ಉತ್ತರಪ್ರದೇಶ: ಉತ್ತರ ಪ್ರದೇಶದ ಚಂದೌಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬರಲು ಒಪ್ಪದ ದಲಿತರ ಮೇಲೆ ಕಾರ್ಯಕ್ರಮಕ್ಕೂ ಒಂದು ಗಂಟೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಧಬಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಆಯೋಜನೆಗೊಂಡಿದ್ದ ಮೋದಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಸುಂಧರಿ ಗ್ರಾಮದ ಬಿಜೆಪಿ ಬೆಂಬಲಿಗರು ದಲಿತರಿಗೆ ಆಗ್ರಹಿಸಿದ್ದಾರೆ.
ಆದರೆ ಈ ಗ್ರಾಮದ ದಲಿತರು ಬಿಎಸ್ ಪಿ ಬೆಂಬಲಿಗರಾಗಿದ್ದ ಕಾರಣ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ, ಇದರಿಂದ ಕುಪಿತಗೊಂಡ ಬಿಜೆಪಿ ಹೆಚ್ಚು ಕಾರ್ಯಕರ್ತರು ಬಿಎಸ್ ಪಿ ಬೆಂಬಲಿಗರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ದಲಿತ ಸಮುದಾಯದ 10 ಮಂದಿಯ ಮೇಲೆ ಹಲ್ಲೆ ನಡೆದಿದ್ದು, ಎಲ್ಲರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಿಹೆಚ್ ಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭಿಕವಾಗಿ ಎಫ್ ಐ ಆರ್ ದಾಖಲಿಸಲು ನಿರಾಕರಿಸಿದ ಪೊಲೀಸರು ನಂತರ ಅಪರಿಚಿತರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಮೂಲಗಳ ಪ್ರಕಾರ ಮೋದಿ ಪ್ರಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಚುನಾವಣಾ ಪ್ರಚಾರ ಭಾಷಣದ ವೇಳೆ ತನಗಿಂತ ಪಕ್ಷವೇ ಮುಖ್ಯ ಮತ್ತು ದೇಶ ಪಕ್ಷಕ್ಕಿಂತ ಮುಖ್ಯ ಎಂಬ ತೋರಿಕೆಯ ಮಾತುಗಳನ್ನು ಆಡಿದ್ದಾರೆ. ಆದರೆ ಇಷ್ಟೆಲ್ಲಾ ಮಾತನಾಡುವ ಮೋದಿಗೆ ತಮ್ಮದೇ ಪಕ್ಷದ ಕಾರ್ಯಕರ್ತರು ಮೋದಿ ಪ್ರಚಾರಕ್ಕೆ ಬಾರದ ಕಾರಣ ದಲಿತರ ಮೇಲೆ ದಬ್ಬಾಳಿಕೆ ನಡೆಸಿ ಕ್ರೌರ್ಯತೆ ಮೆರೆದ ಬಗ್ಗೆ ಮಾಹಿತಿ ಇದೆಯೇ?.
More Articles
By the same author
Related Articles
From the same category