ಮಲದ ಗುಂಡಿಯ ಸಾವುಗಳಿಗೆ ಕೊನೆಯೇ ಇಲ್ಲವಾಗಿದೆ. ದೆಹಲಿಯ ರೋಹಿಣಿಯ ಪ್ರೇಮ್ ನಗರದಲ್ಲಿ ಮನೆಯೊಂದರಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಗುಂಡಿಯೊಳಗೆ ಇಳಿದ ಇಬ್ಬರು ಕಾರ್ಮಿಕರು ಅಸುನೀಗಿದ್ದು, ಪ್ರಜ್ಞಾಹೀನರಾಗಿದ್ದ ಇಬ್ಬರು ಕಾರ್ಮಿಕರನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಗುಂಡಿಗಿಳಿದೊಡನೆ ಎಲ್ಲಾ ಕಾರ್ಮಿಕರ ಶ್ವಾಸಕೋಶಕ್ಕೆ ವಿಷಾನಿಲ ನುಗ್ಗಿ ಪ್ರಜ್ಞೆ ತಪ್ಪಿದ್ದಾರೆ. ಎಲ್ಲರನ್ನೂ ಆಸ್ಪತ್ರೆ ಸಾಗಿಸಲಾಗಿದೆ. ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ, ಮೂವರು ಬದುಕಿ ಉಳಿದಿದ್ದಾರೆ.
ಮೃತರಾದ ಕಾರ್ಮಿಕರನ್ನು ದೀಪಕ್ (30) ಮತ್ತು ಗಣೇಶ್ ಸಾಹ (35) ಎಂದು ಗುರುತಿಸಲಾಗಿದೆ.
ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಮಲದ ಗುಂಡಿಗೆ ಇಳಿಸಿದ ಮನೆಯ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಎಸ್ ಡಿ ಮಿಶ್ರಾ ತಿಳಿಸಿದ್ದಾರೆ.
ತಿಂಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸುವ ವಿನೂತನ ಯಂತ್ರಗಳನ್ನು ಬಿಡುಗಡೆ ಮಾಡಿದ್ದರು. ಇವುಗಳ ಮೂಲಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸದೇ ಕಾರ್ಮಿಕರನ್ನೇ ಮಲದ ಗುಂಡಿಗೆ ಇಳಿಸಿರುವ ಕಾರಣ ಈ ದಾರುಣ ಸಾವುಗಳು ಸಂಭವಿಸಿವೆ.
ಕೆಳಗಿನ ಸುದ್ದಿಯನ್ನೂ ಓದಿ: