ತಮಿಳು ನಟ ಸಿದ್ದಾರ್ಥ ಪ್ರತಿಕ್ರಿಯಿಸಿದ್ದು ಹೀಗೆ
#akshaykumar is very underrated as a villain.
— Siddharth (@Actor_Siddharth) April 24, 2019
ಅಂತಿಮವಾಗಿ ಹೇಳಬೇಕೆಂದರೆ ಇದೆಲ್ಲವೂ ಅಹಂಕಾರಿ ಪ್ರಧಾನಿಯ ಒಣಜಂಭದ ಮಾತುಗಳು. ಆತ್ಮರತಿಯ ಒಂದು ಭಾಗ ಈ ಸಂದರ್ಶನ. ಐದು ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯವಾಗಿದ್ದಾಗ ಇಂತಹ ಪ್ರಚಾರದ ತಂತ್ರಗಳೇ ತಮ್ಮನ್ನು ವರ್ಚಸ್ವೀ ನಾಯಕನಾಗಿ ಜನರ ಮುಂದಿಡುತ್ತದೆ ಎನ್ನುವ ಸತ್ಯ ನರೇಂದ್ರ ಮೋದಿಗೆ ಗೊತ್ತಿದೆ. ಪದೇ ಪದೇ ತಾನೊಬ್ಬ ಸನ್ಯಾಸಿಯಂತೆ ಜೀವನ ನಡೆಸಿ ತನ್ನ ಸಮಯವನ್ನೆಲ್ಲಾ ಕೆಲಸಕ್ಕಾಗಿಯೇ ಕಳೆದಿದ್ದೇನೆ ಎನ್ನುವ ಗರ್ವದ ಮಾತುಗಳನ್ನು ಅವರು ಸಂದರ್ಶನದಲ್ಲಿ ಹೇಳುತ್ತಾರೆ. ತನ್ನ ಗುಣಗಳನ್ನು ಮುಂದಿಡುತ್ತಾ ಹೋಗುವ ನರೇಂದ್ರ ಮೋದಿಯವರ ಪ್ರತೀ ಮಾತುಗಳನ್ನೂ ತಲೆಯಾಡಿಸುತ್ತಾ ಕೇಳಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ಮಧ್ಯಮವರ್ಗದ ತನ್ನ ಜೀವನ, ಗ್ರಾಮ, ಕಠಿನ ಪರಿಶ್ರಮ ಮತ್ತು ಚಾಯ್ ವಾಲನಾಗಿ ದುಡಿದ ಬಗ್ಗೆ ಕೆಲವು ವಾಕ್ಯಗಳು ಹೀಗೆ ಸಂದರ್ಶನ ಮುಂದೆ ಸಾಗುತ್ತದೆ. ಸಂಪೂರ್ಣ ಸಂದರ್ಶನ ರಾಜಕೀಯಯೇತರ ಎಂದು ಹೇಳಿದ್ದರೂ ಮೋದಿ ಉದಾರವಾದಿ ಭಾರತದ ವ್ಯಕ್ತಿತ್ವವನ್ನು ಟೀಕಿಸಲು ಮರೆಯುವುದಿಲ್ಲ.
ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಒಂದೂ ಪತ್ರಿಕಾಗೋಷ್ಠಿಯನ್ನು ನಡೆಸಲು ಒಪ್ಪದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಜೀವನ ಲೀಲೆಗಳನ್ನು ಹೇಳಿಕೊಳ್ಳಲು ಮತ್ತು ಅದನ್ನು ಬಾಲಿವುಡ್ ಶೈಲಿಯಲ್ಲಿ ಚಿತ್ರೀಕರಿಸಲು ಬೇಕಾದಷ್ಟು ಸಮಯವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಪೂರ್ಣ ಸಂದರ್ಶನ ಮತ್ತೊಂದು ಪ್ರಚಾರದ ತಂತ್ರವಷ್ಟೇ. ಸಾಧನೆಗಳು ಶೂನ್ಯವಾದಾಗ ವ್ಯಕ್ತಿಯ ವೈಯಕ್ತಿಕ ಜೀವನವನ್ನೇ ಸಾಧನೆಯನ್ನಾಗಿ ತೋರಿಸಿ ಆತನ ವ್ಯಕ್ತಿತ್ವಕ್ಕೆ ಮತ ಹಾಕಿ ಎಂದು ಬೇಡುವ ಹೊಸ ಪರಿ ಇದು. ಇಂತಹ ಚಾಣಾಕ್ಷ ಪ್ರಚಾರಜ್ಞನನ್ನು ಜನತೆ ಹೇಗೆ ಸ್ವೀಕರಿಸುತ್ತದೆ ಎನ್ನುವುದನ್ನು ಚುನಾವಣಾ ಫಲಿತಾಂಶವೇ ಹೇಳಬೇಕು.