ನವದೆಹಲಿ: ಅತ್ಯಾಚಾರಿ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಗೆ ಗುಜರಾತ್ ಸೂರತ್ ಕೋರ್ಟ್ ಜೀವಾವಾಧಿ ಶಿಕ್ಷೆ ವಿಧಿಸಿದೆ.
ಸೂರತ್ ಮೂಲದ ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಳೆದ ವಾರವಷ್ಟೇ ಶಿಕ್ಷೆಗೆ ಗುರಿಯಾಗಿದ್ದ ನಾರಾಯಣ ಸಾಯಿಗೆ ಸೂರತ್ ಕೋರ್ಟ್ 11 ವರ್ಷಗಳ ನಂತರ ಶಿಕ್ಷೆಯ ಅವಧಿಯನ್ನು ಇಂದು ಘೋಷಿಸಿದೆ.
ಅಸಾರಾಂ ಬಾಪು ಆಶ್ರಮದಲ್ಲಿ ಆಶ್ರಯ ಪಡೆದಿರುವ ವೇಳೆ ಅಸಾರಾಂ ಬಾಪು ಮತ್ತು ನಾರಾಯಣ ಸಾಯಿ ತಮಗೆ ಲೈಂಗಿಕ ಕಿರುಕುಳ ಹಾಗೂ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಹೋದರಿಯರು ದೂರು ನೀಡಿದ್ದರು. ಪ್ರಕರಣ ಸಂಬಂಧ ಪ್ರಕರಣ ಸಂಬಂಧ ಪೊಲೀಸರು 2014ರಲ್ಲಿ 1000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ನಾರಾಯಣ ಸಾಯಿ ವಿರುದ್ಧ ಒಟ್ಟು 53 ಸಾಕ್ಷಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ನಾರಾಯಣ ಸಾಯಿ ತಂದೆ ಅಸಾರಾಂ ಬಾಪು ಹಾಗೂ ಆತನ ಇಬ್ಬರು ಸಹಚರರಿಗೆ ಜೋಧ್ ಪುರ ಕೋರ್ಟ್ 2013ರಲ್ಲಿ ಶಿಕ್ಷೆ ವಿಧಿಸಿತ್ತು. ಸದ್ಯ ಅಸಾರಾಂ ಬಾಪು ಜೋಧ್ ಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.