ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಮೈಸೂರಿನಲ್ಲಿ ರಾಹುಲ್ ಗಾಂಧಿ ಮತ್ತು ಸ್ಯಾಮ್ ಪಿತ್ರೋಡಾ ಜತೆಗೆ ವಿಜ್ನಾನ ಮತ್ತು ತಂತ್ರಜ್ನಾನಗಳ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ಇತ್ತು. ಆದರೆ ಅಂದು ಬಿಜೆಪಿಯ ರಣತಂತ್ರಗಾರರು ಒಂದು ಹುಡುಗಿಯ ಮೂಲಕ ಅಂದಿನ “ವಿಜ್ನಾನ ಮತ್ತು ತಂತ್ರಜ್ನಾನ“ ಸಂವಾದ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಇಲ್ಲದ ಎನ್ಸಿಸಿ ಬಗ್ಗೆ ಪ್ರಶ್ನೆಯನ್ನು ಕೇಳಿಸಿದರು ಹಾಗೂ ಆ ವಿಡಿಯೋ ಕ್ಲಿಪ್ಪನ್ನೂ ದೇಶದ ಎಲ್ಲಾ ಪೇಡ್ ಟಿವಿ ಚಾನೆಲ್ಲುಗಳಲ್ಲಿ ಪ್ರಸಾರ ಮಾಡಿಸಿ ‘ರಾಹುಲ್ ಗಾಂಧಿ ದೇಶ ರಕ್ಷಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ನಾನ ಕೊಡುವ ಎನ್ಸಿಸಿ ಬಗ್ಗೆ ಮಾಹಿತಿ ಇಲ್ಲದ ದಡ್ಡ’ ಎಂಬ ರೀತಿಯಲ್ಲಿ ಪರಿಹಾಸ್ಯ ಮಾಡಿಸಿದರು. ಆದರೆ ನಂತರ ಬಹಿರಂಗವಾದ ವಿಷಯವೇನೆಂದರೆ ಆ ಹುಡುಗಿಯ ಕುಟುಂಬಿಕರು ಆರೆಸ್ಸೆಸ್ಸ್ ಹಿನ್ನೆಲೆಯವರು ಹಾಗೂ ಆ ಹುಡುಗಿಯ ಅಸಂಗತ ಪ್ರಶ್ನೆಯ ಹಿಂದೆ ದೊಡ್ಡ ರಾಜಕೀಯ ಕುಟಿಲ ತಂತ್ರ ಅಡಗಿತ್ತು ಎಂಬುದು. ರಾಹುಲ್ ಗಾಂಧಿ ಹೋದಲ್ಲೆಲ್ಲಾ ತಿರುಚು ಪ್ರಶ್ನೆಗಳನ್ನು ಕೇಳಲು ಬಿಜೆಯವರು ಕೇವಲ ಹುಡುಗಿಯರನ್ನೇ ಬಳಸುತ್ತಾರೆ! ಆದರೆ ರಾಹುಲ್ ಗಾಂಧಿ ಎಲ್ಲಾ ತಿರುಚು ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ. (ತಮ್ಮ ವಿರೋಧಿಗಳಿಗೆ ರಾಕ್ಷಸರು ಎಂದು ಹಣೆಪಟ್ಟಿ ಹಚ್ಚಿ ಅವರನ್ನು ಹಣಿಯಲು ದೇವಿ ಎಂಬ ಮಹಿಳೆಯರನ್ನು ಬಳಸುವ ವಿಧಾನವು ಆರ್ಯ ವೈದಿಕರು ಮೂರು ಸಾವಿರ ವರ್ಷದಿಂದ ಅನುಸರಿಸುತ್ತಿರುವ ಹಳೆಯ ಕುಟಿಲ ತಂತ್ರ ಅಷ್ಟೇ. ಈಗಿನ ಆಧುನಿಕ ಯುಗದಲ್ಲೂ ಆರೆಸ್ಸೆಸ್ಸಿನವರದ್ದು ಅದೇ ಕೊಳಕು ಸ್ಟ್ರಾಟೆಜಿ). ವಿಪರ್ಯಾಸವೆಂದರೆ ಮೋದಿ ಮಾತ್ರ ಸ್ವತಃ ಎಂದೂ ಇಂತಹಾ ಮುಕ್ತ ಸಂವಾದಕ್ಕೆ ಸಿಗುವುದೇ ಇಲ್ಲ, ಅಂತಹಾ ಪಲಾಯನವಾದಿ ಮೋದಿ.
ಮೋದಿಯ 2019ರ ಚುನಾವಣಾ ರಣತಂತ್ರಗಾರರು ಶಾಲೆ-ಕಾಲೇಜುಗಳ ಎನ್ಸಿಸಿಯನ್ನು ತಮ್ಮ ಪ್ರಚಾರಕ್ಕೆ ಹೇಗೆ ದುರುಪಯೋಗ ಮಾಡಿಕೊಳ್ಳುವ ಷಡ್ಯಂತ್ರ ರಚಿಸಿದ್ದಾರೆ ಎಂಬುದನ್ನು ಜನರು ಅರಿತುಕೊಳ್ಳಬೇಕಿದೆ.
ಭಾರತದಲ್ಲಿ ಒಟ್ಟು 13 ಲಕ್ಷ ಕಾಲೇಜು ವಿದ್ಯಾರ್ಥಿಗಳು ಎನ್ಸಿಸಿ ಕ್ಯಾಡೆಟ್ ಆಗಿದ್ದಾರೆ. ಮೋದಿ ಎಷ್ಟು ದೊಡ್ಡ ಆಟ ಆಡುತ್ತಿದ್ದಾರೆ ಎಂದರೆ ಅವರು 13 ಲಕ್ಷ ಎನ್ಸಿಸಿ ಕ್ಯಾಡೆಟ್ ಗಳ ಡೇಟಾಬೇಸ್ ರಚಿಸಲು ತನ್ನ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಆದೇಶಿದ್ದರು. ಈ ಮೂಲಕ ಭಾರತದ ಎಲ್ಲಾ ರಾಜ್ಯದ ಹದಿಮೂರು ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರ ಪೂರ್ಣ ಮಾಹಿತಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಿಗುವಂತಾಯಿತು. ಇದು ಕೇಂಬ್ರಿಡ್ಜ್ ಅನಲಿಟಿಕಾ ಬಳಸಿದ ವಿಧಾನದ ದೇಶಿ ಆವೃತ್ತಿ ಆಗಿದೆ ಅಷ್ಟೇ. ಈ ಡೇಟಾಬೇಸ್ ಬಳಸಿ ರಣವ್ಯೂಹ ರಚಿಸಿ 2019 ರ ಚುನಾವಣೆ ಗೆಲ್ಲುವ ಅತಿ ಪ್ರಚಂಡ ತಂತ್ರ ಮೋದಿ ಬಳಗ ರಚಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕುಟುಂಬದ ಪೂರ್ಣ ವಿವರ ಮತ್ತು ಮನೆಯ ಒಬ್ಬರ ಫೋನ್ ನಂಬರ್ ಕೊಡಬೇಕು, ಜತೆಗೆ ಎಲ್ಲಾ 13 ಲಕ್ಷ ವಿದ್ಯಾರ್ಥಿಗಳೂ ಹೊಸದಾಗಿ ಇಮೈಲ್ ವಿಳಾಸ ರಚಿಸಿ ಅದನ್ನು ಪ್ರಧಾನಿ ಕಾರ್ಯಾಲಯಕ್ಕೆ ಒದಗಿಸಬೇಕು ಎಂಬ ಆದೇಶ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಎಲ್ಲಾ ಎನ್ಸಿಸಿ ತರಬೇತುದಾರ ಶಿಕ್ಷಕರಿಗೆ ಪ್ರಧಾನಿ ಕಾರ್ಯಾಲಯದಿಂದ ಬಂದಿತ್ತು. ಈಗಿನ ಹೆಚ್ಚಿನ ಎನ್ಸಿಸಿ ಕ್ಯಾಡೆಟ್ ಗಳು 18 ರಿಂದ 20 ವರ್ಷದೊಳಗಿನವರು ಮತ್ತು ಇವರೆಲ್ಲಾ ಹೊಸದಾಗಿ ಮತದಾನದ ಅಧಿಕಾರ ಪಡೆದವರು. ಇವರು 2019 ರಲ್ಲಿ ಮೊಟ್ಟ ಮೊದಲ ಬಾರಿಗೆ ಮತದಾನ ಮಾಡುವ ಅರೆಜ್ನಾನವುಳ್ಳ ಎಳೆಯ ಉತ್ಸಾಹಿಗಳು. ಇವರ ಹುಡುಗು ಬುದ್ದಿಯ ಲಾಭ ಪಡೆದು ಇವರ ಬ್ರೆನ್ ವಾಶ್ ಮಾಡಿ ತನ್ನ ಭಕ್ತರನ್ನಾಗಿ ಪರಿವರ್ತಿಸಿ ಇವರ ಮೂಲಕ 2019ರ ಚುನಾವಣೆ ಗೆಲ್ಲುವ ದೂರದೃಷ್ಟಿಯ ತಂತ್ರ ಬಿಜೆಪಿ ರಚಿಸಿತ್ತು.
ಅಷ್ಟೇ ಅಲ್ಲ, ಕಳೆದ ವರ್ಷವೇ ಮೋದಿ ಸರಕಾರ ಎಲ್ಲಾ ಸಾರ್ವಜನಿಕ ಪೆಟ್ರೋಲಿಯಂ ಕಂಪನಿಗಳಿಗೆ ಆದೇಶ ಕೊಟ್ಟು ದೇಶದ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುವ ಸುಮಾರು 20 ಲಕ್ಷ ನೌಕರರ ಫೋನ್ ನಂಬರ್ ಮತ್ತು ಪೂರ್ಣ ವಿಳಾಸ ಪ್ರಧಾನಿ ಕಾರ್ಯಾಲಯಕ್ಕೆ ಒದಗಿಸಬೇಕು ಎಂಬ ಆದೇಶಿಸಿತ್ತು. ಯಾವ ಕಾರಣಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಫೋನ್ ನಂಬರ್ ಪ್ರಧಾನಿ ಕಾರ್ಯಾಲಯಕ್ಕೆ ಬೇಕು ಎಂದು ಸರಕಾರದ ಆದೇಶದಲ್ಲಿ ಹೇಳಿರಲಿಲ್ಲ. ಈ ಪೆಟ್ರೋಲ್ ಬಂಕ್ ನೌಕರರಲ್ಲಿಯೂ 18 ರಿಂದ 22 ವರ್ಷದೊಳಗಿನ ಹೊಸ ಮತದಾರರೇ ಅಧಿಕ. ಇವರ ಫೋನ್ ನಂಬರ್ ಬಳಸಿ ಡೇಟಾಬೇಸ್ ರಚಿಸಿ ನಂತರ ಅವರನ್ನು ಬ್ರೆನ್ ವಾಶ್ ಮಾಡಿ ಕುರುಡು ಮೋದಿ ಭಕ್ತರನ್ನಾಗಿ ಪರಿವರ್ತಿಸಿ ಅವರ ಮೂಲಕ 2019 ರ ಚುನಾವಣೆ ಗೆಲ್ಲುವ ರಣತಂತ್ರ ಕಳೆದ ವರ್ಷವೇ ಬಿಜೆಪಿ ರಚಿಸಿತ್ತು. ಮೋದಿಯ ‘ನಮೋ ಆಪ್’ ಮತ್ತು ನಮ್ಮ ಆಧಾರ್ ಕಾರ್ಡ್ ಡೇಟಾ ಸಹಾ ಬಳಸಿ ಯಾರಿಗೂ ಗೊತ್ತಾಗದಂತೆ ಬೇರೆ ಬೇರೆ ಕ್ಷೇತ್ರದಲ್ಲಿರುವ ಹೊಸ ಮತದಾರರ ಇಂತಹಾ ಡೇಟಾಬೇಸ್ ರಚಿಸಲು ಬಳಸಲ್ಪಡುತ್ತಿದೆ. ಇದನ್ನೇ ಅವರು ಈ ಚುನಾವಣೆಯಲ್ಲಿರುವ ‘ಅಂಡರ್ ಕರಂಟ್’ ಎಂದು ಕರೆಯುವುದು. ಪ್ರಧಾನಿ ಕಾರ್ಯಾಲಯವು ಸರಕಾರೀ ಕೆಲಸ ಮಾಡುವುದನ್ನು ಬಿಟ್ಟು ಮೋದಿಯ ಇಂತಹಾ ಅಡ್ನಾಡಿ ಕೆಲಸಗಳಿಗೇ ಹೆಚ್ಚು ಬಳಕೆಯಾಗುತ್ತಿದೆ. ವಿರೋಧ ಪಕ್ಷಗಳ ದಡ್ಡ ತಲೆಗೆ ಇವೆಲ್ಲಾ ಹೋಗುವುದಿಲ್ಲ. ಮುಂದಿನ ವಾರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಗ ಈ ಬೃಹತ್ ಡೇಟಾಬೇಸ್ ಬಳಕೆಯ ಅಡ್ಡ ಪರಿಣಾಮ ಲೋಕಕ್ಕೆ ಗೊತ್ತಾಗಬಹುದು!
ರಾಹುಲ್ ಗಾಂಧಿಗೆ ಎನ್ಸಿಸಿ ಕುರಿತು ಜ್ನಾನವಿಲ್ಲದಿರುವ ಬಗ್ಗೆ ಲೇವಡಿ ಮಾಡುತ್ತಾ ಮೋದಿ ತಾವು ಹೈಸ್ಕೂಲಿನಲ್ಲಿ ಇದ್ದಾಗ ಎನ್ಸಿಸಿ ಯಲ್ಲಿ ಇದ್ದೆ ಎಂದು ಹೇಳಿಕೊಳ್ಳುತ್ತಾರೆ. ಅದರ ಸಮರ್ಥನೆಗೆ ಒಂದು 12-13 ವರ್ಷದ ಹುಡುಗನ ಹಳೆಯ ಫೋಟೋ ತೋರಿಸುತ್ತಾರೆ. ಆದರೆ ಆ ಫೋಟೋದಲ್ಲಿರುವ ಹುಡುಗ ತೊಟ್ಟಿರುವ ಸಮವಸ್ತ್ರ ಬಾಯ್-ಸ್ಕೌಟ್ಸ್ ದ್ದಾಗಿದೆಯೇ ಹೊರತು ಎನ್ಸಿಸಿಯದ್ದು ಅಲ್ಲ. ಎನ್ಸಿಸಿ 1948 ರಲ್ಲಿಯೇ ಪ್ರಾರಂಭವಾಗಿದ್ದರೂ ಅದು ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿದ್ದು ಚೀನಾ ಯುದ್ಧದ ನಂತರ ಅಂದರೆ 1963 ರಲ್ಲಿ ಹಾಗೂ 1968 ರಲ್ಲಿ ಅದನ್ನು ಮತ್ತೆ ಐಚ್ಛಿಕ ಮಾಡಲಾಯಿತು. 1963 ರಲ್ಲಿ ಮೋದಿ 14 ವರ್ಷದವರಾಗಿದ್ದರು ಹಾಗೂ ಅದಾಗಲೇ ಅವರು ಶಾಲೆ ಬಿಟ್ಟಿದ್ದರು. ಜತೆಗೆ ಅವರ ವಡ್ನಗರ್ ಸರಕಾರಿ ಹೈಸ್ಕೂಲ್ ನಲ್ಲಿ ಎಂದೂ ಸ್ಕೌಟ್ಸ್ ಅಥವಾ ಎನ್ಸಿಸಿ ಇರಲೇ ಇಲ್ಲ ಎಂದು ಅಲ್ಲಿಯ ಶಾಲೆಯ ಆಡಳಿತ ಸ್ಪಷ್ಟೀಕರಣ ಕೊಟ್ಟಿದೆ. ಹಾಗಾದರೆ ಮೋದಿ ಎನ್ಸಿಸಿ ಕ್ಯಾಡೆಟ್ ಆಗಿದ್ದು ಯಾವಾಗ? ಮತ್ತು ಆ ಫೋಟೋದಲ್ಲಿ ಇರುವ ಹುಡುಗ ನಿಜವಾಗಿ ಯಾರು? ಆ ಶಾಲೆಯಲ್ಲಿ 1962-63ರಲ್ಲಿ ಸ್ಕೌಟ್ಸ್ ಮತ್ತು ಎನ್ಸಿಸಿ ಇದ್ದರೆ ವರ್ಷದ ಕೊನೆಗೆ ಶಾಲೆಯವರು ತೆಗೆದ ಎಲ್ಲಾ ವಿದ್ಯಾರ್ಥಿಗಳ ಮತ್ತು ತರಬೇತಿದಾರ ಶಿಕ್ಷಕರ ಗ್ರೂಪ್ ಫೋಟೋ ಇರಲೇ ಬೇಕಲ್ಲವೇ? ಒಂದು ವೇಳೆ ಅವರು ನಿಜವಾಗಿ ಕಾಲೇಜಿಗೆ ಹೋಗಿದ್ದರೆ ಮತ್ತು ಅಲ್ಲಿ ಅವರು ಎನ್ಸಿಸಿ ಯಲ್ಲಿ ಇದ್ದಿದ್ದರೆ ಅದು ಯಾವ ಕಾಲೇಜು ಮತ್ತು ಯಾವ ವರ್ಷದಲ್ಲಿ ಎಂಬ ವಿವರ ಮೋದಿ ಕೊಡಬಲ್ಲರೇ? ಅದೇ ಶಾಲೆ-ಕಾಲೇಜಿನಲ್ಲಿ ಮೋದಿಯ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ತಮ್ಮಂದಿರೂ ಕಲಿತಿರಬಹುದು. ಅವರೂ ಎನ್ಸಿಸಿ ಯಲ್ಲಿ ಇದ್ದಿರಬಹುದು ಅಲ್ಲವೇ. ಅವರಲ್ಲೂ ಇಂತಹಾ ವಿದ್ಯಾರ್ಥಿದೆಸೆಯ ಫೋಟೋ ಇದ್ದರೆ ಅವರೇಕೆ ಪತ್ರಕರ್ತರಿಗೆ ತೋರಿಸುತ್ತಿಲ್ಲ? ಒಟ್ಟಾರೆ ಮೋದಿ ಚಹಾ ಮಾರಿದ್ದು ಎಷ್ಟು ಸುಳ್ಳೋ ಅಷ್ಟೇ ದೊಡ್ಡ ಸುಳ್ಳು ಅವರು ಅಪಾರ ದೇಶಭಕ್ತಿಯಿಂದ ಎನ್ಸಿಸಿ ಸೇರಿದ್ದರು ಎಂಬುದು. ಇಂತಹಾ ಸುಳ್ಳಿನ ಸರದಾರ ನಮ್ಮ ಪ್ರಧಾನಿ ಎಂಬುದೇ ವಿಷಾದದ ಸಂಗತಿ.