ಭೂಪಾಲ್: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಹೋಗಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಸಾರ್ವಜನಿಕವಾಗಿ ತೀವ್ರ ಮುಖಭಂಗ ಅನುಭವಿಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಶೋಕ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 200-250 ಜನರಿದ್ದ ಗುಂಪನ್ನು ಉದ್ದೇಶಿಸಿ ಸಚಿವೆ ಸ್ಮೃತಿ ಇರಾನಿ ಪ್ರಚಾರ ಭಾಷಣ ಮಾಡುತ್ತಿದ್ದರು. ಭಾಷಣದ ನಡುವೆ ಪ್ರತಿಪಕ್ಷ ಕಾಂಗ್ರೆಸನ್ನು ಟೀಕಿಸುತ್ತಾ, “ಅಸೆಂಬ್ಲಿ ಚುನಾವಣೆಗೆ ಮೊದಲು ರಾಹುಲ್ ಗಾಂಧಿ ಕೊಟ್ಟಿದ್ದ ಮಾತಿನಂತೆ ನಿಮ್ಮ ಸಾಲಮನ್ನಾ ಆಗಿದೆಯಾ? ” ಎಂದು ಕೇಳಿದ್ದರು.
ಪ್ರಾಯಶಃ ಈ ಪ್ರಶ್ನೆಗೆ ಜನರೆಲ್ಲಾ “ ಇಲ್ಲಾ, ಇಲ್ಲಾ” ಎಂದು ಕೂಗುತ್ತಾರೆ ಎಂದು ಇರಾನಿ ಅಂದುಕೊಂಡಿದ್ದರೋ ಏನೋ? ಆದರೆ ಸ್ಮೃತಿ ಇರಾನಿಯ ಈ ಪ್ರಶ್ನೆಗೆ ಎದುರಿಗಿದ್ದ ಮತದಾರರು “ಹೌದು, ಹೌದು… ಆಗಿದೆ ಆಗಿದೆ ಆಗಿದೆ …. “(ಹೋಗಯಾ ಹೋಗಯಾ ಹೋಗಯಾ…) ಎಂದು ಜೋರಾಗಿ ಕೂಗಿ ಹೇಳಿದ್ದಾರೆ. ಜನರ ಈ ಉತ್ತರ ಸ್ಮೃತಿ ಇರಾನಿಗೆ ಸಾರ್ವಜನಿಕವಾಗಿ ಇರುಸು ಮುರುಸು ಮಾಡಿದ ಪ್ರಸಂಗ ಇದಾಗಿದೆ.
ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಈ ಘಟನೆಯ ವಿಡಿಯೋ ಹಂಚಿಕೊಂಡಿದೆ. ಇರಾನಿಯವರ ಭಾಷಣದ ನಡುವೆ ಜನರು ಜೋರಾಗಿ “ಹೋಗಯಾ, ಹೋಗಯಾ” ಎಂದು ಕೂಗಿಕೊಂಡಾಗ ಇರಾನಿ ಭಾಷಣವನ್ನು ಕೆಲ ಕಾಲ ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
“ಈಗ ಸಾಮಾನ್ಯ ಜನರೂ ಬಿಜೆಪಿಯ ಸುಳ್ಳು ಹೇಳಿಕೆಗಳನ್ನು ಕಂಡು ಟೀಕಿಸತೊಡಗಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
स्मृति ईरानी की हुई किरकिरी :
स्मृति ईरानी ने मप्र के अशोकनगर में मंच से पूछा क्या किसानों का कर्जा माफ हुआ है ? तो सभा के बीच में किसानों ने चिल्ला कर बताया “हां हुआ है, हां हुआ है, हाँ हो गया है”।
—अब जनता भी इन झूठों को सीधे जवाब देने लगी है।
“अब तो झूठ फैलाने से बाज़ आओ” pic.twitter.com/N9g64K7xAC
— MP Congress (@INCMP) May 8, 2019