#KarnatakaJobsForKannadigas ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟರಾಂದೋಲನ ತೀವ್ರಗೊಳ್ಳುತ್ತಿದ್ದಂತೆ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಸ್ಪಂದನೆ ನೀಡಿದ್ದಾರೆ.
“ಇಂದು ಬೆಳಗಿನಿಂದಲೇ ತೀವ್ರತೆ ಪಡೆಯತೊಡಗಿದ್ದ “ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ” ಅಭಿಯಾನಕ್ಕೆ ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ಸಿಎಂ “ಸಾಮಾಜಿಕ ಜಾಲತಾಣದಲ್ಲಿ ನಮ್ಮ ರಾಜ್ಯದ ಯುವಜನತೆ ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ದಕ್ಕಬೇಕು ಎಂದು ಹೋರಾಟ ನಡೆಸುತ್ತಿರುವುದನ್ನು ಗಮನಿಸಿದ್ದೇನೆ.
ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು”
ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಮ್ಮ ರಾಜ್ಯದ ಯುವ ಜನತೆ ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಳು ಕನ್ನಡಿಗರಿಗೆ ದಕ್ಕಬೇಕು ಎಂದು ಹೋರಾಟ ನೆಡೆಸುತ್ತಿರುವುದನ್ನು ಗಮನಿಸಿದ್ದೇನೆ.
ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು.
#KarnatakaJobsForKannadigas— H D Kumaraswamy (@hd_kumaraswamy) May 4, 2019
ಮುಖ್ಯಮಂತ್ರಿಗಳ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೆಲವು ಟ್ವಿಟರಿಗರ ಅಭಿಪ್ರಾಯಗಳು ಹೀಗಿವೆ
ಕನ್ನಡಿಗ ಮಂಜುನಾಥ್,
ಬಹಳ ನನ್ನಿ. ಆದಶ್ಟು ಬೇಗ ಆಗಬೇಕು. ಬರಿ ‘ಸಿ’ ಮತ್ತು ‘ಡಿ’ ಮಾತ್ರವಲ್ಲ ಎಲ್ಲವುದಕ್ಕು ಮಿಸಲಾತಿ ಇರಬೇಕು. ಆಗಲ್ಲ ಎನ್ನುವ ಕಂಪನಿಗಳಿಗೆ ಪರವಾನಗಿ ಕೊಡಬೇಡಿ
ಸುಧಾಕರ್ ಯರಗುಂಟೆ,
ಆಗಲ್ಲ ಅನ್ನುವ ಕಂಪೆನಿಗಳನ್ನ ರಾಜ್ಯದಿಂದ ಗಡಿಪಾರು ಮಾಡಿ ಕನ್ನಡಿಗರಿಗೆ ಮತ್ತೆ ರಾಜ್ಯಕ್ಕೆ ಏನು ನಷ್ಟ ಇಲ್ಲ,ಕನ್ನಡಿಗರಿಗೆ ಉದ್ಯೋಗ ಕೊಡೋ ಕಂಪನಿಗಳಿಗೆ ಆ ಜಾಗ ಮತ್ತೆ ಸೌಲಭ್ಯಗಳನ್ನು ಕೊಡಿ ಅಷ್ಟೇ
ಶ್ರೀಕಾಂತ್ ದರ್ಶನ್ ನೀಡಿರುವ ಪ್ರತಿಕ್ರಿಯೆ ಇಂತಿದೆ,
ಧನ್ಯವಾದಗಳು ಸಾರ್ ನಮ್ಮ ಈ ಮನವಿಯನ್ನು ದಯಮಾಡಿ ಗಣನೆಗೆ ತೆಗೆದುಕೊಂಡು ಕನ್ನಡಿಗರಿಗೆ ಸಿಗಬೇಕದ ಎಲ್ಲ ಸೌಲಭ್ಯಗಳು ಕೆಲಸಗಳು ಕನ್ನಡಿಗರಿಗೆ ಹೆಚ್ಚು ಸಿಗುವಂತಗಲಿ ಜೊತೆಗೆ ಸರೋಜಿನಿ ಮಹಿಷಿವರದಿ ಜಾರಿಗೆಯಾಗಲಿ ಎಂದು ಕೋರುವೆವು
ಜೈ ಕರುನಾಡ ಸೇವಕರು @rajanna_rupesh
— ಶ್ರೀಕಾಂತ್ ದರ್ಶನ್ (@qfmpAXmztXRdjj3) May 4, 2019