ಇಂದು ಮುಂಜಾನೆ 8 ಗಂಟೆಯಿಂದ ಆರಂಭವಾದ ಲೋಕಸಭಾ ಚುನಾವಣೆ 2019ರ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು ಈ ಹೊತ್ತಿಗೆ ದೇಶದ ಟ್ರೆಂಡ್ ತಿಳಿದು ಬರುತ್ತಿದೆ.
• ಪೋಸ್ಟಲ್ ಬ್ಯಾಲಟ್ ಗಳ ಎಣಿಕೆಯಲ್ಲಿ ಎನ್ ಡಿ ಎ ಮುಂದಿದ್ದರೂ ಅದು ಸುಮಾರು 40 ಸ್ಥಾನಗಳ ನಷ್ಟ ಅನುಭವಿಸಿದೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟ ಬಿಜೆಪಿಗಿಂತ ಹಿಂದಿದ್ದರೂ ಸಹ 2014ರ ಫಲಿತಾಂಶಕ್ಕೆ ಹೋಲಿಸಿ ನೋಡಿದಾಗ ಅದು ಈಗ ಸ್ವಲ್ಪ ಮಟ್ಟಿಗೆ ಗಳಿಸಿರುವುದನ್ನೂ ಸೂಚಿಸುತ್ತದೆ. ಯಾವ ಮೈತ್ರಿಕೂಟದ ಜೊತೆಗೂ ಸೇರಿಲ್ಲದ ಪ್ರಮುಖ ಪಕ್ಷಗಳಾದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಮತ್ತು ಕೆ.ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಇವು 2014ರಲ್ಲಿದ್ದ ಸ್ಥಿತಿಯಲ್ಲೇ ಇವೆ.
• ರಾಜ್ಯಗಳನ್ನು ಪರಿಗಣಿಸುವುದಾದರೆ, ಬಿಜೆಪಿ ಗುಜರಾತ್, ದೆಹಲಿ, ಬಿಹಾರ್ ಮತ್ತು ಮಹಾರಾಷ್ಟ್ರಗಳಲ್ಲಿ ಮುಂದಿದೆ. ಕಳೆದ ಆರು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಗೆದ್ದಿದ್ದಂತಹ ಮೂರು ಪ್ರಮುಖ ರಾಜ್ಯಗಳ ಪೈಕಿ ಎರಡು ರಾಜ್ಯಗಳಾದ ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.
• ದಕ್ಷಿಣ ಭಾರತದ ರಾಜ್ಯಗಳಲ್ಲಿ, ಕಾಂಗ್ರೆಸ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಜಾತ್ಯಾತೀತ ಜನತಾದಳ ಮೈತ್ರಿಕೂಟ ಸರ್ಕಾರವಿರುವ ಕರ್ನಾಟಕದಲ್ಲೂ ಬಿಜೆಪಿ ಸಾಕಷ್ಟು ಮುಂದಿದೆ. ಇಂದಿಗೆ ಈ ಮೈತ್ರಿ ಸರ್ಕಾರ ಒಂದು ವರ್ಷ ಪೂರೈಸಲಿದ್ದು, ಲೋಕಸಭೆ ಚುನಾವಣೆಗಳಲ್ಲಿ ಕಂಡುಬರುತ್ತಿರುವ ಶೋಚನೀಯ ಫಲಿತಾಂಶಗಳು ಇವೆರಡೂ ಪಕ್ಷಗಳ ಸ್ಥಳೀಯ ನಾಯಕತ್ವದ ಹಳಸಿದ ಸಂಬಂಧವನ್ನು ಮತ್ತಷ್ಟು ಹದಗೆಡಿಸಬಹುದೇ ವಿನಃ ಸುಧಾರಿಸುವುದು ಕಷ್ಟ.
• ಚುನಾವಣೋತ್ತರ ಸಮೀಕ್ಷೆಗಳು ಊಹಿಸಿದಂತೆ ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ತೋರಿಸುತ್ತಿದೆ. ಅದು ತಮಿಳುನಾಡಿನಲ್ಲೂ ಮುಂದಿದೆ. ಛತ್ತೀಸ್ಗಢದಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ನೇರ ಹಣಾಹಣಿಯಲ್ಲಿದೆ.
• ಲೋಕಸಭೆಗೆ ಅತಿಹೆಚ್ಚು ಸಂಸದರನ್ನು ಕಳುಹಿಸುವ ಉತ್ತರಪ್ರದೇಶದಲ್ಲಿ ಬಿಜೆಪಿಯು ಮಾಯಾವತಿ-ಅಖಿಲೇಶ್ ಯಾದವ್ ಮೈತ್ರಿಕೂಟಕ್ಕಿಂತ ಕೊಂಚ ಮುಂದಿದೆ. ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸಲು ಬಯಸುವ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೂ ಈ ರಾಜ್ಯದಲ್ಲಿ ಗೆಲವು ಸಾಧಿಸುವುದು ಅಗತ್ಯವಾಗಿದೆ.
• ಈ ಚುನಾವಣೆಯಲ್ಲಿ ಆಂಧ್ರಪ್ರದೇಶ ರಾಜ್ಯದ 25 ಕ್ಷೇತ್ರಗಳಿಗೆ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ವಿರುದ್ಧ ವೈಎಸ್ಆರ್ ಕಾಂಗ್ರೆಸ್ ತೀವ್ರ ಪೈಪೋಟಿ ಕೊಟ್ಟಿದೆ. ರಾಜ್ಯದ 175 ವಿಧಾನಸಭಾ ಸ್ಥಾನಗಳಲ್ಲೂ ಸಹ ವೈಎಸ್ಆರ್ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
• ಬಿಜೆಪಿಯ ಜೊತೆ ಸಮರ ಸಾರಿ ಹೋರಾಟ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿದ್ದಾರೆ. ಆದರೆ ಆಕೆ ನಿರೀಕ್ಷಿಸಿದ್ದಕ್ಕಿಂತಲೂ ಭಿನ್ನವಾಗಿ ಬಿಜೆಪಿ ಉತ್ತಮ ರೀತಿಯಲ್ಲೇ ಮುಂದೆ ಸಾಗಿರುವುದನ್ನು ಮೊದಲ ಎಣಿಕೆಗಳಲ್ಲಿ ಕಂಡ ಮುನ್ನಡೆಗಳು ಸೂಚಿಸುತ್ತವೆ. ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಬಿಜೆಪಿ ಗಳಿಸುವ ಸ್ಥಾನಗಳು ಅದು ಬೇರೆಡೆ ಕಳೆದುಕೊಳ್ಳಬಹುದಾದ ಸ್ಥಾನಗಳನ್ನು ತುಂಬಬಹುದೆಂದು ನಿರೀಕ್ಷಿಸಲಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಗಳಿಗೆ ಕೆಲವೇ ವಾರಗಳ ಹಿಂದೆ ಒಂದಾದ ಎಐಎಡಿಎಂಕೆ ಮತ್ತು ಬಿಜೆಪಿಗಳಿಗಿಂತ ಸಾಕಷ್ಟು ಮುಂದಿದೆ. ತಮಿಳುನಾಡಿನ 18 ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಗಳಲ್ಲಿ ಇದೇ ರೀತಿಯ ಫಲಿತಾಂಶವು ಇ.ಪಳನಿಸ್ವಾಮಿಯವರ ಎಐಎಡಿಎಂಕೆ ಸರ್ಕಾರವನ್ನು ಉರುಳಿಸಬಹುದಾದ ಎಲ್ಲಾ ಸಾಧ್ಯತೆಗಳೂ ಕಂಡುಬರುತ್ತಿವೆ.
ದೇಶದೆಲ್ಲೆಡೆ ಬಿರುಸಿನ ಮತ ಎಣಿಕೆ: ಇತ್ತೀಚಿನ ಟ್ರೆಂಡ್ ಕುರಿತು ಒಂದು ಪಕ್ಷಿನೋಟ
ರಾಜ್ಯಗಳನ್ನು ಪರಿಗಣಿಸುವುದಾದರೆ, ಬಿಜೆಪಿ ಗುಜರಾತ್, ದೆಹಲಿ, ಬಿಹಾರ್ ಮತ್ತು ಮಹಾರಾಷ್ಟ್ರಗಳಲ್ಲಿ ಮುಂದಿದೆ. ಕಳೆದ ಆರು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಗೆದ್ದಿದ್ದಂತಹ ಮೂರು ಪ್ರಮುಖ ರಾಜ್ಯಗಳ ಪೈಕಿ ಎರಡು ರಾಜ್ಯಗಳಾದ ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ
