ಚೌಕಿದಾರ್ ನರೇಂದ್ರ ಮೋದಿ ವಾರಣಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅವರ ಆಸ್ತಿ ವಿವರಗಳ ಬಗ್ಗೆ ದೇಶವ್ಯಾಪಿ ಚರ್ಚೆ ಆಗುತ್ತಿದೆ. ಅವರ ಒಟ್ಟಾರೆ ಚರ ಮತ್ತು ಸ್ಥಿರಾಸ್ತಿ ಮೌಲ್ಯ 2.51 ಕೋಟಿ ರೂಪಾಯಿಗಳು. ಕೆಲವು ಶಾಸಕರು, ಸಂಸದರು ನೂರಾರು ಕೋಟಿ ಆಸ್ತಿ ಘೋಷಿಸಿಕೊಂಡಿರುವಾಗ ನಮ್ಮ ಚೌಕಿದಾರರ ಆಸ್ತಿ ಇಷ್ಟೆಯೇ? ಎಂದು ಹುಬ್ಬೇರಿಸುವವರೂ ಇದ್ದಾರೆ.
ಹೆಚ್ಚು ಆಸ್ತಿ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಪಾಲಿಗೆ ಆಸ್ತಿಯೂ ಹೌದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ನಡೆಸಿದ ವಿದೇಶಿ ಹಾರಾಟಗಳಿಂದಾಗಿ ದೇಶದ ಬೊಕ್ಕಸಕ್ಕೆ ಬಿದ್ದಿರುವ ಹೊರೆಯನ್ನು ಗಮನಿಸಿದರೆ, ದೇಶದ ಪಾಲಿಗೆ ಆಸ್ತಿಗಿಂತ ಹೊರೆಯೇ ಹೆಚ್ಚು!
ಪ್ರಧಾನಿ ನರೇಂದ್ರ ಮೋದಿ 2018 ಡಿಸೆಂಬರ್ 3ರವರೆಗೆ ಲಭ್ಯವಾಗಿರುವ ಮಾಹಿತಿಯಂತೆ 92 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಪೈಕಿ ಕೆಲವು ದೇಶಗಳಿಗೆ ಅವರು ಮತ್ತೆ ಮತ್ತೆ ಭೇಟಿ ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಸಂಸತ್ತಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪ್ರಧಾನಿಗಳ 92 ಬಾರಿ ವಿದೇಶ ಪ್ರವಾಸದಿಂದಾಗಿ ದೇಶದ ಬೊಕ್ಕಸಕ್ಕೆ ಬಿದ್ದಿರುವ ಹೊರೆ 2,021 ಕೋಟಿ ರುಪಾಯಿಗಳು.
ಇನ್ನೊಂದು ಚಮತ್ಕಾರ ಏನೆಂದರೆ ಮನಮೋಹನ್ ಸಿಂಗ್ ಅವರು ಎರಡು ಅವಧಿಗೆ ಪ್ರಧಾನಿಯಾಗಿದ್ದ ಹೊತ್ತಿನಲ್ಲಿ ಎಷ್ಟು ದೇಶ ಸುತ್ತಿದ್ದಾರೋ ಅಷ್ಟೂ ದೇಶಗಳನ್ನು ನರೇಂದ್ರ ಮೋದಿ ಅವರು ಒಂದೇ ಅವಧಿಗೆ ಪೂರ್ಣಗೊಳಿಸಿದ್ದಾರೆ. ಮತ್ತೆ ಪ್ರಧಾನಿಯಾದರೆ ನರೇಂದ್ರಮೋದಿ ವಿದೇಶ ಪ್ರವಾಸದ ಲೆಕ್ಕದಲ್ಲಿ ಡಬ್ಬಲ್ ಸೆಂಚುರಿ ಬಾರಿಸುವುದು ಪಕ್ಕಾ!
15 ವರ್ಷ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಅಷ್ಟೂ ಅವಧಿಯಲ್ಲಿ ನಡೆಸಿದ ವಿದೇಶ ಪ್ರವಾಸಗಳ ಸಂಖ್ಯೆ 113.
ಇಂದಿರಾಗಾಂಧಿ ಅವರು ಪ್ರತಿ 48 ದಿನಗಳಿಗೆ ಒಂದು ಬಾರಿಯಂತೆ ವಿದೇಶ ಪ್ರವಾಸ ನಡೆಸಿದ್ದಾರೆ. ಮನಮೋಹನ್ ಸಿಂಗ್ ಅವರು 39 ದಿನಗಳಿಗೊಂದು ವಿದೇಶ ಪ್ರವಾಸ ನಡೆಸಿದ್ದಾರೆ. ಆದರೆ, ಚೌಕಿದಾರ್ ನರೇಂದ್ರ ಮೋದಿ ಪ್ರತಿ 20 ದಿನಗಳಿಗೆ ಒಂದು ವಿದೇಶ ಪ್ರವಾಸ ನಡೆಸಿದ್ದಾರೆ.
ನರೇಂದ್ರ ಮೋದಿ ಅವರ ಪ್ರತಿ ವಿದೇಶ ಪ್ರವಾಸದ ವೆಚ್ಚ 22 ಕೋಟಿ ರುಪಾಯಿಗಳು. ನರೇಂದ್ರ ಮೋದಿ ಐದು ವರ್ಷ ಅಧಿಕಾರ ಪೂರೈಸಿದ್ದಾರೆಂದು ಭಾವಿಸಿ, 92 ವಿದೇಶ ಪ್ರವಾಸ ಮತ್ತು 2021 ಕೋಟಿ ವೆಚ್ಚವನ್ನು ಭಾಗಿಸಿದರೆ, ಮೋದಿಯವರ ನಿತ್ಯದ ವಿದೇಶ ಪ್ರವಾಸದ ವೆಚ್ಚ ಎಷ್ಟಾಗಬಹುದು? ದಿನಕ್ಕೆ 1.10 ಕೋಟಿ ರುಪಾಯಿಗಳು. ಮತ್ತೊಂದು ಗಮನಿಸಬೇಕಾದ ಪ್ರಮುಖ ಅಂಶ ಎಂದರೆ 2,021 ಕೋಟಿ ವೆಚ್ಚವು ಮೋದಿ ನಡೆಸಿದ ವಿದೇಶ ಪ್ರವಾಸದಿಂದ ಆಗಿರುವ ವೆಚ್ಚ. ದೇಶೀಯ ಪ್ರವಾಸದ ವೆಚ್ಚ ಇದರಲ್ಲಿ ಸೇರಿಲ್ಲ. ಪ್ರಧಾನಿ ದೇಶದಲ್ಲಿದ್ದರೂ ನಿತ್ಯವೂ ಒಂದಿಲ್ಲೊಂದು ರಾಜ್ಯಗಳಿಗೆ ವಿಮಾನದಲ್ಲಿ ಹಾರಾಟ ನಡೆಸುತ್ತಲೇ ಇರುತ್ತಾರೆ.
ಈ ಹಿಂದೆ ಮೋದಿ ಅವರ 15 ಲಕ್ಷದ ಸ್ಯೂಟ್ ಬಗ್ಗೆ ಚರ್ಚೆಯಾಗಿತ್ತು. ವಿದೇಶಿ ನಾಯಕರೊಂದಿಗೆ ಫೋಟೋ ತೆಗೆಸಿಕೊಳ್ಳುವ ತರಾತುರಿಯ ಬಗ್ಗೆಯೂ ಚರ್ಚೆಯಾಗಿತ್ತು. ಅವರು ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ರೀತಿಯ ಬಗ್ಗೆಯೂ ಚರ್ಚೆಯಾಗಿತ್ತು. ಈಗ ಮೋದಿ ಅವರ ಆಸ್ತಿಯ ಬಗ್ಗೆ ಚರ್ಚೆ ಆಗುತ್ತಿದೆ. ಮೋದಿ ಭಕ್ತರೆಲ್ಲ ಮೋದಿಯ ಪ್ರಾಮಾಣಿಕತೆ ಬಗ್ಗೆ ಮನಸೋಇಚ್ಛೆ ಮಾತನಾಡುತ್ತಿದ್ದಾರೆ.
ಮೋದಿಯವರ ಪ್ರಾಮಾಣಿಕತೆ ಏನೇ ಇರಲಿ, ಅದು ದೇಶಕ್ಕೆ ಉಪಯೋಗವಂತೂ ಆಗಿಲ್ಲ. ಮೋದಿ ಜಾರಿಗೆ ತಂದ ಅಪನಗದೀಕರಣದಿಂದಾಗಿ ದೇಶದ ಜಿಡಿಪಿ ಶೇ.2ರಷ್ಟು ಕುಸಿದಿದೆ. ಅದರಿಂದಾದ ನಷ್ಟವು ಸುಮಾರು 2 ಲಕ್ಷ ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ನಿರುದ್ಯೋಗ ಸಮಸ್ಯೆ ದೇಶವನ್ನು ಕಿತ್ತುತಿನ್ನುತ್ತಿದೆ. ವಿದೇಶಿ ವ್ಯಾಪಾರ ಕುಸಿಯುತ್ತಿದೆ. ವಿತ್ತೀಯ ಕೊರತೆ ಹಿಗ್ಗುತ್ತಿದೆ. ಈ ಎಲ್ಲವೂ ಪ್ರಧಾನಿ ನರೇಂದ್ರಮೋದಿ ಅವರ ಕೊಡುಗೆಗಳು. ಆ ಲೆಕ್ಕದಲ್ಲಿ ನರೇಂದ್ರ ಮೋದಿ ಈ ದೇಶದ ಪಾಲಿಗೆ ಆಸ್ತಿಯಲ್ಲ! ದೇಶಕ್ಕೆ ಬಹುದೊಡ್ಡ ಹೊರೆ!!
Do you know now we r the super power in world because of modiji foreign trip only, he had implemented so many things which is available on foreign.
And one more thing I wants to tell you he given returns loan amount which has taken by Congress government for some petrol and diesel perpose.
I request you tell me what is the economic status now and in previous government ok.