ರಾಜ್ಯದ ಬಹುತೇಕ ರಾಜಕಾರಣಿಗಳು ಇಲ್ಲಿ ಚುನಾವಣೆ ಮುಕ್ತಾಯವಾದೊಡನೆ ವಿಶ್ರಾಂತಿ ಮೋಡ್ಗೆ ಜಾರಿಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಬರಲು ಒಂದು ತಿಂಗಳು ಕಾಯಬೇಕಾಗಿರುವುದರಿಂದ ಅಲ್ಲಿಯವರೆಗೆ ಯಾವ ಚಿಂತೆಯಿಲ್ಲದೆ ಆರಾಮವಾಗಿ ಕಾಲ ಕಳೆಯೋಣ ಎಂದು ವಿಶ್ರಾಂತಿಯಲ್ಲಿದ್ದರೆ ಇನ್ನು ಕೆಲವರು ತಮ್ಮ ಗೆಲುವನ್ನು ಈಗಲೇ ಖಾತ್ರಿ ಮಾಡಿಕೊಳ್ಳಲು ಹೋಮ, ಹವನ, ದೇವಸ್ಥಾನ, ಹರಕೆ ಎಂದು ಟೆಂಪಲ್ ರನ್ನಿಂಗ್ ನಡೆಸುತ್ತಿದ್ದಾರೆ. ಆದರೆ ಬಹುಭಾಷಾ ನಟರಾಗಿ ಇತ್ತೀಚೆಗೆ ಪೂರ್ಣಾವಧಿ ರಾಜಕಾರಣಿಯಾಗಿರುವ ಪ್ರಕಾಶ್ ರಾಜ್ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತದಾನದ ನಂತರವೂ ವಿರಮಿಸದೇ ಚುನಾವಣಾ ಪ್ರಚಾರ ಮುಂದುವರೆಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತದಾನ ನಡೆದ ಮರುದಿನದಿಂದಲೇ ದೇಶದ ಇತರೆಡೆಗಳಲ್ಲಿಯೂ ತಾವು ಬೆಂಬಲಿಸುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಇತ್ತೀಚೆಗೆ ಅವರು ರಾಜಧಾನಿ ದೆಹಲಿಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ದೆಹಲಿಯ ಕಬೀರ್ ನಗರ, ಬಾಬರ್ ಪುರಗಳಲ್ಲಿ ಪ್ರಚಾರ ನಡೆಸಿದ ಬಳಿಕ ಈ ಬಗ್ಗೆ ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದಾರೆ.
Campaigning In Delhi….with the Media n CITIZENS of Kabir Nagar..Babarpur..Wonderful to witness @AamAadmiParty and its wonderful work EARNING so much LOVE n RESPECT from the people .. proud to be here to support n empower true #citizensvoice in parliament.. @ArvindKejriwal 💪💪 pic.twitter.com/G22kNTDsXw
— Prakash Raj (@prakashraaj) May 4, 2019
ದ್ವೇಷ ರಾಜಕಾರಣದ ವಿರುದ್ಧವಾಗಿ ಅಭಿವೃದ್ಧಿಯ ಪರವಾಗಿ ತಾವು ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು ದೆಹಲಿಯಲ್ಲಿ ಆಪ್ ಜಾರಿಗೊಳಿಸಿರುವ ಯೋಜನೆಗಳಿಂದ ಜನರು ಅತ್ಯಂತ ಸಂತೋಷದಿಂದ ಆಪ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವುದಾಗಿ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಕೆಲವ ದಿನಗಳ ಮೊದಲು ಪ್ರಕಾಶ್ ರಾಜ್ ಬಿಹಾರದ ಬೇಗುಸರಾಯ್ ನಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕನ್ನಯ್ಯ ಕುಮಾರ್ ಪರವಾಗಿ ಬೇಗುಸರಾಯ್ ಕ್ಷೇತ್ರದ ಸೂರ್ಯಪುರ, ಭಗವಾನ್ ಪುರ ಮುಂತಾದ ಕಡೆಗಳಲ್ಲಿ ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ, ಸ್ವರ ಭಾಸ್ಕರ್ ಮೊದಲಾದವರೊಂದಿಗೆ ಸೇರಿ ಪ್ರಚಾರದಲ್ಲಿ ತೊಡಗಿದ್ದರು.
ಈ ಕುರಿತು ತಿಳಿಸುತ್ತಾ, “ಬೇಗುಸರಾಯ್ ಕ್ಷೇತ್ರದಲ್ಲಿ ಕನ್ನಯ್ಯ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ, ಜನರ ಕಣ್ಣುಗಳಲ್ಲಿ ಆ ನಂಬಿಕೆ, ವಿಶ್ವಾಸವನ್ನು ಕಾಣುತ್ತಿದ್ದೇನೆ. ಬದಲಾವಣೆಯ ಗಾಳಿ, ಸಬಲೀಕರಣದ ಛಾಯೆ ಕಾಣುತ್ತಿದೆ. ಕನ್ನಯ್ಯ ಪರವಾಗಿ ಇರುವುದಕ್ಕೆ ಹೆಮ್ಮೆ ಇದೆ,” ಎಂದು ಹೇಳಿದ್ದನ್ನು ಗಮನಿಸಬಹುದು.

#begusarai …VOTED today … as #ChowkidaarSena rides on a FAKE wave. .. the grass root REALITY is.. the undercurrent has empowered and ensured @kanhaiyakumar the much needed #citizensvoice TO parliament.. goal achieved .. see you in DELHI for @AtishiAAP n more..💪💪 pic.twitter.com/igcZ5HGYZ7
— Prakash Raj (@prakashraaj) April 29, 2019
ಕನ್ನಯ್ಯ ಕುಮಾರ್ ಪರ ಪ್ರಚಾರದ ನಂತರ ಆಮ್ ಆದ್ಮಿ ಪಕ್ಷದ ಪೂರ್ವ ದೆಹಲಿಯ ಅಭ್ಯರ್ಥಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಅತಿಶಿ ಅವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದೇನೆ. ಅತಿಶಿ ಅವರು ಸಂಸತ್ ನಲ್ಲಿ ಪ್ರಜೆಗಳ ಧ್ವನಿಯನ್ನು ಮೊಳಗಿಸಲಿದ್ದಾರೆ, ಭವಿಷ್ಯಕ್ಕಾಗಿ ನಿಮ್ಮ ಮತವಿರಲಿ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು.
@AtishiAAP … more power to you .. I will be there soon to campaign for you .. dear citizens she is one of the #citizensvoice we need to empower to parliament.. let’s VOTE FOR OUR FUTURE.. https://t.co/5rn9ZyDNdR
— Prakash Raj (@prakashraaj) April 22, 2019