ಸಿಯೋನಿ/ಮಧ್ಯ ಪ್ರದೇಶ: ಸ್ವಯಂ ಘೋಷಿತ ಗೋರಕ್ಷಕರ ಗುಂಪೊಂದು ಗೋ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಸೇರಿದಂತೆ ಮೂವರು ಮುಸ್ಲಿಮರನ್ನು ಅಮಾನವೀಯವಾಗಿ ಥಳಿಸಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಉನ್ಮತ್ತ ಗುಂಪು ಮುಸ್ಲಿಮರಿಗೆ, ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಡ ಹೇರಿದ್ದಾರೆ. ಈ ಹಲ್ಲೆ ದೌರ್ಜನ್ಯದ ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿದ್ದಾರೆ. ಘಟನೆಯು ಮೇ 22ರಂದೇ ನಡೆದಿದ್ದು ಪೊಲೀಸರಿಗೆ 24ರಂದು ತಿಳಿದು ಬಂದಿದೆ ಎನ್ನಲಾಗಿದೆ.
ಹಲ್ಲೆಗೊಳಗಾದ ಮುಸ್ಲಿಮರನ್ನು ತೌಫೀಕ್, ಅಂಜುಂ ಶಮಾ ಮತ್ತು ದಿಲೀಪ್ ಮಾಳವಿಯಾ ಎಂದು ಗುರುತಿಸಲಾಗಿದೆ.
ದುಂಡ ಸಿಯೋನಿ ಪೊಲೀಸ್ ಠಾಣಾಧಿಕಾರಿ ಗಣಪತ್ ಐಕಿ “ಮುಸ್ಲಿಂಮರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಮುಖ ಅಪರಾಧಿ ಶುಭಂ ಬಂಘೆಲ್ ಸೇರಿದಂತೆ ಯೋಗೇಶ್ ಐಕಿ, ದೀಪೇಶ್ ನಾಮದೇವ್, ರೋಹಿತ್ ಯಾದವ್ ಮತ್ತು ಶ್ಯಾಂ ಡೆಹ್ರಿಯಾರನ್ನು ಬಂಧಿಸಲಾಗಿದೆ. ಐವರ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 341, 294, 323 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರು ತುಫಿಕ್, ಅಂಜುಂ ಶಮಾ ಮತ್ತು ದಿಲೀಪ್ ಮಾಳವಿಯಾ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಅಡಿಪ್ರಕರಣದ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪರೀಕ್ಷೆಗಾಗಿ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಎಸ್ ಪಿ ಲಲಿತ್ ಶಂಕ್ಯಾವರ್ ತಿಳಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದಿದ್ದಾರೆ.
ಘಟನೆ ಹಿನ್ನೆಲೆ
ಮೇ22ರಂದು ತುಫಿಕ್, ಅಂಜುಂ ಶಮಾ ಮತ್ತು ದಿಲೀಪ್ ಮಾಳವಿಯಾ ಆಟೋರಿಕ್ಷಾ ಹಾಗೂ ದ್ಚಿಚಕ್ರ ವಾಹನದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದಾರೆಂದು ಮಾಹಿತಿ ತಿಳಿದ ಸ್ವಯಂಘೋಷಿತ ಗೋರಕ್ಷಕರು ಅವರನ್ನು ವಶಕ್ಕೆ ಪಡೆದು ಮನಬಂದಂತೆ ಥಳಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳು ಮುಸ್ಲಿಂ ಯುವಕರನ್ನು ಮರಕ್ಕೆ ಕಟ್ಟಿ ದೊಣ್ಣೆಯಲ್ಲಿ ಥಳಿಸಿ ಕ್ರೌರ್ಯತೆ ಮೆರೆದಿದ್ದಾರೆ. ಇದೆ ವೇಳೇ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಸಹ ಇಡೀ ಗೋರಕ್ಷಕರ ಗುಂಪು ಕೂಗುತ್ತಾ ಹಿಂಸಿಸಿದ್ದಾರೆ. ಮತ್ತೊಬ್ಬ ಗೋರಕ್ಷಕ ಮುಸ್ಲಿಂ ಮಹಿಳೆಯನ್ನೂ ಎಳೆದು ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೌಫಿಕ್, ಅಂಜುಂ ಶಮಾ ಮತ್ತು ದಿಲೀಪ್ ಮಾಳವಿಯಾ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಅಡಿ ಪ್ರಕರಣದ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಾಕಷ್ಟು ಪ್ರತಿರೋಧಗಳು ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಂಧಿತರ ಪರವಾಗಿ ಅವರ ಸಂಬಂಧಿ ದೂರು ಎಫ್ಐಆರ್ ದಾಖಲಿಸಿದ್ದರು. ಹಲ್ಲೆ ನಡೆಸಿದ ಪ್ರಮುಖ ಆರೋಪಿ ಶುಭಂ ಬೆಂಘೆಲ್ ಶ್ರೀರಾಮ ಸೇನೆಗೆ ಸೇರಿದವನು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
More Articles
By the same author