17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿ ಇದೀಗ ಅಧಿಕೃತವಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಮೇ 30ರ ಸಂಜೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಎಎಪಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿಶ್ವದ ನಾಯಕರು, ಚಲನಚಿತ್ರ ರಂಗದ ನಟನಟಿಯರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ರಾಜಕಾರಣಿಗಳು ಹಾಗೂ ಪಶ್ಚಿಮ ಬಂಗಾಳ ಗಲಭೆಯಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬವರ್ಗದವರು ಮೋದಿ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದರು. ಈ ಸಮಾರಂಭದಲ್ಲಿ ಬರೋಬ್ಬರಿ ಎಂಟು ಸಾವಿರಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರೆಂದು ಅಂದಾಜಿಸಲಾಗಿದೆ.
ಇದೇ ಮೊದಲ ಬಾರಿಗೆ ರಿಟಾ ಬಹುಗುಣ ಜೋಷಿ, ಸುಬ್ರತ್ ಪತಕ್, ರತನ್ ಲಾಲ್ ಕಟಾರಿಯಾ, ರಮೇಶ್ ಪೊಕ್ರಿಯಾಲ್ ನಿಶಾಂಕ್, ಆರ್ ಸಿಪಿ ಸಿಂಗ್, ಜಿ ಕೃಷ್ಣ ರೆಡ್ಡಿ, ಸ್ಯಾಮ್ ಪ್ರಕಾಶ್, ದೆಬೋಶ್ರೀ ಚೌಧರಿ ಸೇರಿದಂತೆ ಹಲವರು ಸಂಸತ್ ಪ್ರವೇಶಿಸಲಿದ್ದಾರೆ.
2014ರ ಕೇಂದ್ರ ಸಚಿವ ಸಂಪುಟದಲ್ಲಿದ್ದ ಹಲವು ಪ್ರಭಾವಿ ಸಚಿವರನ್ನು ಈ ಬಾರಿಯ ಸಚಿವ ಸಂಪುಟದಿಂದ ಹೊರಗಿಡಲಾಗಿದೆ.
ಹಿರಿಯ ಬಿಜೆಪಿ ಮುಖಂಡರುಗಳಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜ್ಯವರ್ಧನ್ ರಾಥೋಡ್, ಮನೇಕಾ ಗಾಂಧಿ, ಜಯಂತ್ ಸಿನ್ಹಾ, ಜೆ ಪಿ ನಡ್ಡಾ ಅವರುಗಳ ಹೆಸರುಗಳನ್ನು ಕಾರಣಾಂತರಗಳಿಂದ ಸಚಿವ ಸಂಪುಟದಿಂದ ಕೈಬಿಡಲಾಗಿದೆ.
ಅರುಣ್ ಜೇಟ್ಲಿ ಅವರು ಕಳೆದ ಬಾರಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದವರು, ಕಳೆದ 18 ತಿಂಗಳಿನಿಂದ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ನೂತನ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುವುದಿಲ್ಲ ಎಂದು ಮೋದಿ ಅವರಿಗೆ ಜೇಟ್ಲಿ ಪತ್ರದ ಮೂಲಕ ತಿಳಿಸಿದ್ದರು.
ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಖಾತೆಯ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ನಿನ್ನೆಯ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸ್ಥಾನದಲ್ಲಿ ಕುಳಿತಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಪ್ರಭಾವಿ ನಾಯಕಿ ಸುಷ್ಮಾ ಸಚಿವ ಸಂಪುಟದಿಂದ ತಾವು ಹೊರಗುಳಿದಿರುವ ಸಂದೇಶವನ್ನು ರವಾನಿಸಿದ್ದಾರೆ.
ಒಟ್ಟಾರೆ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಎರಡನೇ ಅವಧಿಯ ಸರ್ಕಾರದ ಕೇಂದ್ರ ಮಂತ್ರಿಮಂಡಲದಲ್ಲಿ 25 ಸಂಪುಟ, 9 ರಾಜ್ಯ ಸಚಿವ (ಸ್ವತಂತ್ರ ಖಾತೆ), 24 ರಾಜ್ಯ ಸಚಿವರನ್ನು ನೇಮಿಸಿಕೊಳ್ಳಲಾಗಿದೆ. ಕರ್ನಾಟಕದ ಇಬ್ಬರಿಗೆ ಸಂಪುಟ ದರ್ಜೆಯ ಸ್ಥಾನ, ಒಬ್ಬರಿಗೆ ರಾಜ್ಯ ಖಾತೆ ಸ್ಥಾನ ದಕ್ಕಿದೆ.

ಕೇಂದ್ರದ ಸಚಿವ ಸಂಪುಟದಲ್ಲಿ ಇದೀಗ ಅಧಿಕೃತವಾಗಿ ಸೇರ್ಪಡೆಗೊಂಡಿರುವ ಸಂಸದರ ಪಟ್ಟಿ ಹೀಗಿದೆ:
1. ನರೇಂದ್ರ ಮೋದಿ
2. ರಾಜನಾಥ್ ಸಿಂಗ್
3. ಅಮಿತ್ ಶಾ
4. ನಿತಿನ್ ಗಡ್ಕರಿ
5. ಡಿವಿ ಸದಾನಂದ ಗೌಡ (ಕರ್ನಾಟಕದ ಸಂಸದ)
6. ನಿರ್ಮಲಾ ಸೀತಾರಾಮನ್ (ರಾಜ್ಯಸಭಾ ಸದಸ್ಯೆ, ಕರ್ನಾಟಕ)
7. ರಾಮ್ ವಿಲಾಸ್ ಪಾಸ್ವಾನ್ (ಎಲ್ ಜೆಪಿ)
8. ನರೇಂದ್ರ ಸಿಂಗ್ ತೊಮಾರ್
9. ರವಿಶಂಕರ್ ಪ್ರಸಾದ್
10. ಹರ್ ಸಿಮ್ರತ್ ಕೌರ್ ಬಾದಲ್ (ಶಿರೋಮಣಿ ಅಕಾಲಿ ದಳ)
11. ತಾವರ್ ಚಂದ್ ಗೆಹ್ಲೋಟ್
12. ಎಸ್ ಜೈಶಂಕರ್
13. ರಮೇಶ್ ಪೊಕ್ರಿಯಾಲ್ ನಿಶಾಂತ್ (ಉತ್ತರಾಖಂಡ ಮಾಜಿ ಸಿಎಂ)
14. ಅರ್ಜುನ್ ಮುಂಡಾ
15. ಸ್ಮೃತಿ ಇರಾನಿ
16. ಡಾ. ಹರ್ಷ ವರ್ಧನ್
17. ಪ್ರಕಾಶ್ ಜಾವಡೇಕರ್
18. ಪಿಯೂಷ್ ಗೋಯೆಲ್
19. ಧರ್ಮೇಂದ್ರ ಪ್ರಧಾನ್
20. ಮುಖ್ತಾರ್ ಅಬ್ಬಾಸ್ ನಖ್ವಿ
21. ಪ್ರಹ್ಲಾದ್ ಜೋಶಿ (ಕರ್ನಾಟಕದ ಸಂಸದ)
22. ಡಾ. ಮಹೇಂದ್ರನಾಥ್ ಪಾಂಡೆ
23. ಅರವಿಂದ್ ಗಣಪತ್ ಸಾವಂತ್ (ಶಿವಸೇನಾ)
24. ಗಿರಿರಾಜ್ ಸಿಂಗ್
25. ಗಜೇಂದ್ರ ಸಿಂಗ್ ಶೇಖಾವತ್
26. ಸಂತೋಷ್ ಕುಮಾರ್ ಗಂಗ್ವಾರ್ (ರಾಜ್ಯ ಸಚಿವ, ಸ್ವತಂತ್ರ ಖಾತೆ)
27. ಇಂದ್ರಜಿತ್ ಸಿಂಗ್
28. ಶ್ರೀಪಾದ್ ಯಶೋದ್ ನಾಯ್ಕ್
29. ಜಿತೇಂದ್ರಸಿಂಗ್
30. ಕಿರಣ್ ರಿಜಿಜು
31. ಪ್ರಹ್ಲಾದ್ ಸಿಂಗ್ ಪಟೇಲ್
32. ರಾಜ್ ಕುಮಾರ್ ಸಿಂಗ್.
33. ಹರ್ ದೀಪ್ ಸಿಂಗ್ ಪುರಿ.
34. ಮನ್ಸುಖ್ ಲಾಲ್ ಮಾಂಡವಿಯಾ
35. ಫಗ್ಗನ್ ಸಿಂಗ್ ಕುಲಸ್ಥೆ
36. ಅಶ್ವಿನ್ ಕುಮಾರ್ ಚೌಬೆ
37. ಅರ್ಜುನ್ ರಾಮ್ ಮೇಘವಾಲ್
38. ವಿ ಕೆ ಸಿಂಗ್ ಜನರಲ್ (ನಿವೃತ್ತ ಸೇನಾಧಿಕಾರಿ)
39. ಕೃಷ್ಣಪಾಲ್ ಗುರ್ಜರ್
40. ರಾವ್ ಸಾಹೇಬ್ ದಾದಾರಾವ್
41. ಗಂಗಾಪುರಂ ಕಿಶನ್ ರೆಡ್ಡಿ
42. ಪುರುಷೋತ್ತಮ್ ರುಪಾಲ
43. ರಾಮದಾಸ್ ಅಠಾವುಳೆ
44. ಸಾಧ್ವಿ ನಿರಂಜನ ಜ್ಯೋತಿ
45. ಬಾಬುಲ್ ಸುಪ್ರಿಯೊ
46. ಡಾ. ಸಂಜೀವ್ ಕುಮಾರ್ ಬಾಲಿಯಾನ್
47. ಧೋತ್ರೆ ಸಂಜಯ್ ರಾಮರಾವ್
48. ಅನುರಾಗ್ ಸಿಂಗ್ ಠಾಕೂರ್
49. ಸುರೇಶ್ ಅಂಗಡಿ (ಕರ್ನಾಟಕ ಸಂಸದ)
50. ನಿತ್ಯಾನಂದ್ ರಾಯ್
51. ರತನ್ ಲಾಲ್ ಕಟಾರಿಯಾ
52. ವಿ ಮುರಳೀಧರನ್
53. ರೇಣುಕಾ ಸಿಂಗ್ ಸರುತಾ
54. ಸೋಮ್ ಪ್ರಕಾಶ್
55. ರಾಮೇಶ್ವರ್ ತೇಲಿ
56. ಪ್ರತಾಪ್ ಚಂದ್ರ ಸಾರಂಗಿ
57. ಕೈಲಾಶ್ ಚೌಧರಿ
58. ದೇವಶ್ರೀ ಚೌಧರಿ
More Articles
By the same author