ಮುಂಬೈ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಇನ್ನೂ ಎರಡು ದಿನಗಳ ಬಾಕಿ ಇರುವಾಗಲೇ ಬಿಜೆಪಿ ನಾಯಕರು ಸಿಹಿ ಹಂಚಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಮತಗಟ್ಟೆ ಸಮೀಕ್ಷೆಗಳು ನೀಡಿರುವ ಬಿಜೆಪಿ ಪರವಾದ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿ ಅವರು ಮುಂದಾಲೋಚನೆಯಿಂದ ಬರೋಬ್ಬರಿ 2000 ಕೆಜಿ ಸ್ವೀಟ್ ತಯಾರಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ನೀಡಿದ ಮುಂಬೈನ ಬೊರಿವಾಲಿಯ ಸಿಹಿ ಅಂಗಡಿ ಮಾಲೀಕ, ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿ ಅವರು 1500-2000 ಕೆಜಿ ಸಿಹಿಯನ್ನು ತಯಾರಿಸಲು ಹೇಳಿದ್ದು, ನಮ್ಮ ಎಲ್ಲಾ ಸಿಬ್ಬಂದಿ ಹುರುಪಿನಿಂದ ಮೋದಿ ಮುಖವಾಡ ಧರಿಸಿ ಸಿಹಿ ತಯಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಳಿಗೆಯೊಂದರಲ್ಲಿ ಬಿಜೆಪಿಯ ಕಮಲದ ಗುರುತಿರುವ ಧಾರವಾಡ ಪೇಡ ವ್ಯಾಪಾರ ನಡೆಸುತ್ತಿರುವುದು ಸಹ ಕಂಡುಬಂದಿತ್ತು.
ಒಟ್ಟಾರೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಎಕ್ಸಿಟ್ ಪೋಲ್ ಬಿಜೆಪಿ ಅಭ್ಯರ್ಥಿಗಳ ಮೇಲೆ ಭಾರೀ ಪ್ರಭಾವ ಬೀರಿದಂತಿದೆ. ಬಿಜೆಪಿ ನಾಯಕರು ಈಗಾಗಲೇ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಮತೆಣಿಕೆಯಲ್ಲಿ ಫಲಿತಾಂಶ ಬಿಜೆಪಿಗೆ ವಿರುದ್ಧ ಬಂದರೆ ಸ್ವೀಟ್ ಆರ್ಡರ್ ಕೊಟ್ಟವರು ಪಜೀತಿಗೆ ಬೀಳುವುದು ಗ್ಯಾರಂಟಿ.