ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಅನ್ನು ಟೋಲ್ ಬಾಜ್ (ಸುಂಕ ವಸೂಲು) ಪಕ್ಷ ಎಂದಿರುವ ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು ಎನಿಸಿತ್ತು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಿರುವ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ವೇಳೆ ಟಿಎಂಸಿ ಟೋಲ್ ಬಾಜ್ (ಸುಂಕ ವಸೂಲು) ಪಕ್ಷ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಮಮತಾ, ನನಗೆ ಹಣ ಮುಖ್ಯವೇ ಅಲ್ಲ ಎಂದು ಉತ್ತರಿಸಿ, ಇದಕ್ಕೆ ಪ್ರಜೆಗಳು ತಕ್ಕ ಪಾಠ ಕಲಿಸಲಿದ್ದಾರೆ, ಪ್ರಜೆಗಳಿಂದ ಕಪಾಳ ಮೋಕ್ಷ ಮಾಡಬೇಕೆನಿಸಿತ್ತು ಎಂದು ಹೇಳಿದ್ದರು.
#WATCH West Bengal CM Mamata Banerjee in Purulia: Money doesn't matter to me.That is why when Narendra Modi came to Bengal and accused my party of being Tolabaaz (Toll collector), I wanted to give him a tight slap of democracy pic.twitter.com/JnE5xywWJI
— ANI (@ANI) May 7, 2019
ಮೋದಿ ಅವರು ತಮ್ಮ ಭಾಷಣದುದ್ದಕ್ಕೂ ಮಮತಾ ಅವರಿಗೆ, ಭ್ರಷ್ಟಾಚಾರದ ರೂವಾರಿ ಟಿಎಂಸಿ ಅಧಿನಾಯಕಿ ಎಂದು ಹಾಗೂ ಶಾರದಾ ಮತ್ತು ನಾರದಾ ಹಗರಣದಿಂದ ಗಳಿಸಿದ ಹಣದ ಮೂಲಕ ಹರಾಜಿನಲ್ಲಿ ಪ್ರಧಾನಿ ಹುದ್ದೆಯನ್ನು ಖರೀದಿಸಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಮೋದಿಗೆ ಪ್ರಜೆಗಳಿಂದ ಕಪಾಳ ಮೋಕ್ಷ ಮಾಡಬೇಕೆನಿಸಿತ್ತು ಎಂಬ ಮಮತಾ ಅವರ ಹೇಳಿಕೆಯನ್ನು ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರೂ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ, “ಮಮತಾ ಇಂದು ನೀವು ಎಲ್ಲಾ ಎಲ್ಲೆಗಳನ್ನು ಮೀರಿದ್ದೀರಾ. ನೀವು ಒಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಮೋದಿ ಅವರು ದೇಶದ ಪ್ರಧಾನ ಮಂತ್ರಿ. ನಾಳೆ ನೀವೂ ಸಹ ಅವರೊಂದಿಗೆ ಚರ್ಚಿಸಬೇಕಿರುತ್ತದೆ. ಈ ಸಂದರ್ಭದಲ್ಲಿ ಬಶಿರ್ ಬದ್ರ್ ಅವರ ಕವನವೊಂದನ್ನು ನಿಮಗೆ ನೆನಪಿಸಲು ಇಚ್ಚಿಸುತ್ತೇನೆ: ಕೋಪದಲ್ಲಿ ಏನೆಲ್ಲಾ ಬಯಸುತ್ತೇವೆ, ಆದರೆ ನೆನಪಿನಲ್ಲಿರಲಿ ನಾಳೆ ನಾವು ಗೆಳೆಯರಾದರೆ ನಾಚಿಕೆ ಪಡೆಬೇಡ,’’ ಎಂದು ಪ್ರತಿಕ್ರಿಯಿಸಿದ್ದಾರೆ.
ममता जी – आज आपने सारी हदें पार कर दीं. आप प्रदेश की मुख्यमंत्री हैं और मोदी जी देश के प्रधान मंत्री हैं. कल आपको उन्हीं से बात करनी है. इसलिए बशीर बद्र का एक शेर याद दिला रही हूँ :
दुश्मनी जम कर करो लेकिन ये गुंजाइश रहे,
जब कभी हम दोस्त हो जाएँ तो शर्मिंदा न हों.— Chowkidar Sushma Swaraj (@SushmaSwaraj) May 7, 2019
ಇದಕ್ಕೂ ಮುನ್ನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಮತಾ ಅವರ ಸಿಂಡಿಕೇಟ್ ಮೋರ್ಚಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿದೆ. ಮಮತಾ ಅವರು ಪ್ರಜಾಪ್ರಭುತ್ವದ ಬಗ್ಗೆ ಧ್ವನಿಎತ್ತುತ್ತಿದ್ದಾರೆ, ಆದರೆ ಅವರೇ ಪ್ರಜಾಪ್ರಭುತ್ವವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
ಫನಿ ಚಂಡಮಾರುತದ ಬಗ್ಗೆ ಚರ್ಚಿಸಲು ಮೋದಿ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸದ ಮಮತಾ, “ ಮೋದಿ ದೇಶದ ಪ್ರಧಾನ ಮಂತ್ರಿ ಎಂದು ನಾನು ಒಪ್ಪಿಕೊಳ್ಳುವುದಿಲ್ಲ, ಆದ್ದರಿಂದ ಸಭೆ ಅಗತ್ಯವಿಲ್ಲ. ಮುಂದಿನ ಪ್ರಧಾನಿಗಳ ಜತೆ ಈ ಬಗ್ಗೆ ನಾನು ಚರ್ಚಿಸುತ್ತೇನೆ. ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವು ನಮಗೆ ಅಗತ್ಯವಿಲ್ಲ,’’ ಎಂದು ನೇರವಾಗಿ ಪ್ರತಿಕ್ರಿಸಿದ್ದರು.