ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆರಿಸಿ ಬಂದಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಿಥುನ್ ರೈ ಅವರಿಗೆ ಭಜರಂಗ ದಳದ ಕಾರ್ಯಕರ್ತರು ಬಹಿರಂಗ ಕೊಲೆ ಬೆದರಿಕೆ ಹಾಕಿ ಘೋಷಣೆ ಕೂಗಿರುವ ವಿಡಿಯೋ ಒಂದು ವೈರಲ್ ಆಗಿದೆ.
ಇಲ್ಲಿಗೆ ಸಮೀಪದ ಪೊಳಲಿ ಬಡಕಬೈಲು ಏರಿಯಾದಲ್ಲಿ ಬಿಜೆಪಿ- ಭಜರಂಗದಳದ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಮಿಥುನ್ ರೈ ತಲೆ ತೆಗೆಯುತ್ತೇವೆ, ಕಾಲು ತೆಗೆಯುತ್ತೇವೆ ಎಂದು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದವರು ಕೇಸರಿ ಶಾಲು ಹೊದ್ದಿದ್ದು, ಕೈಯಲ್ಲಿ ಭಗವಾ ದ್ವಜ ಹಿಡಿದುಕೊಂಡಿರುವುದು ಮೊಬೈಲ್ ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ.
ಭಜರಂಗದಳ ಕಾರ್ಯಕರ್ತರು ತುಳು ಭಾಷೆಯಲ್ಲಿ ಕೂಗಿರುವ ಘೋಷಣೆಗಳು ಹೀಗಿವೆ
“ಮಗ ಮಗ ಮಿಥುನ್ ರೈ
ಬೋಳಿ ಮಗ ಮಿಥುನ್ ರೈ
ಭಜರಂಗದಳದ ಸುದ್ದಿಗೆ ಬಂದ್ರೆ
ಕೈಯನ್ನೂ ಕಡಿಯುತ್ತೇವೆ ಕಾಲನ್ನೂ ಕಡಿಯುತ್ತೇವೆ
ಅಗತ್ಯ ಬಿದ್ರೆ ತಲೆಯನ್ನೂ ಕಡಿಯುತ್ತೇವೆ
ಈ ಘೋಷಣೆಗಳನ್ನು ಒಬ್ಬ ಭಜರಂಗದಳದ ಕಾರ್ಯಕರ್ತ ರಸ್ತೆಯ ಪಕ್ಕದಲ್ಲಿ ನಿಂತು ಕೂಗುತ್ತಿದ್ದಂತೆ ನಾಲ್ಕಾರು ಕಾರ್ಯಕರ್ತರು ದನಿ ಗೂಡಿಸಿದ್ದಾರೆ.
ವಿಡಿಯೋ ವೀಕ್ಷಿಸಿ
ಬಿಜೆಪಿ-ಭಜರಂಗದಳ ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದ ಕಾರಣಕ್ಕೆ ತಲೆ ತೆಗೆಯುತ್ತೇವೆ ಎಂದು ಘೋಷಣೆ ಕೂಗಿರುವ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿರುವ ಕುರಿತು ಮಾಹಿತಿ ಇಲ್ಲ.
1st example for ur vote