ಫೇಸ್ಬುಕ್ ಕಂಪನಿಯ ಒಡೆತನದಲ್ಲಿರುವ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಅಪ್ಲಿಕೇಶನ್ (App) ಆಗಿರುವ ವಾಟ್ಸಾಪ್ ಮೂಲಕ ಇಸ್ರೇಲಿ ಕಂಪನಿಯೊಂದು ಕದ್ದಾಲಿಕೆಗೆ ವೈರಸ್ /ಬಗ್ ಗಳನ್ನು ಕಳಿಸುತ್ತಿದ್ದು ಕೂಡಲೇ ತಮ್ಮ ಬಳಕೆದಾರರು ವಾಟ್ಸಾಪ್ ನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ.
ಈ ದಾಳಿಯನ್ನು “ಆಯ್ದ ಸಂಖ್ಯೆಯ” ಬಳಕೆದಾರರನ್ನು ಗುರಿಪಡಿಸಿ ನಡೆಸಲಾಗುತ್ತಿದೆ. “ಬಹಳ ಮುಂದುವರೆದ ಸೈಬರ್ ಕ್ರಿಯಾಶೀಲ” ಹ್ಯಾಕಿಂಗ್ ಸಂಸ್ಥೆ ಈ ದಾಳಿ ನಡೆಸುತ್ತಿದೆ ಎಂದು ಫೇಸ್ಬುಕ್ ಹೇಳಿದೆ.
ಮೇ ತಿಂಗಳ ಆರಂಭದಲ್ಲಿ ಈ ವೈರಸ್ ದಾಳಿಯ ಕುರಿತು ಸೂಚನೆ ದೊರಕಿದೊಡನೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು ವಾಟ್ಸಾಪ್ ನಡೆಸಿದೆ. ಇದರ ಅಂಗವಾಗಿ ವಾಟ್ಸಾಪ್ ತನ್ನ ಎಲ್ಲಾ 150 ಕೋಟಿ ಬಳಕೆದಾರರಿಗೂ ಸಹ ತಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್ ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳಲು ತಿಳಿಸಿದೆ.
ನಿಮ್ಮ ವಾಟ್ಸಾಪ್ ಮೂಲಕ ಕದ್ದಾಲಿಕೆ ದಾಳಿ ಹೇಗೆ ನಡೆಯುತ್ತದೆ?
ಈ ಕುರಿತು ತನ್ನ ಬಳಕೆದಾರರಿಗೆ ಮಾಹಿತಿ ನೀಡಿರುವ ವಾಟ್ಸಾಪ್, ನಿಮಗೆ ವಾಟ್ಸಾಪ್ ಮೂಲಕ ಬರುವ ಕರೆಯಲ್ಲಿ (whatsapp call) ಈ ವೈರಸ್ ಇರುತ್ತದೆ. ನೀವು ಕರೆಯನ್ನು ಸ್ವೀಕರಿಸಿ, ಸ್ವೀಕರಿಸದಿರಿ ಒಟ್ಟಿನಲ್ಲಿ ಅದರ ಮೂಲಕ ಕದ್ದಾಲಿಕೆ ವೈರಸ್ ನಿಮ್ಮ ಮೊಬೈಲ್ ಫೋನಿನ ಒಳಗೆ ಪ್ರವೇಶ ಪಡೆಯುತ್ತದೆ. ನಂತರ ಅದು ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಯನ್ನು ಪಡೆಯಲು ಶಕ್ತವಾಗುತ್ತದೆ. ನಿಮ್ಮ ಫೋನಿನಲ್ಲಿರುವ ಫೋಟೋಗಳು, ವಿಡಿಯೋಗಳು, ಕಾಲ್ ರೆಕಾರ್ಡ್ ಗಳು, ವಾಟ್ಸಾಪ್, ಮೆಸೆಂಜರ್ ಚಾಟಿಂಗ್ ಗಳು, ಹೀಗೆ ಎಲ್ಲಾ ಮಾಹಿತಿಗಳನ್ನು ಅದು ಕದಿಯತೊಡಗುತ್ತದೆ. ಕೆಲವೊಮ್ಮೆ ಎಲ್ಲಾ ಡಾಟಾ ನಷ್ಟವಾಗಲೂಬಹುದು ಎಂದು ಫೇಸ್ಬುಕ್ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಹೀಗೆ ವಾಟ್ಸಾಪ್ ಮೂಲಕ ಬಳಕೆದಾರರ ಕದ್ದಾಲಿಕೆ ನಡೆಸಲು ಬಿಟ್ಟಿರುವ ವೈರಸ್ಸನ್ನು ಸೃಷ್ಟಿಸಿ ಹರಡಿರುವುದು ಇಸ್ರೇಲ್ ದೇಶದ NSO GROUP ಎಂದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಈ ರೀತಿ ನಮ್ಮ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಮಾಹಿತಿ ಕದ್ದಾಲಿಕೆ ನಡೆಸುವುದು ಹೊಸ ವಿದ್ಯಮಾನವೇನಲ್ಲ. ನಾವು ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಿಕೊಳ್ಳುವ (Install) ಎಷ್ಟೋ ಬಗೆಯ ಅಪ್ಲಿಕೇಶನ್ ಗಳು ಈಗಾಗಲೇ ನಮ್ಮ ಮೊಬೈಲಿನಲ್ಲಿರುವ ಮಾಹಿತಿಯನ್ನು, ನಮ್ಮ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದರೆ ನಮಗೆ ತಿಳಿದೇ ಇರುವುದಿಲ್ಲ. ಅಪ್ಲಿಕೇಶನ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳುವಾಗಲೇ ಅವು ನಮ್ಮ ಎಲ್ಲಾ ಬಗೆಯ ಮಾಹಿತಿಯನ್ನು ಪಡೆದುಕೊಳ್ಳಲು ಅನುಮತಿ ಕೇಳಿರುತ್ತವೆ, ನಾವು ಒಪ್ಪಿಕೊಂಡಿರುತ್ತೇವೆ.
ಆದರೆ ಜಾಗತಿಕವಾಗಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸಾಪ್ ಅಪ್ಲಿಕೇಶನನ್ನು ಕದ್ದಾಲಿಕೆ ಮಾಡಿಕೊಳ್ಳಲು ವೈರಸ್ ತಯಾರಿಸಿ ಬಿಟ್ಟಿರುವುದು ಇದೇ ಮೊದಲು ಎನ್ನಲಾಗಿದೆ.
ವಾಟ್ಸಾಪ್ ಕಂಪನಿಯು ಈಗಾಗಲೇ ವಾಟ್ಸಾಪ್ ಮೂಲಕ ನಡೆಸುವ ಖಾಸಗಿ ಚಾಟ್ ಮೆಸೇಜುಗಳನ್ನು ಇತರರು ಹ್ಯಾಕ್ ಮಾಡಿ ಓದಲಾಗದಂತೆ ಒಂದು ತುದಿಯಿಂದ-ಮತ್ತೊಂದಿ ತುದಿಗೆ ಎನ್ ಕ್ರಿಪ್ಟನ್ ಮೂಲಕ ರಕ್ಷಣೆ ಒದಗಿಸಿದೆ. ಆದರೆ ಈಗ ವಾಟ್ಸಾಪ್ ಮೇಲೆ ದಾಳಿ ನಡೆಸಿರುವ ಕದ್ದಾಲಿಕೆ ವೈರಸ್ ಅದನ್ನೂ ಬೇಧಿಸಿಕೊಂಡು ಮಾಹಿತಿ ಕದಿಯಬಲ್ಲದು ಎಂದು ಹೇಳಲಾಗಿದೆ.
ಈ ದಾಳಿಯಲ್ಲಿ ಹೆಚ್ಚಾಗಿ ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರು, ರಾಜಕೀಯ ಕಾರ್ಯಕರ್ತರು ಮುಂತಾದವರುಗಳನ್ನೇ ಗುರಿಪಡಿಸಿ ದಾಳಿ ನಡೆಸುವುದು ಕದ್ದಾಲಿಕೆದಾರರ ಉದ್ದೇಶವಾಗಿದೆ ಎನ್ನಲಾಗಿದೆ.
ನೀವೀಗ ಏನು ಮಾಡಬೇಕು?
- ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಪ್ಲೇಸ್ಟೋರ್ (Play Store) ಆಪ್ ತೆರೆಯಿರಿ
- ಅದರಲ್ಲಿ ವಾಟ್ಸಾಪ್ ಆಪ್ ಮೇಲೆ ಕ್ಲಿಕ್ ಮಾಡಿ
- ಅದರ ಪಕ್ಕದಲ್ಲಿ UPDATE ಎಂದು ಇದ್ದರೆ ಅದರ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಅಪ್ಡೇಟ್ ಆಗುವವರೆಗೆ ಕಾಯಿರಿ
- ನೀವು ವಾಟ್ಸಾಪ್ ತೆರೆಯುತ್ತಿಂದತೆ Update ಎಂದು ತೋರಿಸದೇ Open ಎಂದು ತೋರಿಸಿದರೆ ನಿಮ್ಮ ವಾಟ್ಸಾಪ್ ಇತ್ತೀಚೆಗೆ ಅಪ್ಡೇಟ್ ಆಗಿದೆ ಎಂದು ಅರ್ಥ. ಯಾವಾಗ ಅಪ್ಡೇಟ್ ಆಗಿರುತ್ತದೆ ಎಂಬ ಮಾಹಿತಿ ಸಹ ಅದರಲ್ಲಿ ಇರುತ್ತದೆ.
ಒಂದೊಮ್ಮೆ ನಿಮ್ಮ ಫೋನಿನಲ್ಲಿರುವ ವಾಟ್ಸಾಪ್ ತಾನಾಗಿಯೇ ವಾರದಿಂದೀಚೆಗೆ ಅಪ್ಡೇಟ್ ಆಗಿದ್ದಲ್ಲಿ ಯಾವ ತೊಂದರೆ ಇರುವುದಿಲ್ಲ.
ಹೀಗೆ ವಾಟ್ಸಾಪ್ ಅಪ್ಡೇಟ್ ಮಾಡುವ ಮೂಲಕ ಈಗ ಸೈಬರ್ ಹ್ಯಾಕರ್ ಗಳು ನಡೆಸಿರುವ ಕದ್ದಾಲಿಕೆ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದು, ನಿಮ್ಮ ಖಾಸಗಿ ಮಾಹಿತಿಗಳು ಇಸ್ರೇಲ್ ಹ್ಯಾಕಿಂಗ್ ಕಂಪನಿಯ ಪಾಲಾಗುವುದನ್ನು ತಡೆಯಬಹುದು. ನಿಮ್ಮ ಫೋನಿನಲ್ಲಿರುವ ಎಲ್ಲಾ ಫೋಟೋ, ವಿಡಿಯೋ, ಆಡಿಯೋ ನಾಶವಾಗದಂತೆ ತಡೆಯಬಹುದು.
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ
2 Comments
Which virus
Super