ಶಿವಮೊಗ್ಗ: ಇಲ್ಲಿನ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಕಾರಿನಲ್ಲಿದ್ದ ಶಿವಮೊಗ್ಗ ಮೂಲದ ಮೆಸ್ಕಾಂ ನಿವೃತ್ತ ಎಇಇ ಚಂದ್ರಶೇಖರ್ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ನಗರದಿಂದ ಕುಂಸಿ ಸಮೀಪದ ಚೋರಡಿಗೆ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದರ ನಿಮಿತ್ತ ಪ್ರಯಾಣಿಸುತ್ತಿದ್ದ ಕುಟುಂಬ ಇನ್ನೇನು ಊರು ತಲುಪಲು ಕೆಲವೇ ನಿಮಿಷಗಳಿದ್ದಂತೆ ಈ ಭೀಕರ ಅಪಘಾತ ಸಂಭವಿಸಿದೆ. ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆತ ಹೊಡೆತಕ್ಕೆ ಇಡೀ ಕಾರು ನುಜ್ಜುಗುಜ್ಜಾಗಿದೆ.
ಚಂದ್ರಪ್ಪನವರ ಪತ್ನಿ ಮಂಗಳಾ, ಪುತ್ರ ಮಂಜುನಾಥ, ಅಳಿಯ ನೀಲಕಂಠ , ಪುತ್ರಿ ಉಷಾ ಹಾಗೂ ಮಗು ನಂದೀಶ್ ಮೃತಪಟ್ಟಿದ್ದು, ಓರ್ವ ಮಗುವನ್ನು ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.