ಏಪ್ರಿಲ್ 26ರಂದು ಭಾರತದ ವಾಯುಪಡೆಗಳು ಪಾಕಿಸ್ತಾನದಲ್ಲಿ ನಡೆಸಿದ ಬಾಲಾಕೋಟ್ ವಾಯುದಾಳಿಯ ಸಿದ್ಧತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯ ಬಾಯಿಂದ ಹೊರಹಾಕಿರುವ ಮಾತುಗಳು ಇಡೀ ದೇಶದ ಜವಾಬ್ದಾರಿಯುತ ನಾಗರಿಕರು ಗಂಬೀರವಾಗಿ ಯೋಚಿಸುವಂತೆ ಮಾಡಿವೆ; ಮಾತ್ರವಲ್ಲ ದೇಶದ ವಾಯುಪಡೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿವೆಯಲ್ಲದೆ ಭಾರತದ ಸೈನ್ಯ ತನ್ನ ಮುಖ್ಯ ಕಾರ್ಯಾಚರಣೆ ನಡೆಸಲು ತನಗಿರುವ ವೈಜ್ಞಾನಿಕ ತಿಳುವಳಿಕೆಯನ್ನು, ಯುದ್ಧ ಕೌಶಲ್ಯವನ್ನು ಆಧರಿಸದೇ ಕೇವಲ ಮೋದಿಯ ಅವೈಜ್ಞಾನಿಕ ಹಾಗೂ ಕಡು ಮೂರ್ಖತನದ ಬೇಕಾಬಿಟ್ಟಿ ಹೇಳಿಕೆಯನ್ನು ಆಧರಿಸಿದೆ ಎನ್ನುವ ಸಂದೇಶ ನೀಡಿದೆ. ತಮ್ಮ ಮೂರ್ಖ ಹೇಳಿಕೆಯ ಮೂಲಕ ಮೋದಿ ಜಗತ್ತಿನ ಎದುರು ಭಾರತದ ವಾಯುಪಡೆಯ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.
ಸಂದರ್ಶನದಲ್ಲಿ ಮೋದಿ ಹೇಳಿದ್ದೇನು?
ಮೇ 11ರ ಶನಿವಾರ ರಾತ್ರಿ 8.30ಕ್ಕೆ ‘ನ್ಯೂಸ್ ನೇಶನ್’ ಸುದ್ದಿ ವಾಹಿನಿಯು ನರೇಂದ್ರ ಮೋದಿಯವರ ಸಂದರ್ಶನವನ್ನು ಪ್ರಸಾರ ಮಾಡಿತು. ಅದರಲ್ಲಿ ಬಾಲಾಕೋಟ್ ವಾಯುದಾಳಿಯ ಹಿಂದಿನ ರಾತ್ರಿಯ ಸಿದ್ಧತೆ ಕುರಿತು ನರೇಂದ್ರ ಮೋದಿ ಮಾತಾಡುತ್ತಾ ಹೀಗೆ ಹೇಳಿದರು.
“ರಾತ್ರಿ ಒಂಭತ್ತು ಒಂಭತ್ತೂವರೆಗೆ, ನಾನು ಅವಲೋಕಿಸಿದೆ (ವಾಯು ದಾಳಿಯ ಸಿದ್ಧತೆಗಳನ್ನು). 12 ಗಂಟೆ ರಾತ್ರಿ ಮತ್ತೊಮ್ಮೆ ಅವಲೋಕಿಸಿದೆ. ಅಷ್ಟೊತ್ತಿಗೆ ಹವಾಮಾನ ದಿಡೀರ್ ಎಂದು ಬದಲಾಗಿದ್ದು ನಮಗೆ ಸಮಸ್ಯೆಯಾಗಿತ್ತು. ಸಿಕ್ಕಾಪಟ್ಟೆ ಮಳೆಯಾಗಿತ್ತು, ನಿಮಗೆ ನೆನಪಿರಬಹುದು”
“(ನಗುತ್ತಾ) ನನ್ನನ್ನು ಟೀಕಿಸುವ ದೊಡ್ಡ ಪಂಡಿತರು ಈ ಒಂದು ಸಂಗತಿಯನ್ನು ಗಮನಿಸಿಲ್ಲ ಎಂದರೆ ನನಗೆ ಅಚ್ಚರಿ. 12 ಗಂಟೆ ಸುಮಾರಿಗೆ ಒಂದು ಕ್ಷಣ, ಈ ಪ್ರತಿಕೂಲ ಹವೆಯಲ್ಲಿ ನಾವು ಏನು ಮಾಡುವುದು ಎಂದು ಯೋಚನೆಯಾಯಿತು. ಆಕಾಶದಲ್ಲಿ ಮೋಡಗಳಿವೆ, ‘ನಮಗೆ ಅದನ್ನು (ವಾಯುದಾಳಿ) ನಡೆಸಲು ಆಗುತ್ತದೆಯೋ ಇಲ್ಲವೋ?’ ಹೀಗಾಗಿ ತಜ್ಞರ ಸಾಮಾನ್ಯ ಸಹಜ ಅಭಿಪ್ರಾಯ ಏನಾಗಿತ್ತು ಎಂದರೆ “ನಾವು ದಿನಾಂಕ ಬದಲಿಸಿದರೆ ಹೇಗೆ?” ಎಂದು.
“ನನ್ನ ಮನಸ್ಸಿನಲ್ಲಿ ಎರಡು ವಿಚಾರಗಳಿದ್ದವು: ಒಂದು ಗೌಪ್ಯತೆ… ಇದನ್ನು ಪಾಲಿಸದಿದ್ದರೆ ಏನೂ ಮಾಡಲಾಗಲ್ಲ. ಮತ್ತೊಂದು ಏನೆಂದರೆ…. ನಾನಂತೂ ಈ ವಿಜ್ಞಾನ ತಿಳಿದ ವ್ಯಕ್ತಿ ಅಲ್ಲ. ಆದರೆ ಅಲ್ಲಿ ಮೋಡಗಳಿವೆ, ಮಳೆ ಬರ್ತಾ ಇದೆ ಎಂದರೆ ರಾಡಾರ್ ನಿಂದ ನಾವು ಬಚಾವಾಗಬಹುದು. ನನಗಿರುವುದು ಕಚ್ಚಾ ತಿಳುವಳಿಕೆ. ಮೋಡಗಳು ನಮಗೆ ಲಾಭವನ್ನೂ ತರಬಹುದು ಎಂದು ಯೋಚಿಸಿದೆ”.
“ಎಲ್ಲರೂ ಏನು ಮಾಡುವುದು ಎಂಬ ಗೊಂದಲದಲ್ಲಿದ್ದರು. ಅಂತಿಮವಾಗಿ ನಾನು ಹೇಳಿದೆ, “ಇರಲಿ, ಮೋಡಗಳಿವೆ ಮುನ್ನಡೆಯಿರಿ… ಚಲ್ ಪಡೇ.”
ಇವು ಮೋದಿ ಸಂದರ್ಶನದ ಕೆಲ ಮಾತುಗಳು. ವಿಪರ್ಯಾಸವೇನೆಂದರೆ ಈ ಸಂದರ್ಶನ 1998ರಲ್ಲಿ ಎರಡನೇ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಸ್ಮರಣಾರ್ಥವಾಗಿ ಆಚರಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ದಿನವೇ ಪ್ರಸಾರವಾಗಿತ್ತು.
ಮೋದಿಯವರ ಈ ಮಾತುಗಳು ನೆನ್ನೆ ರಾತ್ರಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ, ಟ್ರೋಲ್ ಗೆ ಒಳಗಾಗುತ್ತಿವೆ. ಮುಖ್ಯವಾಗಿ, ಒಂದು ರಾಡಾರ್ ಹೇಗೆ ಕೆಲಸ ಮಾಡುತ್ತದೆ ಎಂಬ ಕನಿಷ್ಟ ತಿಳುವಳಿಕೆ ಇಲ್ಲದೇ ದೇಶದ ಸೇನಾ ತಜ್ಞರ ಅಭಿಪ್ರಾಯವನ್ನು ಕಡೆಗಣಿಸಿ ತನ್ನ ಮೂರ್ಖ ತಿಳುವಳಿಕೆಯನ್ನೇ ಒಪ್ಪಿಸಿ ಬಾಲಾಕೋಟ್ ದಾಳಿ ನಡೆಸಿದ್ದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ.
ಮೋದಿಯ ಈ ಮಾತುಗಳ ವಿಡಿಯೋವನ್ನು ಬಿಜೆಪಿಯು ತನ್ನ ಅಧಿಕೃತ ಟ್ವಿಟರ್ ನಿಂದ ಹಂಚಿಕೊಂಡಿದ್ದು ಸ್ವಲ್ಪ ಹೊತ್ತಿನಲ್ಲಿಯೇ ತೆಗೆದು ಹಾಕಿದೆ.
ಮೋದಿಯ ಈ ಮಾತುಗಳು “ನಿಜಕ್ಕೂ ನಾಚಿಕೆಗೇಡು” ಎಂದು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಪ್ರತಿಕ್ರಿಯಿಸಿದ್ದಾರೆ. “ಮೋದಿ ಮಾತುಗಳು ನಮ್ಮ ವಾಯುಪಡೆಗಳು ದಡ್ಡತನದಿಂದ ಕೆಲಸ ಮಾಡುತ್ತವೆ, ಅವುಗಳಿಗೆ ವೃತ್ತಿಪರತೆ ಎಂಬುದನ್ನು ಸೂಚಿಸುವುದರಿಂದ ಅವು ವಾಯುಪಡೆಗಳನ್ನು ಅಪಮಾನಿಸಿವೆ. ಮೋದಿಯ ಅಂತ ಹೇಳಿಕೆ ಅತ್ಯಂತ ನಷ್ಟವುಂಟು ಮಾಡುತ್ತದೆ. ಇಂತ ಒಬ್ಬ ವ್ಯಕ್ತಿ ದೇಶದ ಪ್ರಧಾನಿ ಆಗಿರಲೇ ಕೂಡದು” ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.
ಈ ಹೇಳಿಕೆಯ ಕುರಿತು ಸಿಪಿಎಂ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದೆ.
ಮೋದಿ ಹೇಳಿಕೆ ಎಂತಹ ಗಂಡಾಂತರಕಾರಿ ಎಂದರೆ….
ನರೇಂದ್ರ ಮೋದಿ ತಮ್ಮ ಸಂದರ್ಶನದಲ್ಲಿ ಮಾತಾಡಿರುವ ವಿಷಯಗಳು ದೇಶದ ಭದ್ರತೆ ಎಷ್ಟು ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತವೆ. ಯಾಕೆಂದರೆ ಒಂದು ಶತ್ರು ದೇಶದ ಅತ್ಯಾಧುನಿಕ ಸೇನೆಯನ್ನು ಎದುರಿಸುವಾಗ ನಾವು ಅಷ್ಟೇ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮೇಲುಮೇಲಿನ ಕಚ್ಚಾ ತಿಳುವಳಿಕೆಯಿಂದ ಸೇನೆಯ ಕಾರ್ಯಾಚರಣೆಗಳನ್ನು ನಿರ್ಧರಿಸಲು ಬರುವುದಿಲ್ಲ. ಯಾವುದೇ ದೇಶದ ಸೇನೆ ಹಾಗೆ ಮಾಡುವುದಿಲ್ಲ. ಆದರೆ ಮೋದಿ ಹೇಳಿರುವ ಮಾತುಗಳು ನಿಜವಾಗಿದ್ದರೆ, ನಮ್ಮ ಸೇನಾಧಿಕಾರಿಗಳು ಸೇನೆಗೆ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಮೋದಿಯ ಕಚ್ಚಾ ಮಾತುಗಳನ್ನು ಪಾಲಿಸಿವೆ ಎಂದೇ ಅರ್ಥ.
ಮೋದಿಯ ಮಾತಿನಲ್ಲಿ, ‘ಮೋಡಗಳಿವೆ, ಹೀಗಾಗಿ ಪಾಕಿಸ್ತಾನದ ರಾಡಾರ್ ನಿಂದ ತಪ್ಪಿಸಿಕೊಂಡು ನಮ್ಮ ಕಾರ್ಯಾಚರಣೆ ನಡೆಸಬಹುದು’ ಎಂಬ ಸೂಚನೆ ಇದೆ. ಆದರೆ ಇದು ಅತ್ಯಂತ ಅವೈಜ್ಞಾನಿಕ ಮಾತ್ರವಲ್ಲ ಗಂಡಾಂತರಕಾರಿ ತಿಳುವಳಿಕೆ ಕೂಡಾ. ಏಕೆಂದರೆ ಪಾಕಿಸ್ತಾನದ ರಾಡಾರ್ ಗಳು ನಮ್ಮ ಯುದ್ಧವಿಮಾನಗಳನ್ನು ಪತ್ತೆಹಚ್ಚಲು ವಾತಾವರಣದಲ್ಲಿ ಮೋಡಗಳಿರುವುದು ಒಂದು ಸಮಸ್ಯೆಯೇ ಅಲ್ಲ. ಇದು ಭಾರತದ ಸೇನಾ ರಾಡಾರ್ ಗಳಿಗೂ ಅನ್ವಯವಾಗುತ್ತದೆ. ಒಂದುವೇಳೆ ಈ ರೀತಿಯ ಲೆಕ್ಕಾಚಾರ ಹಾಕಿ ಪಾಕಿಸ್ತಾನದ ಯುದ್ಧವಿಮಾನಗಳು ಮೋಡ ಕವಿದಿದ್ದಾಗ ಭಾರತಕ್ಕೆ ನುಗ್ಗಿದರೆ ಕ್ಷಣಾರ್ಧದಲ್ಲಿ ಭಾರತದ ರಾಡಾರ್ ಗಳು ಪತ್ತೆಹಚ್ಚಿ ಸೂಚನೆ ನೀಡುತ್ತವೆ, ಕೂಡಲೇ ನಮ್ಮ ಕ್ಷಪಣಿಗಳು ಅವುಗಳನ್ನು ಹೊಡೆದು ಉರುಳಿಸುತ್ತವೆ. ಹೀಗಾಗಿ ಮೋಡ ಕವಿದಿದೆ, ರಾಡಾರ್ ಗುರುತಿಸುವುದಿಲ್ಲ, ದಾಳಿ ನಡೆಸಿ ಎನ್ನುವುದು ತೀರಾ ಅವಿವೇಕಿ ನಿರ್ಧಾರವಾಗುತ್ತದೆ.
ರಾಡಾರ್ ಹೇಗೆ ಕೆಲಸ ಮಾಡುತ್ತದೆ ಎನ್ನುವ ಕುರಿತು ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾದಲ್ಲಿನ ಈ ವಿವರಣೆ ಗಮನಿಸಿ:
“ರಾಡಾರ್, ಗಮನಾರ್ಹ ದೂರದಲ್ಲಿರುವ ವಿವಿಧ ಬಗೆಯ ವಸ್ತುಗಳನ್ನು ಪತ್ತೆ ಹಚ್ಚಿ, ಅವು ಇರುವ ನಿಖರ ಸ್ಥಳ ಗುರುತಿಸಿ, ಅವು ಏನು ಎಂದು ಪತ್ತೆ ಹಚ್ಚಲು ಬಳಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸೆನ್ಸರ್ ಆಗಿದ್ದು ಸಾಮಾನ್ಯವಾಗಿ ಟಾರ್ಗೆಟ್ ಗಳು ಎಂದು ಹೇಳಲಾಗುವ ವಸ್ತುಗಳ ಕಡೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಕಿರಣಗಳನ್ನು ಹರಿಸಿ ಅವುಗಳಿಂದ ಬರುವ ಪ್ರತಿಧ್ವನಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ…… ಆಪ್ಟಿಕಲ್ ಮತ್ತು ಅತಿನೇರಳೆ ಸೆನ್ಸಿಂಗ್ ಉಪಕರಣಗಳಿಗೂ ಈ ರಾಡಾರ್ ಗಳಿಗೂ ಇರುವ ಮುಖ್ಯ ವ್ಯತ್ಯಾಸವೇನೆಂದರೆ ರಾಡಾರ್ ಗಳು ಅತ್ಯಂತ ದೂರದಲ್ಲಿರುವ ವಸ್ತುಗಳನ್ನು ಎಂತಹ ಪ್ರತಿಕೂಲ ಹವಾಮಾನದ ಸ್ಥಿತಿಯಲ್ಲೂ ಗುರುತಿಸಿ ಅವುಗಳ ರೇಂಜ್, ದೂರಗಳ ಬಗ್ಗೆ ನಿಖರವಾದ ಮಾಹಿತಿ ನೀಡುತ್ತವೆ”
ಕೆನಡಾ ದೇಶದ ಸರ್ಕಾರಿ ಜಾಲತಾಣವೊಂದು ರಾಡಾರ್ ಕಾರ್ಯವಿಧಾನದ ಕುರಿತು ನೀಡುವ ಮಾಹಿತಿ ಹೀಗಿದೆ: “ರಾಡಾರ್ ಸಾಧನದ ಬಹಳ ಮುಖ್ಯ ಅನುಕೂಲತೆ ಏನೆಂದರೆ ಅದು ಹೊರಸೂಸುವ ವಿಕಿರಣಗಳು ಮೋಡಗಳನ್ನು ತೂರಿಕೊಂಡು ಹೋಗುವುದು ಮತ್ತು ಬಹುತೇಕ ಹವಾಮಾನ ಸ್ಥಿತಿಯಲ್ಲಿ ಹೋಗುವುದು”.
ಹೀಗಾಗಿ ಮೋದಿ ಹೇಳಿದಂತೆ ಮೋಡಗಳು ಪಾಕಿಸ್ತಾನದ ರಾಡಾರ್ ಗಳಿಂದ ನಮ್ಮ ಯುದ್ಧವಿಮಾನಗಳನ್ನು ಬಚಾವು ಮಾಡುವ ಪರಿಸ್ಥಿತಿಯೇ ಇರುವುದಿಲ್ಲ. ಮೋಡ ಮುಸುಕಿದ್ದರೂ ಸಹ ಹಾರುವ ವಸ್ತುಗಳನ್ನು ರಾಡಾರ್ ಗುರುತಿಸಬಲ್ಲದಾಗಿರುತ್ತದೆ.
ಇದೇ ಸಂದರ್ಶನದಲ್ಲಿ ಮೋದಿ, “ನಾನೇನೂ ಈ ವಿಜ್ಞಾನ ತಿಳಿದ ವ್ಯಕ್ತಿ ಅಲ್ಲ” ಎಂದಿದ್ದಾರೆ. ಹಾಗಾದರೆ ಬಾಲಾಕೋಟ್ ವಾಯುದಾಳಿಯಲ್ಲಿ ರಾಡಾರ್ ಮತ್ತಿತರ ತಂತ್ರಜ್ಞಾನದ ಕುರಿತು ತಿಳಿದ ತಜ್ಞರ ಮಾತು ಕೇಳದೇ ಮೋದಿ ತನ್ನ ಮೂರ್ಖತನವನ್ನೇ ವಾಯುಪಡೆಯ ಮೇಲೆ ಹೇರಿದ್ದಾರೆ ಎಂಬುದು ಅವರ ಮಾತಿನಿಂದಲೇ ಸಾಬೀತಾಗುತ್ತದೆ.
ಕಾಂಗ್ರೆಸ್ ವಕ್ತಾರ ಸಲ್ಮಾನ್ ಸೋಝ್ ಅವರು ತಮ್ಮ ಟ್ವೀಟ್ ಪ್ರತಿಕ್ರಿಯೆಯಲ್ಲಿ, “ರಾಡಾರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರಧಾನ ಮಂತ್ರಿಗೆ ಯಾರೂ ತಿಳಿಹೇಳಲಿಲ್ಲ ಎಂದು ತೋರುತ್ತದೆ. ಇದು ನಿಜವಾಗಿದ್ದರೆ, ಇದು ಗಂಭೀರವಾಗಿ ರಾಷ್ಟ್ರೀಯ ಭದ್ರತೆಯ ವಿಷಯವಾಗುತ್ತದೆ. ನಗುವ ವಿಷಯವಂತೂ ಅಲ್ಲ” ಎಂದಿದ್ದಾರೆ.
I think the media must seek answers to serious questions about the PM's clouds/radar comments. This is no laughing matter. This is as serious as it gets! https://t.co/iGdOx8zl4E
— Salman Anees Soz (@SalmanSoz) May 12, 2019
ಮೋದಿಯ “ಮೋಡದ ಮುಸುಕಿನ” ಮಾತಿನ ಕುರಿತ ಪ್ರತಿಕ್ರಿಯೆಗಳು ಟ್ವಿಟರ್ ನಲ್ಲಿ #EntireCloudCover, #CloudCover, #EntireCloudScience ಹ್ಯಾಶ್ ಟ್ಯಾಗ್ ಗಳಲ್ಲಿ ಟ್ರೆಂಡ್ ಆಗಿವೆ.
ಮೋದಿಯ ಮೋಡ ಮುಸುಕಿನ ಹೇಳಿಕೆಯ ಸುತ್ತ ಬಂದ ಕೆಲ ಟ್ವೀಟ್ ಪ್ರತಿಕ್ರಿಯೆಗಳನ್ನು ನೋಡಿ

Supreme leader's logic
2016 : Demonetization would help in curbing black money and introduced 2000 rupees note.
2019 : Radars can't detect fighter jets if it's cloudy.
This man was our PM for last 5 years and had access to nuclear weapons🤦🏻♂️#CloudModi #EntireCloudCover
— Srujana Deva (@SrujanaDeva) May 12, 2019
3 Conclusions I draw from this video –
👉 Modi will happily LIE about India's national security if it benefits him personally
👉 Modi gives more importance to his stupid opinions than expert opinion
👉 Modi considers most Indians as idiots, who will fall for his Hyper Fekugiri pic.twitter.com/CBmXzQUgK1
— Dhruv Rathee (@dhruv_rathee) May 12, 2019
Now Jaitley will write a blog explaining the atmospheric decomposition of air particles that accentuates chemical metabolism resulting in a diabolical cloudburst that can conceal large aircraft’s from being spotted by Tata Sky radars across the LoC. #EntireCloudCover
— Sanjay Jha (@JhaSanjay) May 12, 2019
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ