ಲೋಕಸಭಾ ಚುನಾವಣೆಗಳ ಅಂತಿಮ ಹಂತದ ಮತದಾನ ಮೇ 19ರ ಸಾಯಂಕಾಲ ಕೊನೆಗೊಂಡಿತು. ನಿಯಮಗಳ ಪ್ರಕಾರ ಅಂದು ಎಷ್ಟೇ ತಡವಾದರೂ ಎಲ್ಲಾ ಮತಗಟ್ಟೆಗಳಿಂದ ಇವಿಎಂ ಮತಯಂತ್ರಗಳನ್ನು ಸೂಕ್ತ ಭದ್ರತೆಯಲ್ಲಿ ಸ್ಟ್ರಾಂಗ್ ರೂಂಗಳಿಗೆ ಸಾಗಿಸಿ, ಸುರಕ್ಷಿತವಾಗಿಟ್ಟು ಅಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸತಕ್ಕದ್ದು. ಆದರೆ ಮೇ 20ರ ಸಾಯಂಕಾಲ ಮತ್ತು ರಾತ್ರಿ ಹೊತ್ತಿಗೆ ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮುಂತಾದೆಡೆ ಸ್ಟ್ರಾಂಗ್ ರೂಂಗಳ ಸುತ್ತಮುತ್ತಲೂ ತೀವ್ರ ಅನುಮಾನಕ್ಕೆ ಎಡೆ ಮಾಡುವ ಘಟನೆಗಳು ದಾಖಲಾಗಿವೆ.
ಒಂದು ಕಡೆ ಇಡೀ ದೇಶದಲ್ಲಿ ಮತಗಟ್ಟೆ ಸಮೀಕ್ಷೆಗಳು ಘೋಷಿಸಿರುವ ಚುನಾವಣಾ ಫಲಿತಾಂಶದ ಕುರಿತು ಕೊನೆ ಮೊದಲಿಲ್ಲದೇ ಚರ್ಚೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಸದ್ದಿಲ್ಲದೇ ಅನುಮಾನಾಸ್ಪದ ರೀತಿಯಲ್ಲಿ ಇವಿಎಂಗಳ ಸಾಗಾಣಿಕೆಯಾಗುತ್ತಿರುವುದರ ಕುರಿತು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಪ್ರದೇಶದ ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂ ಸಾಗಾಟದ ಕುರಿತು ಅವು “ಮೀಸಲು ಇವಿಎಂಗಳು” ಎಂಬ ಸ್ಪಷ್ಟನೆ ನೀಡಿದ್ದರೂ ಸಹ ಸೋಮವಾರ ಸಂಜೆಯೇ ಅವುಗಳು ದಿಢೀರ್ ಎಂದು ಉತ್ತರ ಭಾರತದ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿಲ್ಲ.

ಇವಿಎಂಗಳನ್ನು ಸಂಶಯಾಸ್ಪದ ರೀತಿಯಲ್ಲಿ ಇಳಿಸುವ, ಗೋಡೋನುಗಳಲ್ಲಿ ಇರಿಸುವ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ, ವಿಡಿಯೋಗಳನ್ನು ಅನೇಕರು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಪ್ರಮುಖ ಘಟನೆಗಳು ಇಂತಿವೆ
ಘಟನೆ 1: ಗಾಜಿಯಾಬಾದ್, ಉತ್ತರ ಪ್ರದೇಶ
ಉತ್ತರ ಪ್ರದೇಶದ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಬಿಜೆಪಿಯ ಮನೋಜ್ ಸಿನ್ಹಾ ವಿರುದ್ಧ ಸ್ಪರ್ಧಿಸುರ್ತಿರುವ ಬಿಎಸ್ಪಿ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಸೋಮವಾರ ರಾತ್ರಿ ಸ್ಟ್ರಾಂಗ್ ರೂಂಗಳಲ್ಲಿರುವ ಇವಿಎಂಗಳಿಗೆ ಸೂಕ್ತ ಭದ್ರತೆ ಬೇಕು ಎಂದು ತಮ್ಮ ನೂರಾರು ಬೆಂಬಲಿಗರೊಂದಿಗೆ ರಾತ್ರೋರಾತ್ರಿ ಧರಣಿ ಕುಳಿತಿದ್ದರು. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಬಿಜೆಪಿ ಕಾರ್ಯಕರ್ತರು ಓಡಾಡುತ್ತಿದ್ದು, ಟ್ರಕ್ಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇವಿಎಂಗಳನ್ನು ಸ್ಥಳಾಂತಿರುಸವ ಪ್ರಯತ್ನ ನಡೆಸಲಾಗಿದೆ ಎಂದು ಅನ್ಸಾರಿ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಅನ್ಸಾರಿ ಒಬ್ಬ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುವ ವಿಡಿಯೋ ವೈರಲ್ ಆಗಿತ್ತು.
WOAH!
WATCH MGB candidate from Gazipur confronting POLICE on EVM safety.
He alleges that a truck full of EVMs was spotted. He is now sitting on dharna outside the counting centre. His demand is that instead of CISF, BSF must protect EVMs.
Watch this space for more. pic.twitter.com/kpYLbyPc73
— SaahilMurli Menghani (@saahilmenghani) May 20, 2019
ಘಟನೆ 2: ಚಾಂದೂಲಿ, ಉತ್ತರ ಪ್ರದೇಶ:
ಇಲ್ಲಿ ನಡೆದ ಒಂದು ಘಟನೆಯಲ್ಲಿ ಟ್ರಕ್ ಒಂದರಿಂದ ಖಾಲಿ ಇವಿಎಂಗಳನ್ನು ಇಳಿಸಿಕೊಂಡು ಮತ ಎಣಿಕೆ ಕ್ಷೇತ್ರದ ಬಳಿ ಸಾಗಿಸುವ ದೃಶ್ಯವೊಂದು ಕಂಡುಬಂದಿದ್ದು, ಈ ಇವಿಎಂಗಳ ಕುರಿತು ಈಗ ಯಾಕೆ ಇಲ್ಲಿ ತರಲಾಗುತ್ತಿದೆ ಮೊದಲೇ ಯಾಕೆ ತರಲಿಲ್ಲ ಎಂದು ಪ್ರಶ್ನಿಸಿದಾಗ ಯಾರೂ ಸಮರ್ಪಕವಾಗಿ ಉತ್ತರ ನೀಡದಿರುವುದು ಕಂಡುಬರುತ್ತದೆ.
ಇವುಗಳನ್ನು ತಾಂತ್ರಿಕ ಕಾರಣದಿಂದಾಗಿ ತಡವಾಗಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯ ಚುನಾವಣಾ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ. ಆದರೆ ಇದು ಚುನಾವಣಾ ಆಯೋಗದ ನೀತಿ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಏಕೆಂದರೆ, ನಿಯಮಗಳ ಪ್ರಕಾರ ಮೀಸಲು ಇವಿಎಂಗಳನ್ನು ಮತದಾನವಾಗಿರುವ ಇವಿಎಂಗಳೊಂದಿಗೆ ಒಂದೇ ದಿನ, ಒಂದೇ ಸಮಯಕ್ಕೆ ಸ್ಟ್ರಾಂಗ್ ರೂಂಗಳಿಗೆ ಸಾಗಿಸಬೇಕಾಗುತ್ತದೆ. ಅಂದರೆ ಮತದಾನ ಮುಕ್ತಾಯಗೊಂಡ ತಕ್ಷಣದಲ್ಲಿ ಎಲ್ಲಾ ಇವಿಎಂಗಳನ್ನೂ ಸ್ಟ್ರಾಂಗ್ ರೂಂಗಳಿಗೆ ಸೂಕ್ತ ಭದ್ರತೆಯಲ್ಲಿ ಸಾಗಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
चन्दौली मे evm बदली जा रही है pic.twitter.com/mxHnUzGDiD
— λ$ł₣ V₦$ (@AsifMohsin3) May 20, 2019
ಘಟನೆ 3- ಸಾರಣ ಮತ್ತು ಮಹಾರಾಜ್ ಗಂಜ್, ಬಿಹಾರ
ಬಿಹಾರದ ಸಾರಣ ಮತ್ತು ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರದ ವ್ಯಾಪ್ರಿಯಲ್ಲಿ 50ಕ್ಕೂ ಹೆಚ್ಚು ಇವಿಎಂಗಳನ್ನು ಹೇರಿಕೊಂಡು ಓಡಾಡುತ್ತಿದ್ದ ಟ್ರಕ್ಕೊಂದನ್ನು ಆರ್ ಜೆಡಿ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದೇವೆ ಎಂದು ಸೋಮವಾರ ಆರ್ ಜೆ ಡಿ ಫೋಟೋ ಸಮೇತ ಟ್ವೀಟ್ ಮಾಡಿತ್ತು.
अभी-अभी बिहार के सारण और महाराजगंज लोकसभा क्षेत्र स्ट्रोंग रूम के आस-पास मँडरा रही EVM से भरी एक गाड़ी जो शायद अंदर घुसने के फ़िराक़ में थी उसे राजद-कांग्रेस के कार्यकर्ताओं ने पकड़ा। साथ मे सदर BDO भी थे जिनके पास कोई जबाब नही है। सवाल उठना लाजिमी है? छपरा प्रशासन का कैसा खेल?? pic.twitter.com/K1dZCsZNAG
— Rashtriya Janata Dal (@RJDforIndia) May 20, 2019
ಘಟನೆ 4: ಫತೇಹಾಬಾದ್, ಹರಿಯಾಣ
ಹರಿಯಾಣದ ಫತೇಹಾಬಾದ್ ನಲ್ಲಿ ಯಾವುದೇ ಸಮರ್ಪಕ ದಾಖಲಾತಿಗಳಿಲ್ಲದೇ ಟ್ರಕ್ ತುಂಬಾ ಇವಿಎಂಗಳನ್ನು ಹೇರಕೊಂಡು ಸೋಮವಾರ ಇಳಿಸಿರುವ ಘಟನೆ ನಡೆದಿದೆ.
ಘಟನೆ 5: ಝಾನ್ಸಿ, ಹರಿಯಾಣಾ
ಹರಿಯಾಣಾದಿಂದ ವರದಿಯಾದ ಘಟನೆಯೊಂದರಲ್ಲಿಯೂ ಇದೇ ರೀತಿಯಲ್ಲಿ ಟ್ರಕ್ಕೊಂದರಿಂದ ಯಾವುದೇ ಭದ್ರತೆಯಿಲ್ಲದೇ ಇವಿಎಂ ಯಂತ್ರಗಳನ್ನು ಇಳಿಸಲಾಗುವ ದೃಶ್ಯ ಕಂಡುಬಂದಿತ್ತು.
Save this tweet. https://t.co/6pjbbyf2BN
— JayEnAar (@GorwayGlobal) May 20, 2019
ಮತದಾನ ಮುಗಿದ ಬಳಿಕ ಮತದಾನ ನಡೆಸಿದ ಹಾಗೂ ಮೀಸಲು ಇವಿಎಂಗಳನ್ನು ಸದಾಕಾಲ ಸಶಸ್ತ್ರ ಪಡೆಗಳ ರಕ್ಷಣೆಯಲ್ಲಿ ಕಾವಲಿರಿಸತಕ್ಕದ್ದು ಎಂದು ಚುನಾವಣಾ ಆಯೋಗದ ನಿಯಮವಿರುವಾಗ ಯಾವುದೇ ಭದ್ರತೆ ಇಲ್ಲದೇ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಇವಿಎಂ ಗಳನ್ನು ಸಾಗಿಸುವುದರ ಹಿಂದಿನ ಕರಾಮತ್ತೇನು ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ಕೇಳುತ್ತಲೇ ಇವೆ. ಆದರೆ ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸುವ ಗೋಜಿಗೂ ಹೋಗಿಲ್ಲ.
ಇವಿಎಂಗಳು ಹೀಗೆ ಅನುಮಾನಾಸ್ಪದವಾಗಿ ಕಾಣಿಸಿಕೊಳ್ಳುತ್ತಿರುವ ಕುರಿತು ಪ್ರತಿಪಕ್ಷಗಳು ಆತಂಕಪಡಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ “ಸಮಾಧಾನಕರ ರೀತಿಯಲ್ಲಿ ಚುನಾವಣಾ ಆಯೋಗ ಉತ್ತರಿಸುವ ಭರವಸೆ” ವ್ಯಕ್ತಪಡಿಸಿದ್ದಾರೆ.
ಬಿಹಾರದ ಪ್ರತಿಪಕ್ಷ ಮುಖಂಡ ತೇಜಸ್ವಿ ಯಾದವ್
ತಮ್ಮ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Visuals and claims of sudden movement of EVMs observed across the north India! Why is it so? Who is transporting these EVMs & Why? What is purpose and objective of this exercise? In order to avoid any confusion & misconception, Election Commission must issue a statement ASAP.
— Tejashwi Yadav (@yadavtejashwi) May 20, 2019