ಬೆಂಗಳೂರು: ಮಾಜಿ ಸಂಸದೆ, ಕಾಂಗ್ರೆಸ್ ಯುವ ನಾಯಕಿ, ಖ್ಯಾತ ಚಿತ್ರನಟಿ ರಮ್ಯಾ ಕುರಿತು ಫೇಸ್ಬುಕ್ ನಲ್ಲಿ ಲೈಂಗಿಕ ಅಶ್ಲೀಲತೆ ಸೂಚಿಸುವ ಪೋಸ್ಟ್ ಹಾಕಿರುವ ಆರೋಪದ ಮೇರೆಗೆ ವಿಶ್ವವಾಣಿ ಪತ್ರಿಕೆಯ ಮಾಜಿ ಪತ್ರಕರ್ತ ನವೀನ್ ಸಾಗರ್ ಮೇಲೆ ಸೈಬರ್ ಕ್ರೈಂ ವಿಭಾಗ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ವಕೀಲರಾದ ಶ್ರೀಮತಿ ಭವ್ಯ ಅನು ಎಚ್ ವಿ ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೇಸ್ಬುಕ್ ಪೋಸ್ಟ್ ನಲ್ಲಿ ಏನಿತ್ತು?
ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಕಾಲ ವರದಿಗಾರನಾಗಿದ್ದು ಇತ್ತೀಚೆಗೆ ಮೋದಿ ಭಜನೆಯಲ್ಲಿ ನಿರತನಾಗಿರುವ ಪತ್ರಕರ್ತ ನವೀನ್ ಸಾಗರ್ ತನ್ನ ಫೇಸ್ಬುಕ್ ವಾಲ್ ಮೇಲೆ ನಟಿ ರಮ್ಯಾ ಅವರ ಕುರಿತು ಅತ್ಯಂತ ಅಶ್ಲೀಲ ಎನ್ನಬಹುದಾದ ಪೋಸ್ಟ್ ಒಂದನ್ನು ಹಾಕಿದ್ದ ಎನ್ನಲಾಗಿದೆ. ಈ ಪೋಸ್ಟಿನೊಂದಿಗೆ ನಟಿ ರಮ್ಯಾ ಅವರ ಅಭಿನಯದ ದೃಶ್ಯವಿರುವ ಚಿತ್ರವೊಂದನ್ನು ಹಾಕಿ ಅದರೊಂದಿಗೆ “ಮೋದಿಯೇನೋ ಚಿಕ್ಕ ಹುಡುಗನ ಕಿವಿ ಎಳೆದ್ರು. ಆಯ್ತು ನಿನ್ ಮಾತ್ ಒಪ್ಕಳಣ. ಆದ್ರೆ ನೀನ್ ಹೀಗೆ ವಯ್ಸ್ ಹುಡ್ಗನ ಜನರೇಟರ್ ಗೆ ಒದ್ದಿದಿಯಲ್ಲ. ಇದು ಸರೀನಾ ರಮ್ಯಾ? ಒದ್ದಿರೋ ರೇಂಜಿಗೆ ಬೀಜ ಬಾಯಿಂದ ಬಾಯಿಗೆ ಟ್ರಾನ್ಸ್ ಫರ್ ಆಗೋದ್ ಬಾಕಿ. ನೀನ್ ಯಾವ ಹಿಟ್ಲರಂಗಿಂತ ಕಮ್ಮಿ ಹೇಳು” ಎಂದು ಬರೆದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮೇಲಿನ ಪೋಸ್ಟ್ ಪತ್ರಕರ್ತನೆನಿಸಿಕೊಂಡ ನವೀನ್ ಸಾಗರ್ ಹೇಳಿರುವ ಮಾತುಗಳು ಸಮಾಜದಲ್ಲಿ ಗೌರವ, ಘನತೆ ಇರುವ ವ್ಯಕ್ತಿಗಳಂತೂ ಸಾಮಾಜಿಕ ಮಾಧ್ಯಮದ ಮೂಲಕ ಹೇಳುವ ಮಾತುಗಳಲ್ಲ. ಆದರೂ ಪತ್ರಕರ್ತ ಎಂದು ಹೇಳಿಕೊಂಡ ವ್ಯಕ್ತಿ ಒಬ್ಬ ಮಹಿಳೆಯನ್ನು ಇಷ್ಟು ತುಚ್ಛವಾಗಿ ನೋಡುವ ಮನಸ್ಥಿತಿ ಹೊಂದಿದ್ದಾನೆಂದರೆ ಅತ್ಯಂತ ವಿಷಾದಕರ ಸಂಗತಿ.

“ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್ ಪ್ರಕಟಿಸಿ ಅಶ್ಲೀಲ ಪದಗಳಿಂದ ನಿಂದನೆ ಮಾಡಲು ನವೀನ್ ಸಾಗರ್ ಪ್ರಚೋದನೆ ನೀಡಿರುತ್ತಾರೆ. ಮಹಿಳೆಯ ಚಿತ್ರವನ್ನು ವಿಕೃತವಾಗಿ ತೇಜೋವಧೆ ಮಾಡಲು ಸಾಮಾಜಿಕ ತಾಣದಲ್ಲಿ ಬಳಸಿಕೊಂಡು ಘನತೆಗೆ ಧಕ್ಕೆ ತಂದಿರುವ ನವೀನ್ ಸಾಗರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಮನವಿ ಮಾಡಿದ್ದರು.
ಈ ದೂರನ್ನು ಸೈಬರ್ ಕ್ರೈಂ ಪೊಲೀಸರು ಗಂಭೀರವಾಗಿಯೇ ಪರಿಗಣಿಸಿದ್ದಾರೆ.
ನಗರದ ಸೈಬರ್ ಕ್ರೈಂ ವಿಭಾಗದ ಪೊಲೀಸರು ನವೀನ್ ಸಾಗರ್ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದ ಅಶ್ಲೀಲ ವಿಷಯ ಪ್ರಕಟಣೆ ಅಥವಾ ಪ್ರಸಾರ – ಆರೋಪ ಸಾಬೀತಾದರೆ 3 ವರ್ಷ ಜೈಲು 5 ಲಕ್ಷ ಜುಲ್ಮಾನೆ), ಐಪಿಸಿ ಸೆಕ್ಷನ್ 354- (ಮಹಿಳೆಯ ಗೌರವಕ್ಕೆ ಕುಂದು ತರುವಂತೆ ದೌರ್ಜನ್ಯ ಕೃತ್ಯ ನಡೆಸುವುದು- ಆರೋಪ ಸಾಬೀತಾದರೆ ಎರಡು ವರ್ಷ ಜೈಲು ಮತ್ತು ದಂಡ ಅಥವಾ ಎರಡೂ ) ಹಾಗೂ ಸೆಕ್ಷನ್ 354 D (ಹಿಂಬಾಲಿಸುವಿಕೆ; ಮಹಿಳೆಯರನ್ನು ಅಂತರ್ಜಾಲ, ಇಮೇಲ್ ಮತ್ತಿನ್ನಿತರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪದೇ ಪದೇ ಹಿಂಬಾಲಿಸುವಿಕೆ) ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.

ನವೀನ್ ಸಾಗರ್ ಮಹಿಳೆಯರ ಕುರಿತು ಅಶ್ಲೀಲ, ಸಂದೇಶ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವುದು ಇದು ಮೊದಲೇನಲ್ಲ, ಈ ಹಿಂದೆಯೂ ಅನೇಕ ಸಲ ಇಂತಹುದೇ ಕೀಳು ಮಟ್ಟದ ವಿಕೃತ ಬರೆಹಗಳನ್ನು ಬರೆದಿದ್ದಾನಲ್ಲದೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಕುರಿತು ತೀರಾ ಕೀಳು ಮಟ್ಟದಲ್ಲಿ, ಅಶ್ಲೀಲವಾಗಿ ಬರೆದಿದ್ದ ಎಂದು ಸಾಮಾಜಿಕ ಮಾಧ್ಯಮದಲ್ಲಿ ಗಮನಿಸಿದವರು ಹೇಳುವ ಮಾತು.
2 Comments
ಟ್ರುಥ್ ಇಂಡಿಯಾ ನಿಜಕ್ಕೂ ಒಳ್ಳೆಯ ಪ್ರಯೋಗ. ಆದರೆ ದಯವಿಟ್ಟು ಭಾಷೆಯ ಗುಣಮಟ್ಟ, ನಿರೂಪಣೆ ಹಾಗೂ ಅಲ್ಪ ವಿರಾಮ ಪೂರ್ಣ ವಿರಾಮದ ಕುರಿತು ಸ್ವಲ್ಪ ಗಮನವಹಿಸಿ. ಅದ್ಭುತವಾಗಿ ನಿರೂಪಣೆ ಮಾಡಬಹುದಾದ ಈ ಸುದ್ದಿಯನ್ನು ನಿಜಕ್ಕೂ ಅಷ್ಟೇ ಪೇಲವವಾಗಿ ಬರೆದಿದ್ದೀರಿ. ದಯವಿಟ್ಟು ಭಾಷೆಯ ಗುಣಮಟ್ಟದ ಕಡೆಗೆ ಗಮನ ವಿರಲಿ. ಕೊನೆಯ ಸಾಲಿನಲ್ಲಿ ಅಭಿಪ್ರಾಯದ ಪಕ್ಕ ಪೂರ್ಣ ವಿರಾಮ ಇಟ್ಟಿದ್ದೀರಿ ಅದು ಏಕೆ ಅಂತ ಅರ್ಥವಾಗುತ್ತಿಲ್ಲ.
thank u sir