ಬೆಂಗಳೂರು: ಉದ್ಯೋಗ ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು, ಹೀಗೆ ಹಲವು ಸಂದರ್ಭಗಳಲ್ಲಿ ರಾಜ್ಯದ ಬೇರೆಬೇರೆ ಕಡೆಗಳಿಂದ ಬೆಂಗಳೂರಿಗೆ ಹಲವು ಕಾರಣಗಳಿಗೆ ಒಂಟಿಯಾಗಿ ಹೆಣ್ಣುಮಕ್ಕಳು ಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಂಬಂಧಿಕರ ಮನೆಗಳಿಲ್ಲದೆ, ಯಾರ ಪರಿಚಯವೂ ಇಲ್ಲದೆ ಬೆಂಗಳೂರಿಗೆ ಬಂದು ಪರದಾಡುವ ಪರಿಸ್ಥಿತಿ ಎದುರಾಗುತ್ತದೆ. ಕೆಲವು ಬಾರಿ ಸಂಬಂಧಿಕರ ಮನೆಗಳು ಸಹ ಯುವತಿಯರಿಗೆ ಅಷ್ಟು ಸುರಕ್ಷಿತವಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಯುವತಿಯರ ಇಂಥಾ ಸಮಸ್ಯೆ ಅರಿತ ರಾಜ್ಯ ಸರ್ಕಾರ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಬರುವ ಯುವತಿಯರ ವಸತಿ, ಸುರಕ್ಷತೆಗಾಗಿ ನೂತನ ಕ್ರಮಕ್ಕೆ ಮುಂದಾಗಿದೆ.
ಸಂದರ್ಶನ ಅಥವಾ ಪ್ರವೇಶ ಪರೀಕ್ಷೆಗಳಿಗಾಗಿ ಬೆಂಗಳೂರಿಗೆ ಬರುವ ಎಲ್ಲಾ ವರ್ಗದ ಯುವತಿಯರು ಹಾಗೂ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ರಾಜ್ಯ ಸರ್ಕಾರ ಸುರಕ್ಷಿತ ಟ್ರಾನ್ಸಿಟ್ ಹಾಸ್ಟೆಲ್ ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿದೆ. ಈ ಹಾಸ್ಟೆಲುಗಳಲ್ಲಿ ಮಹಿಳೆಯರಿಗೆ ಮೂರು ದಿನಗಳ ಕಾಲ ಉಚಿತ ಊಟ, ವಾಸ್ತವ್ಯವನ್ನು ಒದಗಿಸಲಾಗುತ್ತದೆ . ಕಳೆದ ಮಾರ್ಚ್ ತಿಂಗಳಿನಿಂದಲೇ ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಆರಂಭಿಸಿದ್ದು ಕಳೆದ ತಿಂಗಳು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು 13 ಟ್ರಾನ್ಸಿಟ್ ಹಾಸ್ಟೆಲ್ ಗಳಲ್ಲಿ ಸೌಲಭ್ಯ ಒದಗಿಸಲಾಗಿದ್ದು, ಈ ಕುರಿತು ಜಿಲ್ಲೆಯ ಎಲ್ಲಾ ಪಟ್ಟಣ, ಗ್ರಾಮಗಳಲ್ಲೂ ಅಗತ್ಯ ಕ್ರಮ ವಹಿಸಿ ವ್ಯಾಪಕ ಜಾಗೃತಿ ಮೂಡಿಸಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದೆ. ತಮ್ಮ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಇಲಾಖೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿರುವ ವರ್ಕಿಂಗ್ ವಿಮೆನ್ ಹಾಸ್ಟೆಲ್ಗಳ ವಿಳಾಸ
1. ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ, ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ನಂ. 135, 3ನೇ ಅಡ್ಡರಸ್ತೆ, ನಂದಿದುರ್ಗಾ ರಸ್ತೆ, ಜಯಮಹಲ್ ಎಕ್ಸ್ ಟೆನ್ಷನ್. ಸಂಪರ್ಕ ಸಂಖ್ಯೆ; 080-23330846/22925898
2. ಶ್ರೀ ಶಾರದಾ ಕುಟೀರ, ಕಾರ್ಯನಿರತ ಮಹಿಳೆಯರ ಹಾಸ್ಟೆಲ್, ನಂ. 46, ರಂಗರಾವ್ ರಸ್ತೆ, ಶಂಕರಪುರಂ. ಸಂಪರ್ಕ ಸಂಖ್ಯೆ; 080-26674697
3. ಯಂಗ್ ವಿಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್, ಕಾರ್ಯನಿರತ ಮಹಿಳೆಯರ ಹಾಸ್ಟೆಲ್, ನಂ. 32, ಸಿಎಸ್ ಐ ಕಟ್ಟಡ, ಮಿಷನ್ ರಸ್ತೆ. ಸಂಪರ್ಕ ಸಂಖ್ಯೆ; 080-22238574
4. ಯುನಿವರ್ಸಿಟಿ ವಿಮೆನ್ಸ್ ಅಸೋಸಿಯೇಷನ್ ಕಾರ್ಯನಿರತ ಮಹಿಳೆಯರ ಹಾಸ್ಟೆಲ್, 4ನೇ ಮುಖ್ಯ ರಸ್ತೆ, ಸಂಪಂಗಿರಾಮನಗರ. ಸಂಪರ್ಕ ಸಂಖ್ಯೆ: 080-2223314/26631838/ 9845023783
5. ಮಹಾತ್ಮ ಗಾಂಧಿ ವಿದ್ಯಾಪೀಠ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ಶವಿಗೆ ಮಲ್ಲೇಶ್ವರ ಬೆಟ್ಟ, ಕುಮಾರಸ್ವಾಮಿ ಲೇಔಟ್. ಸಂಪರ್ಕ ಸಂಖ್ಯೆ- 080-26662226
6. ಜಯನಗರ ಸ್ತ್ರೀ ಸಮಾಜ, ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ನಂ. 141, 5ನೇ ಅಡ್ಡರಸ್ತೆ, 1ನೇ ಬ್ಲಾಕ್, ಜಯನಗರ. ಸಂಪರ್ಕ ಸಂಖ್ಯೆ- 080-26674697
7. ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್ ವರ್ಕಿಂಗ್ ವಿಮೆನ್ಸ್ ಅಸೋಸಿಯೇಷನ್, ನಂ. 67, 7ನೇ ಸಿ ಮುಖ್ಯರಸ್ತೆ, ಕಾರ್ಪೊರೇಷನ್ ಲೇಔಟ್, 4ನೇ ಬ್ಲಾಕ್, ಜಯನಗರ. ಸಂಪರ್ಕ ಸಂಖ್ಯೆ- 080-26349676
8. ಬಸವ ಸಮಿತಿ, ಬಸವ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ಬಸವಾಶ್ರಮ, ಕೆಂಗೇರಿ ಸಮೀಪ, ಮೈಸೂರು ರಸ್ತೆ. 080-22723355
9. ವಿಶಾಲ್ ವಿದ್ಯಾ ಸಂಸ್ಥೆ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ಜರಗನಗಳ್ಳಿ, ಕನಕಪುರ ಮುಖ್ಯ ರಸ್ತೆ. ಸಂಪರ್ಕ ಸಂಖ್ಯೆ- 9341289653
10. ಕರ್ನಾಟಕ ಗ್ರಾಮೀಣ ಬಡ ಮತ್ತು ಅಂಗವಿಕಲರ ಶ್ರೇಯೋಭಿವೃದ್ಧಿ ಸೊಸೈಟಿ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, 4ನೇ ಅಡ್ಡರಸ್ತೆ, ಕೆಐಡಿಬಿ ಕಾಲೋನಿ, ಪೀಣ್ಯ ಮೊದಲನೇ ಹಂತ.
11. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯುನಿವರ್ಸಿಟಿ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ಪಿ.ಬಿ. ನಂ. 7201, ನಾಗರಬಾವಿ ಕ್ಯಾಂಪಸ್. ಸಂಪರ್ಕ ಸಂಖ್ಯೆ- 080-23160531/23160535
12. ಯಂಗ್ ವುಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್, ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ನಂ. 7, 20ನೇ ಮುಖ್ಯ ರಸ್ತೆ, 6ನೇ ಬ್ಲಾಕ್, ಕೋರಮಂಗಲ. ಸಂಪರ್ಕ ಸಂಖ್ಯೆ- 080-25634813
13. ರೀಜನಲ್ ಇನ್ಸ್ ಟಿಟ್ಯೂಟ್ ಅಫ್ ಇಂಗ್ಲಿಷ್ ಸೌತ್ ಇಂಡಿಯಾ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್. ಸಂಪರ್ಕ ಸಂಖ್ಯೆ- 080-23213243/2321842
More Articles
By the same author
Related Articles
From the same category