ಬೆಂಗಳೂರು/ನವದೆಹಲಿ: ಮಹಾತ್ಮಾ ಗಾಂಧಿಯನ್ನು ಕೊಂದ ಹಿಂದುತ್ವವಾದಿ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಗೋಡ್ಸೆಯನ್ನು ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದ ಸಂಸದರಾದ ಅನಂತಕುಮಾರ್ ಹೆಗಡೆ ಮತ್ತು ನಳೀನ್ ಕುಮಾರ್ ಕಟೀಲು ಅವರು ತಮ್ಮ ಹೇಳಿಕೆಗಳ ಕುರಿತು ವಿವಿರಣೆ ನೀಡಬೇಕು, ಶಿಸ್ತು ಸಮಿತಿಯು ಇನ್ನು 10 ದಿನಗಳಲ್ಲಿ ಈ ಕುರಿತು ವಿವರಣೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶಿಸಿದ್ದಾರೆ.
“ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತನಾಗಿದ್ದ, ಮುಂದೆಯೂ ಆಗಿರುತ್ತಾನೆ” ಎಂದು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಹಾಗೂ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಜ್ಞಾ ಠಾಕೂರ್ ಹೇಳಿಕೆ ನೀಡಿದ್ದರೆ, “70 ವರ್ಷಗಳ ನಂತರ ಗೋಡ್ಸೆಯ ಕುರಿತು ದೇಶದ ಯುವಜನರು ಚರ್ಚೆ ನಡೆಸುತ್ತಿರುವುದು ಸ್ವಾಗತಾರ್ಹ” ಎಂದು ಅನಂತ್ ಕುಮಾರ್ ಹೆಗಡೆ ಸಾಧ್ವಿ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು, “ಗೋಡ್ಸೆ ಕೊಂದಿದ್ದು ಒಬ್ಬರನ್ನು, ಕಸಬ್ ಕೊಂದಿದ್ದು 72 ಜನರನ್ನು, ರಾಜೀವ್ ಗಾಂಧಿ ಕೊಂದಿದ್ದು 17,000 ಜನರರನ್ನು ಎಂದು ಬೇಕಾಬಿಟ್ಟಿಯಾಗಿ ಯಾವ ವಿವರಣೆ ಇಲ್ಲದೇ ಟ್ವೀಟ್ ಮಾಡಿದ್ದರು.
ಈ ಮೂವರ ಹೇಳಿಕೆಗಳ ಕುರಿತು ದೇಶದಾದ್ಯಂತ ಸಾರ್ವಜನಿಕರಿಂದ ಮತ್ತು ರಾಜಕೀಯ ವಲಯದಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆ ಮೂವರೂ ತಮ್ಮ ಹೇಳಿಕೆಗಳನ್ನು ಹಿಂಪಡೆದು ಕ್ಷಮೆ ಯಾಚಿಸಿದ್ದಾರೆ. ಸಾಧ್ವಿ ಪ್ರಗ್ಯಾ ಸಿಂಗ್ “ನನ್ನ ಹೇಳಿಕೆ ವಾಪಾಸು ಪಡೆಯುತ್ತೇನೆ ಹಾಗೂ ಕ್ಷಮೆ ಯಾಚಿಸುತ್ತೇನೆ” ಎಂದು ನೆನ್ನೆ ರಾತ್ರಿ ಟ್ವೀಟ್ ಮಾಡಿದ್ದರು. ಇಬ್ಬರು ಸಂಸದರು ತಮ್ಮ ಟ್ವೀಟ್ ಗಳನ್ನು ಡಿಲೀಟ್ ಮಾಡಿಕೊಂಡಿದ್ದರು.
ಈ ಹಿಂದೆ ಸಂವಿಧಾನ ಬದಲಿಸುವುದೇ ನಮ್ಮ ಗುರಿ ಎಂದು ಹೇಳಿ ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ್ದ ಅನಂತ ಕುಮಾರ್ ಹೆಗಡೆ ಈಗ ನಾಥೂರಾಮ್ ಗೂಡ್ಸೆ ಕುರಿತು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ, “ನೆನ್ನೆ ನನ್ನ ಟ್ವಿಟರ್ ಅಕೌಮಟ್ ಹ್ಯಾಕ್ ಆಗಿತ್ತು, ಗಾಂಧೀಜಿಯವರ ಕೊಲೆಯನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ, ಗಾಂಧೀಜಿ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ನಮಗೆ ಗೌರವವಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಅಪಮಾನಿಸುವ ಹೇಳಿಕೆಗಳನ್ನು ನೀಡಿದ ಈ ಬಿಜೆಪಿ ಮುಖಂಡರ ಹೇಳಿಕೆಗಳಿಂದ ಬಿಜೆಪಿ ನೆನ್ನೆಯೇ ಅಂತರ ಕಾಯ್ದುಕೊಂಡಿದೆ.
ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಕುರಿತು ಟ್ವೀಟ್ ಮಾಡಿ, “ಕಳೆದ ಎರಡು ದಿನಗಳಿಂದ ಅನಂತಕುಮಾರ್ ಹೆಗಡೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಅವುಗಳಿಗೂ ಭಾರತೀಯ ಜನತಾ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಈ ವ್ಯಕ್ತಿಗಳು ತಮ್ಮ ಮಾತುಗಳನ್ನು ಹಿಂಪಡೆದಿದ್ದಾರೆ ಮತ್ತು ಕ್ಷಮೆ ಯಾಚಿಸಿದ್ದಾರೆ. ಆದರೂ ಸಹ ಭಾರತೀಯ ಜನತಾ ಪಕ್ಷದ ನಿಲುವಿಗೆ ವಿರುದ್ಧವಾದ ಇವರ ಹೇಳಿಕೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು ಅವುಗಳನ್ನು ಪಕ್ಷದ ಶಿಸ್ತು ಸಮಿತಿಗೆ ಕಳುಹಿಸುವ ತೀರ್ಮಾನ ಕೈಗೊಂಡಿದೆ” ಎಂದಿರುವ ಅಮಿತ್ ಶಾ, “ಈ ಮುಖಂಡರಿಂದ ಶಿಸ್ತು ಸಮಿತಿಯು ವಿವರಣೆ ಪಡೆದು ಇನ್ನು 10 ದಿನಗಳಲ್ಲಿ ಪಕ್ಷಕ್ಕೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ದೇಶ ಕಂಡ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧಿ ಜೀ ಸ್ವತಂತ್ರ ಕಾಗಿ ಹೋರಾಟ ಮಾಡಿ. ಅನೇಕ ಸತ್ಯಾಗ್ರಹ ಮುಖಾಂತರ ದೇಶಕ್ಕೆ ಸ್ವತಂತ್ರ ತಂದು ಕೊಟ್ ಮಹತ್ಮ್ ಅವರು ಇಂದು 125 ಕೋಟಿ ಜನರು ನಿರ್ಭಯವಾಗಿವೆ ಜೀವನ ನಡಿಸಿತಿದರೆ ಅಂದರೆ ಅದು ಗಾಂಧಿ ಕೋಟ ಉಡಗೋರೆ
ನಿಮ್ ಹಂತ ನಾಲಾಯಕ್ ನಾಯಕರು ದೇಹಲ್ಲಿಯ್ ಕೇಂಪು ಕೋಟೆಯಲ್ಲಿ ಕುಳ್ಳಿತು ಕೊಳ್ಳುವ ಅವಕಾಶ ಕೊಟ್ಟಿದು ಗಾಂಧೀಜಿ.
125 ಕೋಟಿ ಜನರಿಗೆ ಸಮ್ಮಾನ್ ವಕ್ತಿ ಗಾಂಧೀಜಿ.
100 ಗೋಡ್ಸೆ
1000 ಕಸಬ್
100000 ರಾಜೀವ್
ಇವರ ಯಾರಿಗೂ ಹೋಲಿಕೆಯ್ ವ್ಯಕ್ತಿ ಗಾಂಧೀಜಿ ಇಲ್ಲ.
“ಅನಂತಕುಮಾರ್ ಹೆಗಡೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ನಳಿನ್ ಕುಮಾರ್ ಕಟೀಲ್. ಅಧಿಕಾರ ಮಧದಲ್ಲಿ ಜನರ ಚಪ್ಪಾಳೆ ಗೆಲ್ಲುವಿನ ಹಂಬಲದಲ್ಲಿ. ಬಾಯಿಗೆ ಬಂಧ ಹಾಗೆ ಮಾತಿ ಗೆ ವಿರಾಮ ಕುಡಿ. ದೇಶದ ಇತಿಹಾಸ ಬಹಳ ದೊಡ್ಡದು ಇದೆ.