2019ರ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಒಟ್ಟು ವೆಚ್ಚದಲ್ಲಿ ಶೇಕಡಾ 45ರಷ್ಟನ್ನು ಬಿಜೆಪಿ ಪಕ್ಷ ಮಾತ್ರವೇ ಖರ್ಚು ಮಾಡಿದೆ, ಇದು ₹27,000 ಕೋಟಿ ರೂಪಾಯಿಗಳಾಗುತ್ತದೆ ಎಂದು ಪ್ರತಿಷ್ಠಿತ ಚುನಾವಣಾ ಅಧ್ಯಯನ ಸಂಸ್ಥೆಯಾದ ಸಿಎಂಎಸ್ (ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್) ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.
2019ರ ಚುನಾವಣೆಯಲ್ಲಿ ಒಟ್ಟು 60,000 ಕೋಟಿ ರೂಪಾಯಿಯಷ್ಟು ಹಣದ ಹೊಳೆ ಹರಿದಿದೆ; ಅದರಲ್ಲಿ ಬಿಜೆಪಿಯದು ಸಿಂಹಪಾಲು. “ಇಷ್ಟು ಪ್ರಮಾಣದ ಹಣವನ್ನು ಇದುವರೆಗೆ ಎಲ್ಲಿಯೂ ಯಾರೂ ವ್ಯಯಿಸಿಲ್ಲ” ಎಂದು ವರದಿ ತಿಳಿಸಿದೆ.
ಇದೇ ಸ್ಥಿತಿ ಮುಂದುವರಿದರೆ 2024ರ ಚುನಾವಣೆಯಲ್ಲಿ 1 ಲಕ್ಷ ಕೋಟಿ ರೂಪಾಯಿಗಳ (₹1ಟ್ರಿಲಿಯನ್) ವೆಚ್ಚವನ್ನು ನಿರೀಕ್ಷಿಸಬಹುದು ಎಂದು ಸಿಎಂಎಸ್ ಸಂಸ್ಥೆಯ ಎನ್ ಭಾಸ್ಕರ್ ರಾವ್ ತಿಳಿಸಿದ್ದಾರೆ. “ಚುನಾವಣಾ ವೆಚ್ಚವನ್ನು ಎಗ್ಗಿಲ್ಲದೇ ಹೆಚ್ಚಿಸುವುದರಲ್ಲಿಯೇ ಎಲ್ಲಾ ಭ್ರಷ್ಟಾಚಾರಗಳ ತಾಯಿಯಿದ್ದಾಳೆ” ಎನ್ನುವ ಭಾಸ್ಕರ್ ರಾವ್, “ಇದನ್ನು ನಾವು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಅಸಾಧ್ಯ, ಈ ಮಟ್ಟದ ಚುನಾವಣಾ ವೆಚ್ಚ ನಮ್ಮನ್ನು ಭಯಗೊಳಿಸಬೇಕು ಅಲ್ಲದೇ ಗಟ್ಟಿಯಾದ ಪ್ರಜಾಪ್ರಭುತ್ವವೊಂದನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು” ಎಂದಿದ್ದಾರೆ.
1998ರ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಚುನಾವಣಾ ವೆಚ್ಚದ ಶೇಕಡಾ 20ರಷ್ಟು ಖರ್ಚು ಮಾಡಿತ್ತು, 2019ರಲ್ಲಿ ಅದು 40% ಖರ್ಚು ಮಾಡಿದೆ. 2009ರಲ್ಲಿ ಕಾಂಗ್ರೆಸ್ 40% ಹಣ ಖರ್ಚು ಮಾಡಿದ್ದರೆ 2019ರಲ್ಲಿ 15-20% ಹಣವನ್ನು ಖರ್ಚು ಮಾಡಿದೆ ಎಂದು ವರದಿ ತಿಳಿಸಿದೆ.
ಪೂರಕ ಮಾಹಿತಿ, ಕ್ಷೇತ್ರ ಅಧ್ಯಯನ ಮತ್ತು ವಿಶ್ಲೇಶಣೆ ಇತ್ಯಾದಿಗಳ ಮೂಲಕ ಸಿದ್ಧಪಡಿಸಲಾದ ವರದಿಯ ಲೆಕ್ಕಾಚಾರಗಳ ಪ್ರಕಾರ ಪ್ರತಿ ಮತದಾರನ ಮೇಲೆ 700 ರೂಪಾಯಿಗಳನ್ನು ವ್ಯಯಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾರಸಿ 100 ಕೋಟಿಗಳಾಗುತ್ತದೆ. ವರದಿಯ ಪ್ರಕಾರ 12,000ದಿಂದ 15,000 ಕೋಟಿ ರೂಪಾಯಿಗಳನ್ನು ಮತದಾರರಿಗೆ ನೇರವಾಗಿ ಹಂಚಲಾಗಿದ್ದರೆ 20ರಿಂಧ 25 ಸಾವಿರ ಕೋಟಿ ರೂಪಾಯಿಗಳನ್ನು ಪ್ರಚಾರಕ್ಕಾಗಿ ವ್ಯಯಿಸಲಾಗಿದೆ. ಅಧಿಕೃತ ಚುನಾವಣಾ ವೆಚ್ಚ 10ರಿಂದ 12 ಸಾವಿರ ಕೋಟಿ ರೂಪಾಯಿಗಳು ಎಂದು ವರದಿ ತಿಳಿಸಿದೆ.
2019ರಲ್ಲಿ ನಡೆದ ಚುನಾವಣೆ ಒಂದು “ತಿರುವು ಬಿಂದು” ಎಂದು ಪರಿಗಣಿಸಲ್ಪಟ್ಟ ಚುನಾವಣೆ ಎಂದು ತಿಳಿಸಿದರುವ ವರದಿಯು ಈ ಚುನಾವಣೆಯಲ್ಲಿ ಹರಿದ ಹಣದ ಪ್ರಧಾನ ಮೂಲ ಕಾರ್ಪೊರೇಟ್ ಮೂಲ ಎಂದು ತಿಳಿಸಿದೆ.
More Articles
By the same author