“ನಾನು ನನ್ನ ವೈಯಕ್ತಿಕ ವಿಷಯಕ್ಕಾಗಿ ಹೋರಾಟ ಮಾಡುವುದಕ್ಕಿಂತಲೂ ಹೆಚ್ಚು ಆಸಕ್ತಿಯಿಂದ ಕಾವೇರಿ, ಮಹದಾಯಿ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡುತ್ತಿದ್ದೆ. ಆಗ ನಿಮ್ಮ ಲೆಟರ್ ಪ್ಯಾಡ್ ಎಲ್ಲೋಗಿತ್ತು?”- ಇದು ಗೃಹ ಸಚಿವ ಎಂ ಬಿ ಪಾಟೀಲ್ ಅವರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕೇಳಿರುವ ಪ್ರಶ್ನೆ.
ಇತ್ತೀಚೆಗೆ ಎಂ ಬಿ ಪಾಟೀಲ್ ಅವರು ತಮ್ಮ ಹೆಸರಿನಲ್ಲಿ ಹಾಗೂ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಹೆಸರಿನಲ್ಲಿ ನಕಲಿ ಪತ್ರವೊಂದನ್ನು ಸೃಷ್ಟಿಸಿ ಹಂಚಿದ್ದ ಕುರಿತು ದೂರು ಸಲ್ಲಿಸಿದ್ದರಲ್ಲದೇ ಈ ಕುರಿತು ಕೆಲವರನ್ನು ವಿಚಾರಣೆಗೂ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ತಮ್ಮ ಲೆಟರ್ ಪ್ಯಾಡ್ ನಲ್ಲಿ ಪತ್ರವೊಂದನ್ನು ಬರೆದಿದ್ದು ‘ಕರ್ನಾಟಕದ ಗೃಹ ಸಚಿವರ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಗುರಿಪಡಿಸುತ್ತಿದ್ದಾರೆ” ಎಂದು ದೂರು ಸಲ್ಲಿಸಿದ್ದಾರೆ.
ಪತ್ರಕರ್ತ ಹೇಮಂತ್ ಕುಮಾರ್ ಮತ್ತು ಎಂ ಬಿ ಪಟೇಲ್ ಹೆಸರಿನಲ್ಲಿ ಇರುವ ಪತ್ರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಸರ್ಕಾರ ಬೇಕೆಂದೇ ಬಿಜೆಪಿ ಹಿತೈಶಿಗಳನ್ನು ಗುರಿಪಡಿಸುತ್ತಿದೆ, ಈ ಕುರಿತು ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಶೋಭಾ ಕರಂದ್ಲಾಜೆ ತಮ್ಮ ಪತ್ರದ ಮೂಲಕ ವಿನಂತಿಸಿದ್ದಾರೆ.
ಈ ಮಾಹಿತಿಯನ್ನು ತಾವು ಸಲ್ಲಿಸಿರುವ ಪತ್ರದೊಂದಿಗೆ ಶೋಭಾ ಕರಂದ್ಲಾಜೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್
“ನಕಲಿ ಪತ್ರದ ಕುರಿತು ತನಿಖೆ ನಡೆಯುತ್ತಿರುವು ಕುರಿತು ತಾವು ಯಾಕೆ ಇಷ್ಟೊಂದು ಗಾಬರಿಯಾಗಿದ್ದೀರಿ? ನಾನು ನನ್ನ ವೈಯಕ್ತಿಕ ವಿಷಯಕ್ಕಾಗಿ ಹೋರಾಟ ಮಾಡುವುದಕ್ಕಿಂತಲೂ ಹೆಚ್ಚು ಆಸಕ್ತಿಯಿಂದ ಕಾವೇರಿ, ಮಹದಾಯಿ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡುತ್ತಿದ್ದೆ.
ಆಗ ನಿಮ್ಮ ಲೆಟರ್ ಪ್ಯಾಡ್ ಎಲ್ಲೋಗಿತ್ತು?ನಿಮ್ಮ ಪ್ರಚಾರ ರಾಜಕಾರಣದ ಕಾರಣದ ಸೊನ್ನೆ ವಿಕಾಸವಾಗಿದೆ, ಮೇ 23ರ ಬಗ್ಗೆ ನಿಮಗೆ ಭಯವೇ?”
ಎಂದು ಕೇಳಿದ್ದಾರೆ.
Why R U getting anxious about investigation in a fake letter case?
I fought for Cauvery, Mahadaayi in SC with more passion than any I would have for a personal issue of mine
Where was your letterpad then? Also because of ur propaganda politics, 0 Vikas are you afraid of May 23? https://t.co/iz9ptyz30c
— M B Patil (@MBPatil) April 29, 2019