#KarnatakaJobsForKannadigas ಎಂಬ ಹ್ಯಾಶ್ ಟ್ಯಾಗ್ ಮೂಲಕ ನೆನ್ನೆಯಿಂದಲೇ ನಿಧಾನವಾಗಿ ಶುರುವಾದ ಟ್ವಿಟ್ಟರಾಂದೋಲನ ಇಂದು ಮದ್ಯಾಹ್ನನ ಹೊತ್ತಿಗೆ ವೇಗ ಪಡೆದು ಸಂಜೆ ಆರು ಗಂಟೆಯಿಂದ ಅಧಿಕೃತವಾಗಿ ಟ್ವಿಟ್ಟರ್ ಟ್ರೆಂಡಿಂಗ್ ಶುರುವಾಗಿದೆ.
ನೆನ್ನೆ ತಮಿಳು ನಾಡಿನ ಟ್ವಿಟ್ಟರಿಗರು #TamilNaduJobsForTamils ಎಂಬ ಹ್ಯಾಶ್ಟ್ಯಾಗ್ನಡಿ ಅಭಿಯಾನ ನಡೆಸಿದ್ದರು. ತಮಿಳು ನಾಡಿನ ಸರ್ಕಾರಿ ಉದ್ಯೋಗಗಳಲ್ಲಿ ಅದರಲ್ಲೂ ರೈಲ್ವೆಯಂತಹ ಇಲಾಖೆಗಳಲ್ಲಿ ಹಿಂದಿ ಪ್ರದೇಶದವರಿಗೆ ಉದ್ಯೋಗ ನೀಡುವ ಮೂಲಕ ತಮಿಳರಿಗೆ ಉದ್ಯೋಗ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಈ ಟ್ವಟ್ಟರ್ ಅಭಿಯಾನ ನಡೆಸಲಾಗಿತ್ತು.
ತಮಿಳುನಾಡಿನ ಈ ಟ್ವಿಟರ್ ಅಭಿಯಾನವು ಇಂದು ಅದೇ ಬಗೆಯ ಟ್ವಿಟರ್ ಅಭಿಯಾನವನ್ನು ಕನ್ನಡಿಗರು ಕೈಗೊಳ್ಳುವಂತೆ ಪ್ರೇರೇಪಿಸಿದ ಪರಿಣಾಮ “ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ” ಎಂಬ ಬೇಡಿಕೆಯ ಟ್ವಿಟರ್ ಹ್ಯಾಶ್ ಟ್ಯಾಗ್ ಅಭಿಯಾನ ಚುರುಕುಗೊಂಡಿದೆ.
ಈ ಅಭಿಯಾನದ ಕುರಿತು ಜಾಗೃತಿ ಸಂದೇಶವೊಂದನ್ನು ಬೆಳಿಗ್ಗೆಯಿಂದ ಹಂಚಿಕೊಳ್ಳಲಾಗಿತ್ತು.
ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕನ್ನಡ ಪರ ಕಾರ್ಯಕರ್ತ ರೂಪೇಶ್ ರಾಜಣ್ಣ ಮತ್ತು ಸಿನಿಮಾ ನಟ ಅಜಯ್ ರಾವ್ ಮೊದಲಾದವರು ಫೇಸ್ಬುಕ್ ಲೈವ್ ಮೂಲಕವೂ ಮನವಿ ಮಾಡಿಕೊಂಡಿದ್ದರು.
ತಮಿಳು ನಾಡಿನ ಟ್ವಿಟರಿಗರು ನಡೆಸಿದ್ದ ಅಭಿಯಾನ ಕೇವಲ ಸರ್ಕಾರಿ ಉದ್ಯೋಗಗಳಿಗೆ ಸೀಮಿತವಾಗಿತ್ತು. ಆದರೆ ಕನ್ನಡಿಗರ ಟ್ವಿಟರ್ ಅಭಿಯಾನ ಸರ್ಕಾರಿ ಉದ್ಯೋಗಗಳಿಗೆ ಸೀಮಿತವಾದಂತಿಲ್ಲ.ಕನ್ನಡಿಗರ ಟ್ವಿಟರ್ ಅಭಿಯಾನ ಕರ್ನಾಟಕದಲ್ಲಿ ಸರಕಾರಿ ಮತ್ತು ಖಾಸಗಿ ಎರಡೂ ಕ್ಷೇತ್ರಗಳ ಉದ್ಯೋಗಗಳಲ್ಲಿ ಅವಕಾಶಗಳು ಕನ್ನಡಿಗರ ಕೈತಪ್ಪಿ ಹೋಗಿರುವ ಕುರಿತು ಕಾಳಜಿ ವ್ಯಕ್ತಪಡಿಸಿದೆ.
Kannadigas should get priority for jobs in karnataka.
We are no more compromising on hearing kannad gottilla in banks, Govt offices etc.
Our job our right. ನಮ್ಮ ಉದ್ಯೋಗ ನಮ್ಮ ಹಕ್ಕು#Karnatakajobsforkannadigas pic.twitter.com/a6fWY1hcbb— Rahul star (@starr_rahul) May 4, 2019
ಕನ್ನಡ ಪರ ಹೋರಾಟಗಾರ ರಮಾನಂದ ಅಂಕೋಲಾ ಅವರು ಈ ಟ್ವಿಟ್ಟರಾಂದೋಲನದ ಬೇಡಿಕೆ ಏನೆಂದು ತಿಳಿಸುತ್ತಾ “ಅನಿಯಂತ್ರಿತವಾಗಿ ಬೆಂಗಳೂರಿಗೆ ವಲಸೆ ಬಂದು ಕಂಪನಿಯ ದೊಡ್ಡದೊಡ್ಡ ಪೋಸ್ಟುಗಳಲ್ಲಿ ಬೀಡು ಬಿಟ್ಟಿರುವ ಪರಭಾಷಿಕರು ತಮ್ಮ ಭಾಷೆಯವರನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ.ನಮ್ಮ ನೆಲದಲ್ಲೇ ನಾವು ನಿರ್ಗತಿಕರಾಗಿದ್ದೇವೆ.ಇಲ್ಲಿ ಸೃಷ್ಟಿಯಾಗುವ ಕೆಲಸಗಳು ಹೆಚ್ಚು ಇಲ್ಲಿಯವರಿಗೇ ಸಿಗಬೇಕು ಅನ್ನುವುದು ನಮ್ಮ ಬೇಡಿಕೆ” ಎಂದು ಟ್ವೀಟ್ ಮಾಡಿದ್ದಾರೆ.
ಚೈತನ್ಯ ಟಿ ಎಸ್,
“ಕರ್ನಾಟಕದಲ್ಲಿ ಉದ್ಯೋಗಗಳ ವಿಷಯದಲ್ಲಿ ಕನ್ನಡಿಗರಿಗೇ ಆದ್ಯತೆ ಸಿಗಬೇಕು. ಇದು ನಮ್ಮ ನಾಡು. ಡೋಂಗಿ ರಾಷ್ಟ್ರೀಯವಾದ ಸಾಕು. ಕರ್ನಾಟಕದಲ್ಲಿ ಉದ್ಯೋಗಗಳ ವಿಷಯದಲ್ಲಿ ಮೀಸಲಾತಿ ಪಡೆಯಲು ಕನ್ನಡಿಗರಿಗೆ ಎಲ್ಲಾ ಹಕ್ಕಿದೆ” ಎಂದಿದ್ದಾರೆ.
We Kannadigas need primacy in the jobs generated in Karnataka. This is our nadu. Enough of this pseudo nationalism. We Kannadigas have every right to reservation of jobs in Karnataka. #KarnatakaJobsForKannadigas
— Chaitanya (@Chaitanya_TS) May 4, 2019
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಅಭಿಯಾನದ ಮುಖ್ಯ ಅಂಶವೇನೆಂದರೆ ಅನೇಕರು ಕೇಂದ್ರ ಸರ್ಕಾರದ ಉದ್ಯೋಗ ನೀತಿಯಿಂದಾಗಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಕೇಳುತ್ತಿರುವುದು. ಉದಾಹರಣೆಗೆ ಐಬಿಪಿಎಸ್ ನಿಯಮಗಳಲ್ಲಿ ಕೇಂದ್ರ ಸರ್ಕಾರ ತಂದ ಬದಲಾವಣೆಯಿಂದ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಉದ್ಯೋಗಗಳು ಕನ್ನಡಿಗರ ಕೈತಪ್ಪಿರುವುದರ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಅಚ್ಯುತ ಭಾರದ್ವಾಜ್ ಅವರು
“ಕೇಂದ್ರ ಸರ್ಕಾರವು ಐಬಿಪಿಎಸ್ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಬೇಕು. ಕರ್ನಾಟಕದಲ್ಲಿ ಯಾವುದೇ ಬ್ಯಾಂಕಿಗೆ ಹೋದರೂ ನಿಮಗೆ ಕನ್ನಡಿಗರು ಕಾಣುವುದಿಲ್ಲ. ಈ ವ್ಯವಸ್ಥಿತ ಮತ್ತು ಸಾಂಸ್ಥಿಕ ತಾರತಮ್ಯ ಕೂಡಲೇ ನಿಲ್ಲಬೇಕು” ಎಂದಿದ್ದಾರೆ.
The Central Govt must make amends to the IBPS recruitment rule and domicile requirements. Every bank you go in KA, no Kannadigas are present. This systematic and institutional discrimination must stop immediately #KarnatakaJobsForKannadigas
— Achyutha Bharadwaj (@achyuS) May 4, 2019
ಯಾವುದೇ ಐಟಿ ಕಂಪನಿಗೆ ಇಂಟರ್ವ್ಯೂಗೆ ಹೋದ್ರೆ ಕರ್ನಾಟಕದವರು ಅಂದ್ರೆ ರಿಜೆಕ್ಟ್ ಮಾಡ್ತಾರೆ, ಯಾಕಂದರೆ ಮ್ಯಾನೇಜರ್ ಯಾವ ಸ್ಟೇಟ್ ಆ ಸ್ಟೇಟ್ ಕ್ಯಾಂಡೇಡುಗಳಿಗೆ ಮಾತ್ರ ಜಾಬ್ ಕೊಡ್ತಾರೆ. ಕರ್ನಾಟಕದವರಿಗೂ ಜಾಬ್ ಕೊಡ್ತಾರೆ, ಏನ್ ಗೊತ್ತಾ? ಲೇಡೀಸ್ ಗೆ ಕ್ಲೀನಿಂಗ್ ಜಾಬ್, ಜೆಂಟ್ಸ್ ಗೆ ಡ್ರೈವರ್ ಜಾಬ್” ಎಂದು ಕಂಗ್ಲಿಷಿನಲ್ಲಿ ಜಾಡಿಸಿದ್ದಾರೆ ಮಧುರಾ
yavde IT and mech company's ge interviews ge hodre Karnataka davaru andre reject madthre because manger yava state ha state candidates ge mathra job kodthane Karnataka.. davrgu job kodthre yenu job Gotha ladies ge cleaning job gent's ge driver job #KarnatakaJobsForKannadigas
— madhura (@bhoomimadhura) May 4, 2019
ಹರಿ ಮೈಸೂರು,
“ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಶೇಕಡಾ 90ರಷ್ಟು ಜನರನ್ನು ಕನ್ನಡಿಗರಲ್ಲದವರೇ ಉದ್ಯೋಗಿಗಳು, ಕನಿಷ್ಟ ಕನ್ನಡ ಭಾಷೆಯಲ್ಲಿಯೂ ಸೇವೆಗಳನ್ನು ಒದಗಿಸುವುದಿಲ್ಲ. ಬ್ಯಾಂಕ್ ಪರೀಕ್ಷೆ ಬರೆಯಲು ಕೇವಲ ಹಿಂದಿ, ಇಂಗ್ಲಿಷ್ ಆಯ್ಕೆ ಮಾತ್ರ ಯಾಕೆ? ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಶಸ್ತ್ಯ ನೀಡಿ” ಎಂದು ಆಗ್ರಹಿಸಿದ್ದಾರೆ
In Banks, Railways, post office etc more than 90% of the employees are non kannadigas, we are not even getting services in Kannada. Why there is only Hindi & English option for writing exams ? Give equal status for all languages@narendramodi #KarnatakaJobsForKannadigas
— hari_mysuru (@harishk69596230) May 4, 2019
ಕುಮಾರಸ್ವಾಮಿ,
“ಒಂದು ಭಾರತ ಒಂದು ರಾಷ್ಟ್ರ ಎಂಬ ಪರಿಕಲ್ಪನೆ ರಾಜ್ಯಗಳಿಗೆ ಉದ್ಯೋಗ, ಅಧಿಕಾರ ಅಸಮತೋಲನ, ವಲಸೆ, ಉದ್ಯಮ, ಭಾಷಾ ಹೇರಿಕೆ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಹಲವು ರೀತಿಯಲ್ಲಿ ಹಾನಿಯೆಸಗಿದೆ. ರಾಜ್ಯಗಳ ಉದ್ಯೋಗಗಳನ್ನು ಆಯಾ ರಾಜ್ಯದವರಿಗೆ ನೀಡಬೇಕು. ಬಲವಾದ ಒಕ್ಕೂಟ ವ್ಯವಸ್ಥೆಗಾಗಿ ದನಿ ಎತ್ತಿ” ಎಂದು ಕರೆನೀಡಿದ್ದಾರೆ.
Concept of One India one nation one language has damaged non state in many aspect lke Job, power imbalance,Migration,business, language imposition,banking. Job at state should be given to state people. Its time to raise voice for Stronger federal systm#KarnatakaJobsForKannadigas
— ಕುಮಾರಸ್ವಾಮಿ Kumaraswamy (@kadakollaswamy) May 4, 2019
ಸಂಜೆಯ ನಂತರ ಬಿರುಸಿನಿಂದ ನಡೆಯುತ್ತಿರು ಈ ಅಭಿಯಾನದಲ್ಲಿ ಕೆಲವು ಅತಿರೇಕದ ಟ್ವೀಟುಗಳೂ ಹಂಚಿಕೆಯಾಗುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉದ್ಯೋಗ ನೀತಿಗಳಲ್ಲಿ ತಿದ್ದುಪಡಿ ತರಲು ಒತ್ತಾಯಿಸುವುದು ಈ ಟ್ವಿಟ್ಟರ್ ಅಭಿಯಾನದ ಉದ್ದೇಶವಾಗಿದ್ದರೂ ಕೆಲವರು ತಮಿಳು, ಹಿಂದಿ ಭಾಷಿಕರನ್ನು ಓಡಿಸಬೇಕು ಎಂಬಂತೆ ಸಂದೇಶಗಳನ್ನು ಹಾಕುತ್ತಿರುವುದೂ ನಡೆಯುತ್ತಿದೆ. ಆದರೆ ಇಂತವರ ಸಂಖ್ಯೆ ನಗಣ್ಯವಾಗಿದ್ದು ಗಂಭೀರ ರೀತಿಯಲ್ಲಿ ಚರ್ಚೆ ನಡೆಸುತ್ತಿರುವ ಕನ್ನಡಿಗರ ಸಂಖ್ಯೆ ಹೆಚ್ಚಿದೆ ಎಂಬುದು ಸಮಾಧಾನದ ಸಂಗತಿ.
ಈ ಅಭಿಯಾನಕ್ಕೆ ಕೆಲವು ತಮಿಳರೂ, ಮರಾಠಿಗರೂ ಬೆಂಬಲಿಸಿದ್ದಾರೆ. ಆದರೆ ಇರುವರೆಗೆ ಟ್ವಿಟರ್ ಖಾತೆ ಹೊಂದಿರುವ ಯಾವುದೇ ಪ್ರಮುಖ ಕನ್ನಡ ರಾಜಕಾರಣಿಗಳು ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗಕ್ಕಾಗಿ ಆಗ್ರಹಿಸುವ ಈ ಟ್ವಿಟರಾಂದೋಲನವನ್ನು ಬೆಂಬಲಿಸಿದಂತೆ ಕಾಣುವುದಿಲ್ಲ. ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಒಬ್ಬರು ಇದಕ್ಕೆ ಅಪವಾದ.
ರಾಜ್ಯದಲ್ಲಿ ಉದ್ಯಮ ಸ್ಥಾಪಿಸುವವರು ಕನ್ನಡಿಗರಿಗೆ ಆಧ್ಯತೆಯೆ ಮೇಲೆ ಉದ್ಯೋಗ ನೀಡಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕು.
ಸಂದರ್ಶನದಲ್ಲಿ ಕನ್ನಡದಲ್ಲಿ ಉತ್ತರಿಸಲು ಅವಕಾಶ ಇರಬೇಕು.
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ನೀಡಬೇಕು.#KarnatakaJobsForKannadigas
— A.N.NatarajGowda INC🇮🇳 (@annatarajgowda) May 4, 2019
Tamilnadu jobs should go for Tamilians, Andra jobs should go for Telugus. It is natural to say that Karnataka jobs should go for Kannadigas. #KarnatakaJobsForKannadigas
— Ramananda Ankola (@ramhnaik) May 4, 2019
Why selection process in KPTCL is tweaked to help non Kannadigas? while in other states, it is primarily for locals only. #KarnatakaJobsForKannadigas Job aspirants irked over selection of AP students https://t.co/CLjb63TC6o via @NewIndianXpress
— Kiran (@kodlady) May 4, 2019