ಇಂಧೋರ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರಿದ್ದ ವಾಹನ ರಸ್ತೆಯಲ್ಲಿ ಚಲಿಸುತ್ತಿದ್ದಂತೆಯೇ ಒಂದಷ್ಟು ಹುಡುಗರನ್ನು ರಸ್ತೆಯಲ್ಲಿ “ಮೋದಿ ಘೋಷಣೆ” ಕೂಗಲು ಬಿಜೆಪಿ ನಿಲ್ಲಿಸಿತ್ತು. ಇಂತಹ ಕೆಲಸವನ್ನು ಬಿಜೆಪಿ ದೇಶದ ನಾನಾ ಕಡೆಗಳಲ್ಲಿ ನಡೆಸಿದೆ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರಿಗೆ ಅವಮಾನಿಸಲು ಮಡಿಕೇರಿಯಲ್ಲಿ ಹೀಗೆ ಮಾಡಿದ್ದ ವಿಡಿಯೋ ಒಂದನ್ನು ಹರಿಬಿಡಲಾಗಿತ್ತು. ಇತ್ತೀಚೆಗೆ ಬೆಂಗಳೂರಿನ ಐಟಿ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೂ ಹೀಗೇ “ಮೋದಿ” ಘೋಷಣೆಗಳ ಮೂಲಕ ಸ್ವಾಗತ ಕೋರಿ ಅವಮಾನಿಸುವ ಕೆಲಸ ಮಾಡಿದ್ದರು. ಅದರಂತೆ ಪ್ರಿಯಾಂಕಾ ಗಾಂಧಿಗೂ ಹೀಗೇ ಅಪಮಾನಿಸಿ ಅದರ ವಿಡಿಯೋ ವೈರಲ್ ಮಾಡುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ನಿಂತಿದ್ದರು.
ಆದರೆ ಇಂದು ನಡೆದಿದ್ದೇ ಬೇರೆ.
ರಸ್ತೆ ಪಕ್ಕದಲ್ಲಿ “ಮೋದಿ..ಮೋದಿ..ಮೋದಿ” ಎಂಬ ಘೋಷಣೆ ಕೇಳುತ್ತಿದ್ದಂತೆ ತಕ್ಷಣ ಪ್ರಿಯಾಂಕಾ ಗಾಂಧಿ ತಾವು ಇದ್ದ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಕಾರು ನಿಂತ ಕೂಡಲೇ ಕಾರಿನಿಂದಿಳಿದ ಕೆಂಪು ಸೀರೆಯುಟ್ಟಿದ್ದ ಪ್ರಿಯಾಂಕಾ ಗಾಂಧಿ ಸೀದಾ ಘೋಷಣೆ ಕೂಗುತ್ತಿದ್ದ ಹುಡುಗರ ಬಳಿ ಬಂದು ಅವರಿಗೆಲ್ಲಾ “ಆಲ್ ದಿ ಬೆಸ್ಟ್” ಹೇಳಿ ಕೈ ಕುಲುಕಿದ್ದಾರೆ.
“ನಿಮ್ಮ ಜಾಗದಲ್ಲಿ ನೀವು ಸರಿ, ನನ್ನ ಜಾಗದಲ್ಲಿ ನಾನು ಸರಿ” ಎಂದು ಮುಗುಳ್ನಗುತ್ತಾ ಬಿಜೆಪಿ ಬೆಂಬಲಿಗರಿಗೆ ಹೇಳಿದ ಪ್ರಿಯಾಂಕಾ ಗಾಂಧಿಗೆ ಮೋದಿ ಘೋಷಣೆ ಕೂಗಿದ್ದ ಹುಡುಗರೂ ಖುಷಿಗೊಂಡು “ಆಲ್ ದ ಬೆಸ್ಟ್” ಹೇಳಿದ್ದಾರೆ.
ನಂತರ ತಮ್ಮ ಕಾರು ಏರಿ ಮುಂದೆ ಚಲಿಸಿದ್ದಾರೆ.
ವಿಡಿಯೋ ನೋಡಿ
ಇದಕ್ಕೂ ಮುನ್ನ ಪ್ರಿಯಾಂಕಾ ಇಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಛತ್ತೀಸ್ ಗಡದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರೊಂದಿಗೆ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಈ ನಡುವೆ ಬಿದಿರಿನಿಂದ ನಿರ್ಮಿಸಿದ್ದ ಬೇಲಿಯೊಂದನ್ನು ಎಗರಿಕೊಂಡು ತಮ್ಮನ್ನು ಅಭಿನಂದಿಸುತ್ತಿದ್ದ ಜನರೊಂದಿಗೆ ಬೆರೆತಿದ್ದರೆನ್ನಲಾಗಿದೆ.
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ
Jai ho congress
Jai priyanka gandhi jai ho