ಹರಿಯಾಣದ ಗುರುಗ್ರಾಮದಲ್ಲಿ ಮೂವರು ಮುಸ್ಲಿಮರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಇದು “ಶೋಚನೀಯ”, ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು,” ಎಂದು ಕ್ರಿಕೆಟಿಗ ಹಾಗೂ ನೂತನ ಸಂಸದ ಗೌತಮ್ ಗಂಭೀರ್ ಮಾಡಿದ್ದ ಟ್ವೀಟ್ ಇದೀಗ ಸಾಕಷ್ಟು ಟೀಕೆ ಹಾಗೂ ಟ್ರೋಲ್ ಗೆ ಗುರಿಯಾಗಿದೆ.
ತಮ್ಮ ಮೇಲೆ ಬಿಜೆಪಿ ಬೆಂಬಲಿಗರಿಂದ ನಡೆಯುತ್ತಿರುವ ಟ್ರೋಲ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, “ಈ ಟ್ರೋಲ್ ಮತ್ತು ಟೀಕೆಗಳು ನನಗೇನೂ ಹೊಸತಲ್ಲ, ಅದರಿಂದ ನನಗೇನೂ ಸಮಸ್ಯೆ ಇಲ್ಲ ಮತ್ತು ನಾನು ಮುಂದೆಯೂ ಕಪ್ಪು, ಬಿಳುಪಿನಂತೆಯೇ ಇರುತ್ತೇನೆ. ಸುಳ್ಳುಗಳ ಹಿಂದೆ ಅವಿತುಕೊಳ್ಳುವುದಕ್ಕಿಂತ ಸತ್ಯ ಹೇಳುವುದು ಬಹಳ ಸುಲಭ,” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
25 ವರ್ಷದ ಮೊಹಮ್ಮದ್ ಬರ್ಕತ್ ಅಸ್ಲಂ ಮೇಲೆ ನಡೆದ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೌತಮ್, “ಶನಿವಾರ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುವ ವೇಳೆ ಅಸ್ಲಂ ತೊಟ್ಟಿದ್ದ ಮುಸಲ್ಮಾನರು ಹಾಕುವ ಬಿಳುಪಿನ ಟೋಪಿ (ಸ್ಕಲ್ ಕ್ಯಾಪ್ )ಯನ್ನು ಒತ್ತಾಯಪೂರ್ವಕವಾಗಿ ತೆಗೆದು ಬಿಸಾಕಿದ್ದಾರೆ,” ಎಂದು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಮೊದಲು ಟ್ವೀಟ್ ಮಾಡಿದ್ದರು.
“ಗುರುಗ್ರಾಮದ ಮುಸ್ಲಿಂ ವ್ಯಕ್ತಿಗೆ ಸ್ಕಲ್ ಕ್ಯಾಪ್ ತೆಗೆಯಲು ಆಗ್ರಹಿಸಿದ್ದಾರೆ, ಅಲ್ಲದೇ ಜೈ ಶ್ರೀ ರಾಮ್ ಮಂತ್ರ ಪಠಿಸುವಂತೆ ಸಹ ಒತ್ತಡ ಹೇರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳಬೇಕು. ಜಾವೇದ್ ಅಕ್ತರ್ ‘ಓ ಪಾಲನ್ ಹರೇ, ನಿರ್ಗುಣ್ ಔರ್ ನ್ಯಾರೆ’ ಎಂದೂ ಮತ್ತು ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರು ಡೆಲ್ಲಿ 6 ಚಿತ್ರದ ಗೀತೆಯಲ್ಲಿ ಅರ್ಜಿಯಾನ್ ಹಾಡಿನ ಸಾಹಿತ್ಯ ಬರೆಯುವ ನಮ್ಮದು ಜಾತ್ಯತೀತ ರಾಷ್ಟ್ರ ನಮ್ಮದು” ಎಂದು ಎಂದು ಗೌತಮ್ ಗಂಭೀರ್ ತಮ್ಮ ಟ್ವೀಟಿನಲ್ಲಿ ಬರೆದಿದ್ದರು.
“In Gurugram Muslim man told to remove skullcap,chant Jai Shri Ram”.
It is deplorable. Exemplary action needed by Gurugram authorities. We are a secular nation where @Javedakhtarjadu writes “ओ पालन हारे, निर्गुण और न्यारे” & @RakeyshOmMehra gave us d song “अर्ज़ियाँ” in Delhi 6.— Gautam Gambhir (@GautamGambhir) May 27, 2019
ಗೌತಮ್ ಅವರ ಈ ಟ್ವೀಟ್ ಗೆ 8000ಕ್ಕೂ ಹೆಚ್ಚು ರಿಟ್ವೀಟುಗಳು, 55,000ಕ್ಕೂ ಹೆಚ್ಚು ಲೈಕುಗಳು ಬಂದಿದ್ದವು.
ತಮ್ಮ ಟ್ವೀಟ್ ಮೂಲಕ ಗುರುಗ್ರಾಮದಲ್ಲಿ ನಡೆಸಿದ್ದ ದೌರ್ಜನ್ಯವನ್ನು ಖಂಡಿಸಿ, ಜಾತ್ಯತೀತತೆಯ ಸಂದೇಶ ನೀಡಿದ್ದ ಗೌತಮ್ ಗಂಭೀರ್ ಅವರಿಗೆ ಬೆಂಬಲಿಸುವ ಪ್ರತಿಕ್ರಿಯೆಗಳಂತೆಯೇ ವಿರೋಧಿಸುವ, ಮನಬಂದಂತೆ ಟೀಕಿಸುವು, ನಿಂದಿಸುವ ಪ್ರತಿಕ್ರಿಯೆಗಳೂ ದೊರೆತಿದ್ದವು.
ಮೂರು ಗಂಟೆ ನಂತರ ಮತ್ತೊಂದು ಟ್ವೀಟ್ ಮಾಡಿದ ಗೌತಮ್, “ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರ ‘ಸಬಕಾ ಸಾತ್, ಸಬ್ ಕಾ ವಿಕಾಸ್, ಸಬಕಾ ವಿಶ್ವಾಸ್,’ ನಿಂದ ನನ್ನಲ್ಲಿ ಜಾತ್ಯಾತೀತತೆ ಎಂಬ ಆಲೋಚನೆ ಹುಟ್ಟಿಕೊಂಡಿದೆ. ಗುರುಗ್ರಾಮ ಘಟನೆಗೆ ನನ್ನನ್ನು ನಾನು ಸೀಮಿತಗೊಳಿಸಿಕೊಳ್ಳುವುದಿಲ್ಲ, ಯಾವುದೇ ಧರ್ಮ/ಜಾತಿಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ದೌರ್ಜನ್ಯವನ್ನು ಖಂಡಿಸುತ್ತೇನೆ. ಸಹಿಷ್ಣತೆ ಮತ್ತು ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಯ ತತ್ವದಲ್ಲಿಯೇ ಭಾರತ ಇರುವುದು” ಎಂದಿದ್ದಾರೆ.
My thoughts on secularism emanate from honourable PM Mr Modi’s mantra “सबका साथ, सबका विकास, सब का विश्वास”. I am not limiting myself to Gurugram incident alone, any oppression based on caste/religion is deplorable. Tolerance & inclusive growth is what idea of India is based on.
— Gautam Gambhir (@GautamGambhir) May 27, 2019
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಗಂಭೀರ್, “ನಾನೊಬ್ಬ ಕ್ರಿಕೆಟಿಗನಾಗಿ ವಿಮರ್ಶೆ, ಟೀಕೆಗಳು ನನಗೆ ಹೊಸತೇನಲ್ಲ, ನನಗಿದು ಅಭ್ಯಾಸವಾಗಿದೆ. ಆದ್ದರಿಂದ ಟ್ರೋಲ್ ಹಾಗೂ ವಿಮರ್ಶೆಗಳು ನನಗೇನೂ ಸಮಸ್ಯೆ ಎನಿಸುವುದಿಲ್ಲ. ಮುಂದೆಯೂ ಕಪ್ಪು, ಬಿಳುಪಿನಂತೆಯೇ ಇರುತ್ತೇನೆ. ಬೂದು ಬಣ್ಣ ನನಗೆ ಅಷ್ಟೇನೂ ಇಷ್ಟವಾಗುವುದಿಲ್ಲ, ನಿಜ ಹೇಳಬೇಕೆಂದರೆ ನನ್ನ ವಾರ್ಡ್ರೋಬ್ ನಲ್ಲಿ ಸಹ ಬೂದು ಬಣ್ಣದ ಬಟ್ಟೆಗಳು ಇಲ್ಲ. ಸುಳ್ಳುಗಳ ಹಿಂದೆ ಅವಿತುಕೊಳ್ಳುವುದಕ್ಕಿಂತ ಸತ್ಯವನ್ನು ಹೇಳುವುದು ತುಂಬಾ ಸುಲಭ, ಎಲ್ಲರನ್ನು ಒಳಗೊಂಡ ಬೆಳವಣಿಗೆ ಎಲ್ಲರನ್ನು ತುಂಬಾ ದೂರಕ್ಕೆ ಕೊಂಡೊಯ್ಯುತ್ತದೆ, ನಮ್ಮ ಪ್ರಧಾನಿಯಂತೆ” ಎಂದಿದ್ದಾರೆ.
ಮೋದಿ ಹೇಳುವಂತೆ, ‘ಸಬಕಾ ಸಾತ್, ಸಬ್ ಕಾ ವಿಕಾಸ್ ಮತ್ತು ಸಬಕಾ ವಿಶ್ವಾಸ್,’. ರಕ್ಷಣೆ ಇದೆ ಎಂದು ಜನತೆ ಅಂದುಕೊಳ್ಳದಿದ್ದರೆ ಎಲ್ಲರ ನಂಬಿಕೆಯನ್ನು ಗಳಿಸಲು ಹೇಗೆ ಸಾಧ್ಯ?, ಅದರಲ್ಲೂ ಆದ್ಯತೆಯ ಒಂದೇ ಧರ್ಮವನ್ನು ಪಾಲಿಸುತ್ತಾ.
“ಮತ್ತೊಂದು ವಿಷಯವನ್ನು ಹೇಳಲು ಇಚ್ಚಿಸುತ್ತೇನೆ, ಗುರುಗ್ರಾಮದಲ್ಲಿ ನಡೆದ ಘಟನೆಗೆ ನನ್ನ ಪ್ರತಿರೋಧವನ್ನು ಸೀಮಿತಗೊಳಿಸಿಕೊಳ್ಳುವುದಿಲ್ಲ. ಗುರುಗ್ರಾಮ ಘಟನೆಯು ಚಿತ್ರಹಿಂಸೆ, ದ್ವೇಷ ಮತ್ತು ಯಾವುದೇ ರೀತಿಯ ದಬ್ಬಾಳಿಕೆ ಎಲ್ಲವನ್ನು ಪ್ರತಿನಿಧಿಸುವ ಒಂದು ಪ್ರಮುಖ ಕೃತ್ಯವಾಗಿದೆ,” ಎಂದೂ ಗಂಭೀರ್ ಖಂಡಿಸಿದ್ದಾರೆ.
ಆದರೆ ಗಂಭೀರ್ ಅವರ ಈ ಬಗೆಯ ನಿಲುವುಗಳಿಕೆ ಕೇಸರಿ ಪಕ್ಷ ಎನಿಸಿರುವ ಹಿಂದೂ-ಮುಸ್ಲಿಂ ವಿಭಜನೆಯ ಮೇಲೆಯೇ ಅಧಿಕಾರ ನಡೆಸುವ ಬಿಜೆಪಿ ಒಳಗಿನಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ಗಂಭೀರ್ ಹೇಳಿರುವ ಸಾಮರಸ್ಯ ಸಂದೇಶಗಳು ಮಹಾಪರಾಧ ಎಂಬಂತೆ ಕೆಲವರು ಮಾತಾಡುತ್ತಿದ್ದಾರೆ.
ಬಿಜೆಪಿ ಪಕ್ಷದ ಸಂಸದರಾಗಿ ಗೌತಮ್ ಪ್ರತಿಕ್ರಿಯೆ ಸಮರ್ಥನೀಯವಲ್ಲ ಎಂದಿರುವ ಪಕ್ಷದ ಹಿರಿಯ ನಾಯಕರು ಹರ್ಯಾಣ ಬಿಜೆಪಿ ಆಡಳಿತದ ರಾಜ್ಯವಾಗಿದ್ದು, ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಬಾರದು ಖಂಡಿಸಿದ್ದಾರೆ.
“ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಸತ್ಯಸಂಗತಿಯ ಬಗ್ಗೆ ಇನ್ನೂ ಪರಿಶೀಲಿಸಲಾಗುತ್ತಿದೆ,” ಆದ್ದರಿಂದ ಗೌತಮ್ ಗಂಭೀರ್ ತಮ್ಮ ಟ್ವೀಟ್ ಅನ್ನು ಹಿಂಪಡೆಯಬೇಕು ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಅಲ್ಲದೇ, ಇಂತಹ ಹೇಳಿಕೆಗಳು ರಾಜ್ಯದಲ್ಲಿರುವ ವಿಪಕ್ಷಗಳಿಗೆ ಯುದ್ಧ ಸಾಮಗ್ರಿಗಳಂತೆ, ನಮ್ಮನ್ನು ಟೀಕಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ಘಟನೆ ಸಂಬಂಧ ಬಿಜೆಪಿ ಸಹ ಅಧಿಕೃತವಾಗಿ ಗಂಭೀರ್ ಗಿಂತ ವಿಭಿನ್ನ ನಿಲುವನ್ನು ತಳೆದಿದೆ. “ಗುರುಗ್ರಾಮದಲ್ಲಿ ನಡೆದ ವಾದ-ಪ್ರತಿವಾದಕ್ಕೆ ಕೆಲವರು ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವೆ ನಡೆಯುವ ಪ್ರತಿ ಗದ್ದಲವನ್ನು ರಾಜಕೀಯವಾಗಿ ದೇಶವನ್ನು ಇಬ್ಬಾಗ ಮಾಡುವಂತೆ ಬಿಂಬಿಸಲಾಗುತ್ತಿದೆ. ಪೊಲೀಸರಿಗೆ ಮುಸ್ಲಿಂ ಗುಂಪಿನವರು ಕರೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿದೆಯೇ ಹೊರತು, ಹಿಂದೂ-ಮುಸ್ಲಿಂ ಎಂದು ಎಲ್ಲೂ ಉಲ್ಲೇಖವಿಲ್ಲ. ಆದರೆ ನಂತರ ಹಿಂದೂ-ಮುಸ್ಲಿಂ ಎಂಬ ಧರ್ಮದ ಬಣ್ಣ ಬಳಿದಿದ್ದಾರೆ,” ಎಂದು ಬಿಜೆಪಿ ಪಕ್ಷದ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಟ್ವೀಟ್ ಮಾಡಿದ್ದಾರೆ.
ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸಹ ಪ್ರತಿಕ್ರಿಯಿಸಿದ್ದು, ಗಂಭೀರ್ ಅವರು ತುಂಬಾ ‘ಮುಗ್ದತೆ’ಯಿಂದ ಟ್ವೀಟ್ ಮಾಡಿದ್ದಾರೆ. ನಮ್ಮ ಪ್ರಧಾನಿ ಮೋದಿ ಅವರ ಧ್ಯೇಯವಾಕ್ಯ ‘ಸಬಕಾ ಸಾತ್, ಸಬ್ ಕಾ ವಿಕಾಸ್ ಮತ್ತು ಸಬಕಾ ವಿಶ್ವಾಸ್, ಅನ್ನು ನಂಬಿದ್ದೇವೆ. ಈ ಘಟನೆ ಬಗ್ಗೆ ಹೇಳುವುದಾದರೆ, ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಲಿದ್ದಾರೆ ಎಂದಷ್ಟೇ ನಾನೀಗ ಹೇಳಲು ಸಾಧ್ಯ,” ಎಂದು ಪ್ರತಿಕ್ರಿಯಿಸಿದ್ದಾರೆ.
“ನಾನು ದೇಶದ ಜನತೆಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಇದೀಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಕೆಲವು ವರ್ಗದ ಜನರು ಘಟನೆಗಳಿಗೆ ಕೋಮುವಾದದ ಬಣ್ಣ ಬಳಿಯಲು ಪ್ರಯತ್ನಿಸುತ್ತಾರೆ. ಪ್ರಜೆಗಳು ಎಚ್ಚರಿಕೆ ಇಂದ ಇರಬೇಕಿದೆ, ಇಂತಹ ಹೇಳಿಕೆಗಳಿಗೆ ವಿಚಲಿತರಾಗಬೇಡಿ,” ಎಂದೂ ಸಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಖ್ಯಾತ ಬಾಲಿವುಡ್ ನಿರ್ದೇಶಕ ಹಾಗೂ ಬಿಜೆಪಿ ಬೆಂಬಲಿಗರಾದ ಅನುಪಮ್ ಖೇರ್ ಸಹ ಟ್ವೀಟ್ ಮಾಡಿ ಗೌತಮ್ ಗಂಭೀರ್ ಗೆ ಪುಕ್ಕಟೆ ಸಲಹೆಯೊಂದನ್ನು ನೀಡಿದ್ದಾರೆ. “ಮೀಡಿಯಾಗಳಲ್ಲಿನ ಒಂದು ವರ್ಗವನ್ನು ಖುಷಿಪಡಿಸಲು ಗುಂಡಿಗೆ ಬೀಳಬೇಡ, ನಿನ್ನ ಕೆಲಸದ ಮೂಲಕ ಮಾತಾಡು, ಹೇಳಿಕೆಗಳ ಮೂಲಕ ಅಲ್ಲ” ಎಂದು ಅವರು ತಿಳಿಹೇಳಿದ್ದಾರೆ.
Dear @GautamGambhir !! Congratulations on your win. As a passionate Indian it made me very happy. Not that you have asked for my advise but still- Don’t get into a trap of getting popular with a section of media. It is your work that will speak. Not necessarily your statements.🙏
— Anupam Kher (@AnupamPKher) May 28, 2019