ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ 1980ರ ದಶಕದಲ್ಲೇ ತಾನು ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಅನ್ನು ಬಳಸಿದ್ದೆ ಎಂದು ಹೇಳಿರುವುದು ಸತ್ಯವಾಗಲು ಸಾಧ್ಯವೇ ಇಲ್ಲ, ಇದೊಂದು ಅಪ್ಪಟ ಸುಳ್ಳು ಎಂದು ಭಾರತಕ್ಕೆ ಮೊದಲ ಬಾರಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸಿದ ಬಿ. ಕೆ ಸಿಂಗಾಲ್ ಸ್ಪಷ್ಟನೆ ನೀಡಿದ್ದಾರೆ.
“ಬಹುಶಃ 1987 ಅಥವಾ 1988ರಲ್ಲಿ ನಾನು ಮೊದಲ ಬಾರಿಗೆ ಡಿಜಿಟಲ್ ಕ್ಯಾಮೆರಾ ಬಳಸಿದ್ದೆ ಮತ್ತು ಆ ಕಾಲದಲ್ಲಿ ಕೆಲವರಷ್ಟೇ ಇಮೇಲ್ ಬಳಸುತ್ತಿದ್ದರು. ವಿರಂಗಮ್ ತಾಲ್ಲೂಕಿನಲ್ಲಿ ಅಡ್ವಾಣಿ ಅವರು ಪ್ರಚಾರ ನಡೆಸುವ ವೇಳೆ ಡಿಜಿಟಲ್ ಕ್ಯಾಮೆರಾ ಬಳಸಿ ನಾನು ಅವರ ಫೋಟೋ ತೆಗೆದಿದ್ದೆ. ಆ ಕಾಲದಲ್ಲಿ ಡಿಜಿಟಲ್ ಕ್ಯಾಮೆರಾ ಎಂದರೆ ಬಹುದೊಡ್ಡ ವಿಷಯವಾಗಿತ್ತು,” ಎಂದು ಪ್ರಧಾನಿ ನರೇಂದ್ರ ಮೋದಿ ನ್ಯೂಸ್ ನೇಷನ್ ಮೇ 11ರಂದು ನಡೆಸಿದ ಸಂದರ್ಶನದಲ್ಲಿ ಹೇಳಿದ್ದರು.
“ಅಡ್ವಾಣಿ ಅವರ ಫೋಟೊ ತೆಗೆದ ನಂತರ ಅದನ್ನು ದೆಹಲಿಗೆ ಕಳುಹಿಸಿದ್ದೆ. ನಂತರದ ದಿನ ಅವರ ಕಲರ್ ಪೋಟೋ ಪ್ರಕಟವಾಗಿತ್ತು, ಅವರು ಬಹಳ ಅಚ್ಚರಿಗೊಂಡಿದ್ದರು. “ಕಾರ್ಯಕ್ರಮದ ಮಾರನೇ ದಿನವೇ ಕಲರ್ ಫೋಟೋ ಇಷ್ಟು ಬೇಗ ಹೇಗೆ ಪ್ರಕಟವಾಗಲು ಸಾಧ್ಯ,’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು” ಎಂದು ಮೋದಿ ಸಂದರ್ಶನದಲ್ಲಿ ತಿಳಿಸಿದ್ದರು.

ಪ್ರಧಾನಿ ಮೋದಿಯ ಮೇಲಿನ ಎಲ್ಲಾ ಹೇಳಿಕೆಗಳನ್ನು ಸಿಂಗಾಲ್ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಅವರ ಪ್ರಕಾರ ಭಾರತದಲ್ಲಿ 1995ಕ್ಕೂ ಮೊದಲು ERNET ಮಾತ್ರ ಲಭ್ಯವಿತ್ತು, ಅದೂ ಸೀಮಿತ ಬಳಕೆಯಲ್ಲಿತ್ತಲ್ಲದೇ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿತ್ತು.
ಆದರೆ ಪ್ರಧಾನಿ ಮೋದಿ 1980ರ ದಶಕದಲ್ಲಿ ಇಂಟರ್ ನೆಟ್ ಬಳಸಿದ್ದರು, ಅದೂ ಮೇಲ್ ಮೂಲಕ ಪೋಟೋ ಕಳುಹಿಸಿದ್ದರು ಎನ್ನುವುದು ಸುಳ್ಳು ಹೇಳಿಕೆ. ಹೀಗಾಗಲು ಸಾಧ್ಯವೇ ಇಲ್ಲ ಎಂದು ಸಿಂಗಾಲ್ ತಿಳಿಸಿದ್ದಾರೆ.
ಭಾರತದಲ್ಲಿ ಇಂಟರ್ನೆಟ್
ಸಿಂಗಾಲ್ ಅವರು ಲಂಡನ್ ನಲ್ಲಿ ಇದ್ದ ವೇಳೆ 1986ರ ಸಮಯದಲ್ಲಿ ಇಂಟರ್ನೆಟ್ ಬಹಳ ದುಬಾರಿ ಇತ್ತು ಮತ್ತು ಎಲ್ಲರಿಗೂ ಸಿಗುವ ಸೌಲಭ್ಯವಾಗಿರಲಿಲ್ಲ.
1991ರಲ್ಲಿ ಸಿಂಗಾಲ್ ಭಾರತಕ್ಕೆ ಮರಳಿದ ನಂತರ ವಿದೇಶ ಸಂಚಾರ ನಿಗಮ ಲಿಮಿಟೆಡ್ (ವಿಎಸ್ಎನ್ಎಲ್)ದ ಅಧ್ಯಕ್ಷ ಹಾಗೂ ಎಂ.ಡಿಯಾಗಿ ಜವಾಬ್ದಾರಿ ವಹಿಸಿಕೊಂಡರು. ಆ ವೇಳೆಗೆ ಭಾರತದಲ್ಲಿ ಟೆಲಿಕಮ್ಯನಿಕೇಷನ್ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಭಾರತವು ಡಿಜಿಟಲ್ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಅಗತ್ಯವಿತ್ತು. 1993ರಲ್ಲಿ ಕೇಂದ್ರ ಸರ್ಕಾರ ಸಿಂಗಾಲ್ ಮತ್ತು ಅವರ ತಂಡದ ಮೇಲೆ ದೇಶದಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲು ಒತ್ತಡ ಹೇರಲು ಆರಂಭಿಸಿತ್ತು.
ಅದರಂತೆ 1995ರಲ್ಲಿ ವಿಎಸ್ಎನ್ಎಲ್ ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾ ಮತ್ತು ಪುಣೆಯಲ್ಲಿ ಸ್ಟೇಷನ್ ನಿರ್ಮಿಸಿತು. “ಬೆಂಗಳೂರಿನಲ್ಲಿ ಸ್ಟೇಷನ್ ನಿರ್ಮಿಸಿಲ್ಲ ಎಂಬ ಬಗ್ಗೆ ದೊಡ್ಡ ಆಗ್ರಹ ಕೇಳಿಬಂತು, ಆದರೆ ಆ ಹಂತದಲ್ಲಿ ಬೆಂಗಳೂರಿನಲ್ಲೂ ನಿರ್ಮಿಸಲು ಸಾಧ್ಯವಾಗಲಿಲ್ಲ” ಎನ್ನುತ್ತಾರೆ ಸ್ಯಾಂಗಲ್.
ಭಾರತದಲ್ಲಿ 1995ರಲ್ಲಿ ಆಗಸ್ಟ್ 15ರಂದು ಇಂಟರ್ನೆಟ್ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಮಾಹಿತಿ ಹಾಗೂ ಚಿತ್ರ ಕಳುಹಿಸಲು ಕಾರ್ಪೊರೇಟ್ ಕಂಪನಿಗಳಿಗೆ ಮಾಸಕ್ಕೆ 25 ಸಾವಿರ ವೆಚ್ಚವಾಗುತ್ತಿತ್ತು ಮತ್ತು ಬಿಡಿವ್ಯಕ್ತಿಗಳಿಗಾದರೆ ತಿಂಗಳಿಗೆ ಸಾವಿರ ವೆಚ್ಚವಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ದೂರುಗಳೇ ಹೆಚ್ಚಿದ್ದವು
ಅಂದಿನ ಕಾಲದಲ್ಲಿ ಜಪಾನ್ ಮತ್ತು ಹಾಂಗ್ ಕಾಂಗ್ ನಂತರ ಏಷ್ಯಾದಲ್ಲೇ ವಾಣಿಜ್ಯಿಕ ಬಳಕೆಗೆ ಇಂಟರ್ನೆಟ್ ಬಳಸುತ್ತಿದ್ದ ಮೂರನೇ ರಾಷ್ಟ್ರ ಭಾರತವಾಗಿತ್ತು. ಆದರೆ ಇಂಟರ್ನೆಟ್ ಗೆ ಇಷ್ಟೊಂದು ಬೇಡಿಕೆ ಹೆಚ್ಚುತ್ತದೆ ಎಂದು ನಾನು ಊಹಿಸಿರಲಿಲ್ಲ, ಆದರೆ ಇದು ತಿಳಿಯುವುದಕ್ಕೂ ಮುನ್ನ ನಾನು ದೂರುಗಳಲ್ಲೇ ಮುಳುಗಿ ಹೋಗಿದ್ದೆವು ಎಂದು ಸಿಂಗಾಲ್ ವಿವರಿಸಿದ್ದಾರೆ.
ನಮಗೆ ಎರಡು ರೀತಿಯ ದೂರುಗಳು ಸಾಮಾನ್ಯವಾಗಿ ಬರುತ್ತಿದ್ದವು. ಆಶ್ಲೀಲತೆಗೆ ಸಂಬಂಧಿತ ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿದ್ದ ಬಗ್ಗೆ ಹಾಗೂ ಸಂಪರ್ಕ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ. ಈಗಲೂ ನನಗೆ ಒಂದು ದೂರು ನೆನಪಿದೆ “ಎಂಥಾ ಆಶ್ಲೀಲತೆಯನ್ನು ನಮ್ಮ ದೇಶಕ್ಕೆ ನೀವು ತಂದಿದ್ದೀರಿ,” ಎಂದಿದ್ದರು.
“ಅಷ್ಟೇ ಅಲ್ಲದೇ ಮೊಡೆಮ್ ಗಳಲ್ಲೂ ಸಾಕಷ್ಟು ಸಮಸ್ಯೆ ಇತ್ತು, ಯಾರಾದರು ಕರೆ ಮಾಡಿದರೆ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಮುಖ್ಯವಾಗಿ 30 ಜನರಿಗೆ ಒಂದು ಜಂಕ್ಷನ್ ಇರುತ್ತಿತ್ತು. ಒಬ್ಬರು ಜಂಕ್ಷನ್ ಅನ್ನು ಸ್ವಾಮಕ್ಕೆ ಪಡೆದರೆ ಉಳಿದವರಿಗೆ ಇದರ ಲಭ್ಯತೆ ಸಿಗುತ್ತಿರಲಿಲ್ಲ,” ಎಂದು ಸಿಂಗಾಲ್ ಅಂದಿನ ಸಮಸ್ಯೆಯನ್ನು ವಿವರಿಸಿದ್ದಾರೆ.
ಇಂಟರ್ನೆಟ್ ಲೋಕಾರ್ಪಣೆಗೊಂಡ ತಿಂಗಳ ನಂತರ ಸಿಂಗಾಲ್ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಅಂದು ಇಂಟರ್ನೆಟ್ ಸೌಲಭ್ಯಕ್ಕಾಗಿ ಇದ್ದ ಹೆಚ್ಚಾದ ಬೇಡಿಕೆಯನ್ನು ಈಡೇರಿಸಲು ಅಗತ್ಯವಾದ ಸಂಪನ್ಮೂಲಗಳು ನಮ್ಮ ಬಳಿ ಇಲ್ಲ ಎಂದು ಈ ವೇಳೆ ತಿಳಿಸಿದ್ದರು.
ಸುದ್ದಿಗೋಷ್ಠಿ ನಡೆಸಿ ಆರು ವಾರಗಳ ನಂತರ ಈ ಸಮಸ್ಯೆಗಳು ಪರಿಹಾರವಾಗಿತ್ತು ಮತ್ತು ದೂರುಗಳು ಸಹ ಕಡಿಮೆಯಾಗಿತ್ತು. ಅಲ್ಲದೇ ವಿಎಸ್ಎನ್ಎಲ್ ಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದ್ದರಿಂದ ಶೇಕಡಾ 50ರಷ್ಟು ವೆಚ್ಚವನ್ನು ಕಡಿತಗೊಳಿಸಲಾಯಿತು.
“ಮತ್ತೆ 36ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡಲಾಯಿತು. ನನಗೆ ಈಗಲೂ ನೆನಪಿದೆ ನಾವು ಇಂಟರ್ನೆಟ್ ಸೌಲಭ್ಯ ಪಡೆದ ಮೊದಲ ಬಾರಿಗೆ ನನ್ನ ಮೊಮ್ಮಗನ ಫೋಟೋ ಬಂದಿತ್ತು, ಅದು 1997 ನವೆಂಬರ್ ನಲ್ಲಿ,” ಎಂದು ಸಿಂಗಾಲ್ ತಮ್ಮ ಮೊದಲ ಇಂಟರ್ನೆಟ್ ಬಳಕೆಯ ಅನುಭವವನ್ನು ಹಂಚಿಕೊಂಡಿದ್ದರು.
More Articles
By the same author